ಈಜಿಪ್ಟ್ನ ಸುಯೆಜ್ ಕಾಲುವೆಯಲ್ಲಿ ಸಿಲುಕಿಕೊಂಡು ಸಮುದ್ರದಲ್ಲಿ ಸಂಚಾರ ದಟ್ಟಣೆಗೆ ಕಾರಣವಾಗಿದ್ದ ಎವರ್ ಗಿವನ್ ಹಡಗು ಈಗ ಮತ್ತೊಂದು ಸಂಕಷ್ಟಕ್ಕೆ ಸಿಲುಕಿದೆ.

ಕಾಲುವೆಯಲ್ಲಿ ಸಿಲುಕಿಕೊಂಡಿದ್ದ ಎವರ್ ಗಿವನ್ ಹಡಗನ್ನು ಚಲಿಸುವಂತೆ ಮಾಡಿದ್ದರೂ, ಅದು ಈಜಿಪ್ಟ್ನಿಂದ ಹೊರಗಡೆ ಹೋಗಲು ಬಿಟ್ಟಿಲ್ಲ. ಹಡಗಿನ ಮಾಲೀಕರು 1 ಬಿಲಿಯನ್ ಡಾಲರ್ (₹7.4 ಶತಕೋಟಿ) ಮೊತ್ತವನ್ನು ಪರಿಹಾರದ ರೂಪದಲ್ಲಿ ಪಾವತಿಸದೆ ಈಜಿಪ್ಟ್ನಿಂದ ಹೊರಹೋಗುವಂತಿಲ್ಲ ಎಂದು ಎವರ್ ಗಿವನ್ಗೆ ಕಾಲುವೆ ಪ್ರಾಧಿಕಾರ ಹೇಳಿದೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.

ಆರು ದಿನಗಳ ಕಾಲ ಕಾಲುವೆ ಸಂಚಾರ ಸಂಪೂರ್ಣ ಬಂದ್ ಆಗಿದ್ದು, ಇದರಿಂದ ಇತರ ಹಡಗುಗಳ ಸಂಚಾರ ಕೂಡ ಸ್ಥಗಿತಗೊಂಡು ತೊಂದರೆ ಅನುಭವಿಸುವಂತಾಗಿತ್ತು.

ಈಜಿಪ್ಟ್ನ ಗ್ರೇಟ್ ಬಿಟ್ಟರ್ ಲೇಕ್ನಲ್ಲಿ ಎವರ್ ಗಿವನ್ ಲಂಗರು ಹಾಕಿದ್ದು, ಅದರಲ್ಲಿ 25 ಭಾರತೀಯ ಸಿಬ್ಬಂದಿ ಕೂಡ ಹಡಗಿನಲ್ಲೇ ಉಳಿಯುವಂತಾಗಿದೆ.

ತನಿಖೆ ಪೂರ್ಣಗೊಂಡು, ಪರಿಹಾರದ ಮೊತ್ತ ಪಾವತಿಸುವವರೆಗೂ ಹಡಗನ್ನು ಬಿಟ್ಟು ಕೊಡದಿರಲು ಸುಯೆಜ್ ಕಾಲುವೆ ಪ್ರಾಧಿಕಾರ ನಿರ್ಧರಿಸಿದೆ ಎಂದು ಸ್ಟೇಟ್ ಟೆಲಿವಿಶನ್ ವರದಿ ಮಾಡಿದೆ. ಅಲ್ಲದೆ, ಜಪಾನ್ ಮೂಲದ ಹಡಗಿನ ಮಾಲೀಕರು, ಸುಯೆಜ್ ಕಾಲುವೆ ಪ್ರಾಧಿಕಾರದ ಜತೆಗೆ ಮಾತುಕತೆ ನಡೆಸುತ್ತಿದ್ದಾರೆ.

ಇರಾನ್| ಚಬಹಾರ್ ಬಂದರು ಅಭಿವೃದ್ಧಿ ಚುರುಕುಗೊಳಿಸಿದ ಭಾರತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.