ಮೂರು ತಿಂಗಳ ಅವಧಿಯ ನನ್ನ ನೆದರ್ಲೆಂಡ್ಸ್ ವಾಸ್ತವ್ಯದಲ್ಲಿ ನನಗೆ ಕೌತುಕ ಮೂಡಿಸಿದ್ದು ಇಲ್ಲಿಯ ಪರಿಸರ ಸ್ನೇಹಿ ಸೈಕಲ್ ಸವಾರಿ. ಅನೇಕ ಪ್ರವಾಸಿ ತಾಣಗಳಿಂದ ಪ್ರಸಿದ್ಧವಾದ ಈ ದೇಶದ ನಾಗರಿಕರ ವಿಶ್ವಾಸಾರ್ಹ ಒಡನಾಡಿ ಸೈಕಲ್ ಎಂಬುದು ಈ ಸಮಯದಲ್ಲಿ ನನಗೆ ಮನದಟ್ಟಾಯಿತು. ಅದಕ್ಕಾಗಿಯೇ ಈ ನಾಡಿಗೆ ‘ಸ್ವರ್ಗ’ ಎಂಬ ಅನ್ವರ್ಥಕ ಹೆಸರು.

ಸೈಕಲ್ಗಳು ಈ ನಾಡಿನ ಸಂಸ್ಕೃತಿಯೊಂದಿಗೆ ಹಾಸುಹೊಕ್ಕಾಗಿ ಹೆಣೆದುಕೊಂಡಿವೆ. ಇಲ್ಲಿಯ ಪ್ರಧಾನಿ ಮಾರ್ಕ್ ರೂಟೆ ದಿನವೂ ಸೈಕಲ್ ಮೇಲೆ ಕಚೇರಿಗೆ ಹೋಗುತ್ತಾರೆ. ಕಳೆದ ವರ್ಷ ಭಾರತದ ಪ್ರಧಾನಿ ನರೇಂದ್ರ ಮೋದಿ ಈ ದೇಶಕ್ಕೆ ಭೇಟಿ ನೀಡಿದಾಗ ಅವರಿಗೆ ಗೌರವ ಕಾಣಿಕೆಯಾಗಿ ಅವರು ಸೈಕಲ್ ನೀಡಿದ್ದರು. ಯುವಕರಿಗಂತೂ ಸೈಕಲ್ ಆಪ್ತಮಿತ್ರ. ಪ್ರಪಂಚದಲ್ಲಿಯೇ ಜನಸಂಖ್ಯೆಗಿಂತ ಹೆಚ್ಚು ಸೈಕಲ್ ಹೊಂದಿರುವ ರಾಷ್ಟ್ರ ಎಂಬ ಹೆಗ್ಗಳಿಕೆ ಈ ದೇಶದ್ದು. ಹಿತವಾದ ಹವಾಮಾನ, ಸಮತಟ್ಟಾದ ಭೂಪ್ರದೇಶ ಮತ್ತು ಕಡಿಮೆ ನಿರ್ವಹಣಾ ವೆಚ್ಚದಿಂದಾಗಿ ಸೈಕಲ್ ಇಲ್ಲಿನ ಜನರ ನಿತ್ಯದ ಸಂಗಾತಿ. ಕಾರು ಇದ್ದವರು ಸಹ ಕಚೇರಿಗೆ ಸೈಕಲ್ ಮೇಲೆಯೇ ಹೋಗುತ್ತಾರೆ. ಅದು ಅವರ ಪ್ರತಿಷ್ಠೆಗೆ ಅಡ್ಡಬರುವುದಿಲ್ಲ.

ಪ್ರತ್ಯೇಕ ಮಾರ್ಗ

ಸೈಕಲ್ ಸವಾರರಿಗಾಗಿಯೇ ಈ ದೇಶದಲ್ಲಿ ಒಟ್ಟು 32 ಸಾವಿರ ಕಿ.ಮೀ ಉದ್ದದ ಸುಸಜ್ಜಿತ ಪ್ರತ್ಯೇಕ ಮಾರ್ಗವನ್ನು ನಿರ್ಮಿಸಲಾಗಿದೆ. ಇನ್ನಾವ ರಾಷ್ಟ್ರದಲ್ಲೂ ಸೈಕಲ್ ಸವಾರರಿಗೆ ಇಷ್ಟೊಂದು ಸುರಕ್ಷಿತವಾದ ವ್ಯವಸ್ಥೆ ಇಲ್ಲ. ಕಡಿಮೆ ಅಂತರದಲ್ಲಿ ಹರಡಿಕೊಂಡಿರುವ ಇಲ್ಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಹೋಗಲು ಜನರು ಸೈಕಲ್ ಬಳಸುತ್ತಾರೆ. ಕೆಂಪು ಹಾಸಿನ ಈ ಮೀಸಲು ಮಾರ್ಗದ ಉದ್ದಕ್ಕೂ ಸೂಚನಾ ಫಲಕಗಳಿವೆ. ಅವುಗಳಲ್ಲಿ ನಿರ್ದಿಷ್ಟ ಮಾರ್ಗದ ಸಂಖ್ಯೆ, ನಕ್ಷೆಗಳನ್ನು ಪ್ರದರ್ಶಿಸಲಾಗಿದೆ. ಹೀಗಾಗಿ ಸಂಚಾರದಲ್ಲಿ ಗೊಂದಲಕ್ಕೆ ಆಸ್ಪದವೇ ಇರುವುದಿಲ್ಲ. ಜಂಕ್ಷನ್ ಮತ್ತು ವೃತ್ತಗಳಲ್ಲಿ ಸೈಕಲ್ ಸವಾರರಿಗೆ ಆದ್ಯತೆ. ಆನಂತರ ಕಾರು, ಸಾರ್ವಜನಿಕ ಸಾರಿಗೆಗೆ ಮಾರ್ಗ ಮುಕ್ತವಾಗುತ್ತದೆ. ಕಾರು, ಬಸ್, ಟ್ರಾಮ್ ತಲುಪದ ಸ್ಥಳಗಳಿಗೂ ಸೈಕಲ್ ಸವಾರರ ರಸ್ತೆ ವಿಸ್ತರಿಸಿದೆ.

ಇಲ್ಲಿನ ವಾಹನ ಸವಾರರು ರಸ್ತೆ ನಿಯಮ ಮತ್ತು ವೇಗ ಮಿತಿ ಕಟ್ಟುನಿಟ್ಟಾಗಿ ಪಾಲಿಸುತ್ತಾರೆ. ನಿಯಮಗಳನ್ನು ಮೀರಿದರೆ ದಂಡ ತೆರಲೇ
ಬೇಕು. ಮಾರ್ಕೆಟ್ ಹಾಗೂ ಇತರ ಪ್ರಮುಖ ರಸ್ತೆಗಳಲ್ಲಿ ಪೊಲೀಸರು ಸಹ ಸೈಕಲ್ ಮೇಲೆ ಸಂಚರಿಸುತ್ತಾರೆ. ಪ್ರವಾಸಿಗರು ಸೈಕಲ್ ರಸ್ತೆಯಲ್ಲಿ ಹಾಕಿರುವ ನಕ್ಷೆಗಳನ್ನು ಅನುಸರಿಸಿ ಆಮ್ಸ್ಟರ್ಡ್ಯಾಮ್, ರೋಟರ್ಡ್ಯಾಮ್, ಡನ್ಹೇಗ್, ಕುಕೇನಾಫ್ (ಟುಲಿಪ್) ಮುಂತಾದ ಪ್ರವಾಸಿ ತಾಣಗಳಿಗೆ, ಚೀಸ್ ಮಾರಾಟ ಪಟ್ಟಣಗಳಾದ ಗೌಡಾ, ಅಲ್ಕಾಮಾರ್, ನದಿಮುಖಜ ಪ್ರದೇಶ
ಗಳಾದ ಝಿಲ್ಯಾಂಡ್, ದಕ್ಷಿಣ ಹಾಲೆಂಡ್, ವಿವಿಧ ಕಡಲ ತೀರ, ಉತ್ತರ ಸಮುದ್ರ ದ್ವೀಪಗಳು ಹೀಗೆ ಅನೇಕ ಪ್ರವಾಸಿ ಸ್ಥಳಗಳನ್ನು ಆವರಿಸಿಕೊಂಡಿರುವ ಹನ್ನೆರಡೂ ಪ್ರಾದೇಶಿಕ ಪ್ರಾಂತ್ಯಗಳನ್ನು ತಲುಪಬಹುದು. ರೈಲು, ನದಿ ಕಾಲುವೆಗಳ ಮೂಲಕ ಪ್ರಯಾಣಿಸಲು ಅಪೇಕ್ಷಿಸಿದಲ್ಲಿ ತಮ್ಮೊಂದಿಗೆ ಸೈಕಲ್ ಒಯ್ಯಲು ಸೌಲಭ್ಯವಿದೆ.

ಸೈಕಲ್ ಸಂಸ್ಕೃತಿ

ಡಚ್ ಮಕ್ಕಳು ನಡೆದಾಡುವ ಮೊದಲೇ ಅವರನ್ನು ಸೈಕಲ್ ಜಗತ್ತಿಗೆ ಪರಿಚಯಿಸಲಾಗುತ್ತದೆ. ಶಿಶುಗಳನ್ನು, ಪುಟ್ಟ ಕಂದಮ್ಮಗಳನ್ನು ಸೈಕಲ್ ಮುಂದೆ ಮತ್ತು ಹಿಂಭಾಗದಲ್ಲಿ ಅಳವಡಿಸಿದ ವಿಶೇಷವಾದ ಬುಟ್ಟಿಗಳಲ್ಲಿ ಕೂಡಿಸಿಕೊಂಡೇ ಜನರು ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಮೂರ್ನಾಲ್ಕು ಮಕ್ಕಳಿದ್ದವರು ತ್ರಿಚಕ್ರದ ಸೈಕಲ್ನಲ್ಲಿ ಸಂಚರಿಸುತ್ತಾರೆ. ಪ್ರತಿ ಕುಟುಂಬದಲ್ಲಿ ಕನಿಷ್ಠ ಎರಡು ಸೈಕಲ್ ಇರುವುದು ಸಾಮಾನ್ಯ. ಪ್ರೌಢಶಾಲೆಗೆ ಬರುವ ಹೊತ್ತಿಗೆ ಮಕ್ಕಳು ಸ್ವಂತ ಸೈಕಲ್ ಪಡೆಯುತ್ತಾರೆ. ಸ್ಥಳೀಯ ಸಂಚಾರ ಪ್ರಾಧಿಕಾರದ ಪರೀಕ್ಷೆಗೆ ಹಾಜರಾಗಿ ಸೈಕಲ್ ಚಾಲನೆ ಲೈಸೆನ್ಸ್ ಪಡೆಯುವುದು ಕಡ್ಡಾಯ. ಇಲ್ಲಿ ಸೈಕಲ್ ಚಾಲನೆಗೆ ಹೆಲ್ಮೆಟ್ ಕಡ್ಡಾಯವಲ್ಲ. ರೇಸ್, ಪರ್ವತಾರೋಹಣ ಸೈಕ್ಲಿಂಗ್ನ ಹವ್ಯಾಸಿ ಪ್ರವಾಸಿಗರು ಹೆಲ್ಮೆಟ್ ಧರಿಸುತ್ತಾರೆ. ರಾತ್ರಿಯೂ ಇಲ್ಲಿ ಸೈಕ್ಲಿಂಗ್ ಇದೆ. ಆದರೆ ಸೈಕಲ್ಲಿನಲ್ಲಿ ದೀಪ, ರಿಫ್ಲೆಕ್ಟರ್ ಅಳವಡಿಸುವುದು ಕಡ್ಡಾಯ. ಯುವಕರು, ಉದ್ಯೋಗಿಗಳು ಹೈಟೆಕ್ ಪೆಡಲ್ ಬ್ರೇಕ್, ಗೇರ್ ಸೈಕಲ್ ಉಪಯೋಗಿಸಿದರೆ, ಹಿರಿಯ ನಾಗರಿಕರು ಇ-ಬೈಸಿಕಲ್ ಬಳಸುತ್ತಾರೆ. ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ವೃದ್ಧರು, ಅಂಗವಿಕಲರಿಗಾಗಿ, ರೇಸ್ ಮತ್ತು ಪರ್ವತಾರೋಹಣಕ್ಕಾಗಿ ವಿಭಿನ್ನ ರೀತಿಯ ಸೈಕಲ್ಗಳಿವೆ. ಕಾರ್ಗೋ, ಫೋಲ್ಡಿಂಗ್ ಸೇರಿದಂತೆ 25 ವಿಧದ ಸೈಕಲ್ಗಳನ್ನು ಮಾರಾಟ ಮಾಡುವ ಅಂಗಡಿಗಳು ಎಲ್ಲೆಡೆ ಕಾಣಿಸುತ್ತವೆ. ಸೆಕೆಂಡ್ ಹ್ಯಾಂಡ್ ಮಾರಾಟ ಮಳಿಗೆಗಳೂ ಇವೆ. ಪ್ರಮುಖ ಕೇಂದ್ರಗಳಲ್ಲಿ ಸುಸಜ್ಜಿತ ಸೈಕಲ್ಗಳು ಬಾಡಿಗೆಗೆ ದೊರೆಯುತ್ತವೆ. ಒಂದು ಕೇಂದ್ರದಲ್ಲಿ ಬಾಡಿಗೆ ಪಡೆದು ಅದನ್ನು ಮತ್ತೊಂದು ಕೇಂದ್ರದಲ್ಲಿಟ್ಟು ತೆರಳಬಹುದಾದಂಥ ಸೌಲಭ್ಯವೂ ಇರುವುದರಿಂದ ಪ್ರವಾಸಿಗರಿಗೆ ಹೆಚ್ಚು ಅನುಕೂಲವಾಗುತ್ತದೆ. ಇಲ್ಲಿ ರೈಲು, ಬಸ್, ಟ್ರಾಮ್, ಟ್ಯಾಕ್ಸಿ ಪ್ರಯಾಣ ದುಬಾರಿಯಾಗಿರುವುದರಿಂದ ದೈನಂದಿನ ಚಟುವಟಿಕೆಗಳಿಗೆ ಮತ್ತು ಸನಿಹದ ಸಂಚಾರಕ್ಕೆ ಜನರು ಸೈಕಲ್ ಅವಲಂಬಿಸುತ್ತಾರೆ. ಒಂದೂರಿನಿಂದ ಮತ್ತೊಂದು ಊರಿಗೆ ಹೋಗಲು ನೌಕರರು, ನಾಗರಿಕರು ತಿಂಗಳ ಪಾಸ್ ಸೌಲಭ್ಯ ಪಡೆದು ರೈಲು, ಬಸ್ಗಳಲ್ಲಿ ಸಂಚರಿಸುತ್ತಾರೆ. ಆಗೆಲ್ಲ ಸೈಕಲ್ ಅನ್ನು ನಿಲ್ದಾಣದಲ್ಲಿ ನಿಲ್ಲಿಸಿ ಹೋಗುವುದು ವಾಡಿಕೆ.

ಪಾರ್ಕಿಂಗ್ ವ್ಯವಸ್ಥೆ

1.7 ಕೋಟಿ ಜನಸಂಖ್ಯೆ ಇರುವ ಈ ದೇಶದಲ್ಲಿ 2.3 ಕೋಟಿ ಸೈಕಲ್ಗಳಿವೆ ಎಂದರೆ ಅಲ್ಲಿನ ಜನರ ಸೈಕಲ್ ಪ್ರೀತಿ ಅರ್ಥವಾಗುತ್ತದೆ. ಇದರಿಂದಾಗಿ ಇಲ್ಲಿ ಎಲ್ಲ ಕಡೆಗಳಲ್ಲೂ ಉಚಿತ ಪಾರ್ಕಿಂಗ್ ವ್ಯವಸ್ಥೆ ಇದೆ. ನಗರ ಕೇಂದ್ರ ಸ್ಥಳ, ವಿವಿಧ ನಿಲುಗಡೆ, ವಿದ್ಯಾಲಯ, ಉದ್ಯಾನ, ಮಾರ್ಕೆಟ್, ಇಗರ್ಜಿ, ಉದ್ಯೋಗದ ಸ್ಥಳಗಳಲ್ಲಿ ಪಾರ್ಕಿಂಗ್ ಸ್ಥಳ ನಿಗದಿಪಡಿಸಿರುತ್ತಾರೆ. ಸವಾರರು ಅಲ್ಲಿ ಸೈಕಲ್ ಇಟ್ಟು, ಬೀಗ ಹಾಕಿ ಮುಂದಿನ ಕೆಲಸಗಳನ್ನು ಮಾಡಬಹುದು. ಇಷ್ಟಿದ್ದರೂ ಸೈಕಲ್ ಕಳವು ಪ್ರಕರಣಗಳು ದಾಖಲಾಗುತ್ತವೆ. ಪಾರ್ಕಿಂಗ್ ಬಿಟ್ಟು ಬೇರೆಡೆಗೆ ಸೈಕಲ್ ನಿಲ್ಲಿಸಿದಲ್ಲಿ ದಂಡ ಪಾವತಿಸಿ ಮರಳಿ ಪಡೆಯಬೇಕಾಗುತ್ತದೆ. ದೊಡ್ಡದಾದ ಉಟ್ರಿಕ್ಟ್ ಸೆಂಟ್ರಲ್ ರೈಲು ನಿಲ್ದಾಣದಲ್ಲಿ 16 ಪ್ಲಾಟ್ಫಾರ್ಮ್ಗಳಿದ್ದು, ನೆಲಮಹಡಿಯಲ್ಲಿ 1.84 ಲಕ್ಷ ಚದರ ಅಡಿಯ ಪಾರ್ಕಿಂಗ್ ವ್ಯವಸ್ಥೆ ಇದೆ. ಇಲ್ಲಿ ಏಕಕಾಲಕ್ಕೆ 12 ಸಾವಿರ ಸೈಕಲ್ಗಳನ್ನು ನಿಲ್ಲಿಸಬಹುದು. ಆಮ್ಸ್ಟರ್ಡ್ಯಾಮ್ ರೈಲು ನಿಲ್ದಾಣದಲ್ಲಿ ಪಾರ್ಕಿಂಗ್ಗಾಗಿ ಮೂರು ಮಹಡಿಗಳ ಕಟ್ಟಡವಿದೆ.

‘ಮಕ್ಕಳ ಕೊಲೆ ನಿಲ್ಲಿಸಿ!’

ಎರಡನೆಯ ಜಾಗತಿಕ ಯುದ್ಧಕ್ಕೂ ಮುನ್ನ ಈ ದೇಶದಲ್ಲಿ ಸೈಕಲ್ ಸಂಚಾರವೇ ಪ್ರಧಾನವಾಗಿತ್ತು. 1950-60 ರಲ್ಲಿ ಸಾಕಷ್ಟು ಕಾರುಗಳು ರಸ್ತೆಗಿಳಿದವು. ಇದರಿಂದಾಗಿ ರಸ್ತೆಗಳಲ್ಲಿ ಜಾಗ ಸಾಲದಂತೆ ಆಗಿ ಸೈಕಲ್ ಸಂಚಾರಕ್ಕೆ ಅಡೆತಡೆಯಾಯಿತಲ್ಲದೇ ರಸ್ತೆ ಅಪಘಾತಗಳು ಹೆಚ್ಚಿದವು. 1971ರಲ್ಲಿ ಮೂರು ಸಾವಿರ ಪ್ರಯಾಣಿಕರು ರಸ್ತೆ ಅಪಘಾತದಲ್ಲಿ ಅಸುನೀಗಿದರು. ಅವರಲ್ಲಿ 450 ಮಕ್ಕಳು ಸೇರಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದು ‘ಮಕ್ಕಳ ಕೊಲೆ ನಿಲ್ಲಿಸಿ’ ಎಂಬ ಸಾಮಾಜಿಕ ಚಳವಳಿಗೆ ಕಾರಣವಾಯಿತು. ಇದೇ ಸಮಯಕ್ಕೆ ತೈಲ ಬಿಕ್ಕಟ್ಟಿನಿಂದಾಗಿ ಇಂಧನ ಉತ್ಪಾದನಾ ದೇಶಗಳು ಪಶ್ಚಿಮ ಯುರೋಪ್ಗೆ ಇಂಧನ ರಫ್ತು ನಿಲ್ಲಿಸಿದವು. ಹೀಗಾಗಿ ಡಚ್ ಸರ್ಕಾರ ಮೋಟಾರು ವಾಹನಗಳ ಬಳಕೆಯನ್ನು ಮಿತಗೊಳಿಸಿ, ಸೈಕಲ್ ಬಳಕೆಯನ್ನು ಪ್ರೋತ್ಸಾಹಿಸಿತು. ಸೈಕಲ್ ಸವಾರರಿಗೆ ವಿವಿಧ ಸೌಲಭ್ಯಗಳನ್ನು ಒದಗಿಸಿತು. ಅಲ್ಪವೆಚ್ಚದ ನಿರ್ವಹಣೆ, ಸಮಯಾನುಕೂಲದ ಸಾಧನ ಸೈಕಲ್ ಆರೋಗ್ಯ ವರ್ಧನೆ, ನಿರ್ಮಲ ಪರಿಸರದ ಮಿತ್ರನಾಗಿ ಜನಪ್ರಿಯವಾಯಿತು. ಡಚ್ ಜನರು ಒಂದು ವರ್ಷದಲ್ಲಿ ಕನಿಷ್ಠ ಒಂದು ಸಾವಿರ ಕಿ.ಮೀ ಪ್ರವಾಸವನ್ನು 300 ಟ್ರಿಪ್ಗಳಲ್ಲಿ ನಿರ್ವಹಿಸುತ್ತಾರೆ.

ಇಲ್ಲಿ ಡಚ್ ಸೈಕಲಿಸ್ಟ್ ಯೂನಿಯನ್, ಯುರೋಪಿಯನ್ ಸೈಕಲಿಸ್ಟ್ ಫೆಡರೇಶನ್ ಅಸ್ತಿತ್ವದಲ್ಲಿವೆ. ಇವುಗಳು ಸೈಕಲ್ ಸಂಚಾರ ಮತ್ತು ಸವಾರರ ಹಿತರಕ್ಷಣೆಗೆ ಮುಂದಾಗಿವೆ. ಸೈಕಲ್ ರೇಸ್, ಬೈಸಿಕಲ್ ಸಿಟಿ ಸ್ಪರ್ಧೆಗಳು ಆಯೋಜಿತವಾಗುತ್ತಿವೆ. ನಿರ್ಮಲ ರಾಷ್ಟ್ರದ ಪುನರ್ ಸೃಷ್ಟಿ, ಪರಿಸರ ಸಂರಕ್ಷಣೆ ಇಂದು ಜಾಗತಿಕ ಸವಾಲುಗಳಾಗಿವೆ. ಅನೇಕ ರಾಷ್ಟ್ರಗಳು ತೈಲ ಅವಲಂಬನೆ ಕಡಿಮೆ ಮಾಡಿ, ‘ಹ್ಯಾಪಿ ಕಂಟ್ರಿ’ ಪರಿಕಲ್ಪನೆಯತ್ತ ಗಮನ ಹರಿಸಿವೆ. ನೆದರ್ಲೆಂಡ್ಸ್ ಪರಿಸರ ಪ್ರವಾಸೋದ್ಯಮ, ಪವನ ವಿದ್ಯುತ್ ಕ್ಷೇತ್ರದತ್ತ ಹೆಚ್ಚಿನ ಗಮನ ಹರಿಸಿರುವುದು ಅನುಕರಣೀಯವಾದುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.