ಇಸ್ಲಾಮಾಬಾದ್: ಪಾಕಿಸ್ತಾನ ತನ್ನ ಜೈಲುಗಳಲ್ಲಿರುವ 319 ಭಾರತೀಯ ಕೈದಿಗಳ ಪಟ್ಟಿಯನ್ನು ಭಾರತದ ಹೈಕಮಿಷನ್ಗೆ ಶುಕ್ರವಾರ ಸಲ್ಲಿಸಿತು.

49 ಜನ ನಾಗರಿಕರು ಹಾಗೂ 270 ಮೀನುಗಾರರನ್ನು ದೇಶದ ವಿವಿಧ ಜೈಲುಗಳಲ್ಲಿರಿಸಲಾಗಿದೆ ಎಂದು ಪಾಕಿಸ್ತಾನದ ವಿದೇಶಾಂಗ ಕಚೇರಿ (ಎಫ್ಒ) ತಿಳಿಸಿದೆ.

ಇದಕ್ಕೆ ಪ್ರತಿಯಾಗಿ, ಭಾರತವು ತನ್ನ ಜೈಲುಗಳಲ್ಲಿರುವ ಪಾಕಿಸ್ತಾನದ ಕೈದಿಗಳ ಹೆಸರಿರುವ ಪಟ್ಟಿಯನ್ನು ಒದಗಿಸಿದೆ. 263 ನಾಗರಿಕರು, 77 ಜನ ಮೀನುಗಾರರು ಸೇರಿದಂತೆ ಒಟ್ಟು 340 ಜನ ಕೈದಿಗಳು ದೇಶದ ವಿವಿಧ ಜೈಲುಗಳಲಿದ್ದಾರೆ ಎಂದು ಭಾರತ ತಿಳಿಸಿದೆ.

ಉಭಯ ದೇಶಗಳ ಜೈಲುಗಳಲ್ಲಿರುವ ಕೈದಿಗಳ ಪಟ್ಟಿಯನ್ನು ವಿನಿಮಯ ಮಾಡಿಕೊಳ್ಳಬೇಕು ಎಂಬ ನಿಟ್ಟಿನಲ್ಲಿ 2008ರ ಮೇ 21ರಂದು ಎರಡೂ ದೇಶಗಳ ನಡುವೆ ಒಪ್ಪಂದವಾಗಿದೆ. ಈ ಒಪ್ಪಂದ ಪ್ರಕಾರ, ಪ್ರತಿ ವರ್ಷ ಜನವರಿ 1 ಹಾಗೂ ಜುಲೈ 1ರಂದು ಕೈದಿಗಳ ಪಟ್ಟಿಯನ್ನು ಎರಡೂ ದೇಶಗಳು ವಿನಿಮಯ ಮಾಡಿಕೊಳ್ಳುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.