ನಲ್ದೊಟ್ಟಿಲು

ನಲ್ದೊಟ್ಟಿಲು (ನಾ). ಅಂದವಾದ ತೊಟ್ಟಿಲು

(ನಲ್+ತೊಟ್ಟಿಲು)

ಕುವೆಂಪು ಅವರು ವಾಲಿಯ ಬದುಕಿನ ಕೊನೆಯ ಕ್ಷಣದಲ್ಲಿ ಅವನಿಂದ ಹೊಮ್ಮಿಸಿರುವ ತಾಯ್ನಾಡಿನ ಬಗೆಗಿನ ನುಡಿ ಹೆತ್ತನಾಡಿನ ಬಗ್ಗೆ ವ್ಯಕ್ತಪಡಿಸಿರುವ ಸತ್ಯ ದರ್ಶನ. ದಿನದ ಅಂತ್ಯದಲ್ಲಿ ಸಂಧ್ಯೆ ಆವರಿಸುವಂತೆ ಅವನಿಗೆ ಸಾವು ಬಳಿ ಸಾರಿದೆ ಎಂಬ ಚಿತ್ರಣ ಪ್ರಕೃತಿ ಸಹಜ ಭಾವ. ನಿಸರ್ಗಧ್ಯಾನಿ ಕುವೆಂಪು ಪ್ರತಿ ಪಾತ್ರದ ಸಂದರ್ಭ, ಸಂಘರ್ಷ, ಶಾಂತನೆಲೆ, ಪ್ರೀತಿ, ವಾತ್ಸಲ್ಯ, ದ್ವೇಷ ಕ್ರೌರ್ಯಗಳಲ್ಲಿ ಪ್ರಕೃತಿಯನ್ನು ಒಂದಾಗಿಸಿ ರೇಖಿಸಿರುವ ರೀತಿ ಅನನ್ಯ.

ವಾಲಿಯು ತನ್ನ ಹೆತ್ತೂರು ಕಿಷ್ಕಿಂಧೆಯನ್ನು ನೆನೆಯುವಾಗ-ಕವಿಯು ಹುಟ್ಟುವಾಗ ಬಸಿರು ನೀನಾದೆ ಮತ್ತು ನಲ್ದೊಟ್ಟಿಲಾದೆ ಎಂದು ವರ್ಣಿಸಿದ್ದಾರೆ. ‘ನಲ್ದೊಟ್ಟಿಲು’ ಪ್ರೀತಿ ವಾತ್ಸಲ್ಯ ಮಧುರ ಸುಂದರ ಭಾವದ ಮಗು ಈ ಹೊಸ ಪ್ರಪಂಚದಲ್ಲಿ ನಲ್ಮೆಯನ್ನು ಕಂಡ ನೆಲೆ!

ಆಃ ನನ್ನ ಕಿಷ್ಕಿಂಧೆ!.... ತಾಯ್ತಂದೆಯರ ನಾಡೆ!

ತಾಯ್ನುಡಿಯ ಮಲೆಗುಡಿಯ ಬೆಟ್ಟದಡವಿಯ ಬೀಡೆ!

ತಾಯ್ವಸಿರ್ ನೀನಾದೆ ಪುಟ್ಟುವಾಗಳ್, ಮತ್ತೆ

ನಲ್ದೊಟ್ಟಿಲಾದೆ, ಜೋಗುಳವಾದೆಯೆಳೆಯಂಗೆ,

ತಾರುಣ್ಯಕುಯ್ಯಾಲೆಯಾದೆ, ಜೌವನಕಾದೆ

ಪೆಣ್ಣೂಲ್ಮೆ. ಮುಪ್ಪಿಗೆ ಧರ್ಮದಾಶ್ರಯಮಾಗಿ,

ತೀರುವೆಡೆ ಶಾಂತಿಯಾಗರಮಾಗುತಿರ್ದಳಂ

ನಿನ್ನನಾಂ ತೊರೆಯುತಿಹನೌ, ಮನ್ನಿಸಾ, ತಾಯಿ!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.