ಬೆಂಗಳೂರು: 20ನೇ ಶತಮಾನದ ಕರ್ನಾಟಕದ ಹಲವು ಕಲಾವಿದರ ಕಲಾಕೃತಿಗಳು ಚಿತ್ರಕಲಾ ಪರಿಷತ್ನಲ್ಲಿ ಪ್ರದರ್ಶನಗೊಳ್ಳುತ್ತಿವೆ. ಕೆ. ವೆಂಕಟಪ್ಪ, ಹನುಮಯ್ಯ, ರುಮಾಲೆ ಚನ್ನಬಸವಯ್ಯ, ಎಂ.ಎಸ್ ಚಂದ್ರಶೇಖರ, ಎಂ.ಜಿ ಶುದ್ಧೋದನ, ವಿ.ಆರ್ ಆಚಾರ್ಯ, ಕೆ.ಕೆ ಹೆಬ್ಬಾರ್, ಯೂಸುಫ್ ಅರೆಕ್ಕಳ, ತಿಪ್ಪೇಸ್ವಾಮಿ, ವೈ ಸುಬ್ರಹ್ಮಣ್ಯ ರಾಜು, ಎಂ.ಎ ಚೆಟ್ಟಿ ಸೇರಿ 60 ಅಧಿಕ ಕಲಾವಿದರ ಸುಮಾರು 180 ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ.

ಕನ್ನಡದ ಕಲಾವಿದರನ್ನು ಜನರಿಗೆ ಪರಿಚಯಿಸುವ ಉದ್ದೇಶದಿಂದ ಈ ಪ್ರದರ್ಶನ ಆಯೋಜಿಸಲಾಗಿದೆ. ಈ ಪ್ರದರ್ಶನವನ್ನು ಸರಣಿ ರೂಪದಲ್ಲಿ ನಡೆಸುವ ಉದ್ದೇಶವಿದ್ದು, ಮೊದಲ ಭಾಗವಾಗಿ ಅಗಲಿದ ಕಲಾವಿದರ ರಚನೆಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. ಹಲವು ಕಲಾವಿದ ವಿವಿಧ ಶೈಲಿಯ ಕಲಾಕೃತಿಗಳು ಒಂದೇ ಸೂರಿನಡಿ ಪ್ರದರ್ಶನಕ್ಕಿಡಲಾಗಿದೆ. ಪ್ರಕೃತಿ, ಸ್ಮಾರಕ, ರೇಖಾಚಿತ್ರ, ವರ್ಣಚಿತ್ರ ಮುಂತಾದ ವಿವಿಧ ಪ್ರಕಾರಗಳ ಕಲಾಕೃತಿಗಳಿವೆ.

‘20 ನೇ ಶತಮಾನದಲ್ಲಿ, ಕರ್ನಾಟಕದ ಅಸ್ಮಿತೆಯನ್ನು ದೃಶ್ಯಾತ್ಮಕವಾಗಿ ಕಟ್ಟಿಕೊಟ್ಟ ಹಿರಿಯ ಕಲಾವಿದರಿಗೆ ನೀಡುವ ಗೌರವ ಇದು. ಈ ಕಲಾವಿದರು ಇಂದು ನಮ್ಮೊಂದಿಗಿಲ್ಲವಾದರೂ, ಕರ್ನಾಟಕದ ಪರಂಪರೆಯ ಹೆಗ್ಗುರುತುಗಳಾಗಿರುವ ಅವರ ಕಲಾಕೃತಿಗಳು ಇಂದಿಗೂ ಕರ್ನಾಟಕದ ಕಲಾ ಪ್ರಪಂಚವನ್ನು ಒಂದಿಲ್ಲೊಂದು ರೀತಿಯಲ್ಲಿ ರೂಪಿಸುತ್ತಿವೆ. ಅವರ ಕಲಾಕೃತಿಗಳು ಸಂಪ್ರದಾಯವನ್ನೂ, ಆಧುನಿಕತೆಯನ್ನೂ ಹದವಾಗಿ ಬೆರೆಸುವ ಕಾಲಾತೀತ ಕೊಂಡಿಗಳಾಗಿರುವ ಕಾರಣ, ಅವು ಇಂದಿಗೂ ನಮ್ಮೆದೆಗಳಲ್ಲಿ ಮಾರ್ದನಿಸುತ್ತಿವೆ’ ಎಂದು ಚಿತ್ರಕಲಾ ಪರಿಷತ್ ಪ್ರಕಟಣೆಯಲ್ಲಿ ಹೇಳಿದೆ.

‘ಗ್ರಾಮೀಣ ಬದುಕು, ಭೌಗೋಳಿಕ ಭೂದೃಶ್ಯ, ಪೌರಾಣಿಕತೆ, ಆಧುನಿಕತೆ, ಸಂಪ್ರದಾಯ, ಸಂಸ್ಕೃತಿ, ಸಮಾಜ, ಪರಿಸರವನ್ನು ಪ್ರತಿಬಿಂಬಿಸುವ ಕಲಾಕೃತಿಗಳ ಪ್ರದರ್ಶನ ನಡೆಯುತ್ತಿದೆ. ನೂರು ವರ್ಷದ ಹಳೆಯ ಕಲಾಕೃತಿಗಳು ಇವೆ. ವಿವಿಧ ಕಡೆಗಳಿಂದ ಈ ಕಲಾಕೃತಿಗಳನ್ನು ಸಂಗ್ರಹಿಸಿ ಇಲ್ಲಿಗೆ ತರಲಾಗಿದೆ. ಹೊಸ ತಲೆಮಾರಿಗೆ ಕನ್ನಡದ ಕಲಾವಿದರ ಪರಂಪರೆಯನ್ನು ದಾಟಿಸುವ ಉದ್ದೇಶ ಈ ಪ್ರದರ್ಶನದ್ದು’ ಎಂದು ಚಿತ್ರಕಲಾ ಪರಿಷತ್ ವಸ್ತುಸಂಗ್ರಹಾಲಯದ ಕ್ಯುರೇಟರ್ ಡಾ. ಸಿ.ಎಸ್. ವಿಜಯಶ್ರೀ ಹೇಳಿದರು.

ಅಕ್ಟೋಬರ್ 23ರಿಂದ ಈ ಪ್ರದರ್ಶನ ಆರಂಭವಾಗಿದ್ದು, 30ರವರೆಗೆ ಇರಲಿದೆ. ಬೆಳಿಗ್ಗೆ 10.30ರಿಂದ ಸಂಜೆ 7ರವರೆಗೂ ಪ್ರವೇಶ ಇರಲಿದೆ. ಯಾವುದೇ ಪ್ರವೇಶ ಶುಲ್ಕ ಇಲ್ಲ.

ಅಕ್ಟೋಬರ್ 28ರಂದು ಸಂಜೆ 4 ಗಂಟೆಗೆ ಪ್ರೊ. ಡಾ. ಚೂಡಾಮಣಿ ನಂದಗೋಪಾಲ್ ಅವರ ನೇತೃತ್ವದಲ್ಲಿ ಗ್ಯಾಲರಿ ವಾಕ್ ಇರಲಿದ್ದು, ಆಸಕ್ತರು ಭಾಗವಹಿಸಬಹುದು. ಸಂಪರ್ಕಕ್ಕೆ: 9513011246

ಕನ್ನಡದ ಕಲಾವಿದರಿಗೆ ಗ್ಯಾಲರಿ

ಚಿತ್ರಕಲಾ ಪರಿಷತ್ನ ವಸ್ತುಸಂಗ್ರಹಾಲಯದಲ್ಲಿ ಕನ್ನಡದ ಕಲಾವಿದರಿಗೆ ಮಾತ್ರ ಪ್ರತ್ಯೇಕ ಗ್ಯಾಲರಿ ಮಾಡುವ ಇರಾದೆ ಇದೆ. ಈ ಪ್ರದರ್ಶನ ಆ ಯೋಜನೆಯ ಒಂದು ಭಾಗ. ಈ ಪ್ರದರ್ಶನದಲ್ಲಿ ಇರುವ ಹಲವು ಕಲಾಕೃತಿಗಳು ಆ ಗ್ಯಾಲರಿಯಲ್ಲಿ ಜಾಗ ಪಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.