ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಾವಿದರೇ ಸೇರಿ ಕಟ್ಟಿದ್ದು ‘ಕರ್ನಾಟಕ ಗಾನಕಲಾ ಪರಿಷತ್’ ಸಂಗೀತ ಸಂಸ್ಥೆ. ರಾಜ್ಯದ ದೊಡ್ಡ ಹಾಗೂ ಪ್ರತಿಷ್ಠಿತ ಸಂಗೀತ ಸಂಸ್ಥೆಯಾಗಿದ್ದು, ಪ್ರತಿ ವರ್ಷ ರಾಜ್ಯಮಟ್ಟದ ಸಂಗೀತ ಸಮ್ಮೇಳನ ಆಯೋಜಿಸಿ ನಾಡಿನ ಹೆಸರಾಂತ ಸಾಧಕರಿಗೆ ಗಾನಕಲಾಭೂಷಣ ಹಾಗೂ ಹಾಗೂ ಯುವ ಕಲಾವಿದರಿಗೆ ಗಾನಕಲಾಶ್ರೀ ಬಿರುದು ನೀಡಿ ಸನ್ಮಾನಿಸುತ್ತದೆ. ಈ ಬಾರಿ 53ನೇ ಸಮ್ಮೇಳನವಾಗಿದ್ದು, ಗಾನಕಲಾಭೂಷಣ ಪ್ರಶಸ್ತಿ ಮೈಸೂರಿನ ಮೃದಂಗ ವಾದಕ ಜಿ.ಎಸ್. ರಾಮಾನುಜನ್ ಅವರಿಗೆ ಒಲಿದಿದೆ. ಗಾನಕಲಾಶ್ರೀ ಬಿರುದು ಗಾಯಕ ಹಾಗೂ ಪಿಟೀಲು ವಾದಕ ಉದಯ ಕಿರಣ್ ಕೆ.ಟಿ. ಅವರಿಗೆ ಲಭಿಸಿದೆ. ಬೆಂಗಳೂರಿನ ಎನ್.ಆರ್. ಕಾಲೊನಿ ರಾಮಮಂದಿರದಲ್ಲಿ ಭಾನುವಾರ (ನ. 10) ಈ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.

ಗಾನಕಲಾಭೂಷಣ ಬಿರುದಿಗೆ ಭಾಜನರಾಗುತ್ತಿರುವ ಮೈಸೂರಿನ ವಿದ್ವಾನ್ ರಾಮಾನುಜನ್ ಜಿ.ಎಸ್. ಅವರು ಸುದೀರ್ಘ ಸಂಗೀತ ಬದುಕಿನ ತಮ್ಮ ಅನುಭವವನ್ನು ಬಿಚ್ಚಿಟ್ಟರು.

ಸಂಗೀತದಲ್ಲಿ ಅದರಲ್ಲೂ ತಾಳವಾದ್ಯದಲ್ಲಿ ಸಾಧಿಸಲು ಅಪಾರ ಪರಿಶ್ರಮಪಟ್ಟೆ. ಚಿಕ್ಕ ವಯಸ್ಸಿನಿಂದಲೇ ಲಯವಾದ್ಯದ ಕಡೆ ಆಸಕ್ತಿ ಇರುವುದನ್ನು ಗಮನಿಸಿ ನನ್ನ ಪಾಲಕರು, ಅಕ್ಕಂದಿರು ನನ್ನನ್ನು ಮೃದಂಗದಲ್ಲಿ ತರಬೇತಿ ನೀಡಲಾರಂಭಿಸಿದರು. ಮೃದಂಗ ನುಡಿಸಬೇಕಾದರೆ ಸಂಗೀತದ ಜ್ಞಾನ ಬೇಕೇ ಬೇಕು. ಅಕ್ಕಂದಿರು ಹಾಡುತ್ತಿದ್ದರು. ನಾನು ಪಕ್ಕವಾದ್ಯ ನುಡಿಸುತ್ತಿದ್ದೆ. ಇದನ್ನೇ ಮುಂದುವರಿಸಿಕೊಂಡು ಹೋದೆ.

ಏಪ್ರಿಲ್ 24, 1958ರಂದು ಮೈಸೂರಿನಲ್ಲಿ ಪದ್ಮ ಹಾಗೂ ಜಿ.ವಿ. ಶ್ರೀನಿವಾಸ್ ಅಯ್ಯಂಗಾರ್ ಅವರ ಪುತ್ರನಾಗಿ ಜನಿಸಿ ಸಂಗೀತದಲ್ಲೇ ಬದುಕನ್ನು ಕಂಡುಕೊಂಡವನು ನಾನು. ಸಹೋದರಿಯರಾದ ಕಮಲಾ ಹಾಗೂ ರಾಜಲಕ್ಷ್ಮಿ ಇಬ್ಬರೂ ಗಾಯಕಿಯರು. ಏಳನೇ ವಯಸ್ಸಿನಲ್ಲಿ ಲಯಕಲಾ ನಿಪುಣ ಪಿ.ಜಿ. ಲಕ್ಷ್ಮೀನಾರಾಯಣ್ ಅವರಲ್ಲಿ ಮೃದಂಗ ಕಲಿಯಲಾರಂಭಿಸಿದೆ. ಮೃದಂಗದ ಜೊತೆಗೆ ಘನವಾದ್ಯ ಘಟಂ ಅನ್ನೂ ಕಲಿತೆ. ಎರಡೂ ಲಯವಾದ್ಯಗಳಲ್ಲಿ ನೈಪುಣ್ಯ ಮೆರೆದು ಅಪರೂಪದ ಕಲಾವಿದನಾಗಿ ರೂಪುಗೊಂಡೆ ಎಂಬುದನ್ನು ಸಂಗೀತಪ್ರಿಯರೇ ಹೇಳುತ್ತಿರುವುದು ನನಗೆ ಸಮಾಧಾನದ ಸಂಗತಿ.

ಕರ್ನಾಟಕ ಶಾಸ್ತ್ರೀಯ ಗಾಯನದಲ್ಲಿ ಪಕ್ಕವಾದ್ಯವಿರದೇ ಇದ್ದರೆ ಕಛೇರಿಯೇ ಅಪೂರ್ಣ. ನನ್ನ ನುಡಿಸಾಣಿಕೆಯನ್ನು ಗಮನಿಸಿದ ಅನೇಕ ದಿಗ್ಗಜರು ತಮ್ಮ ಕಛೇರಿಗೆ ಪಕ್ಕವಾದ್ಯ ಸಹಕಾರಕ್ಕೆ ಆಹ್ವಾನಿಸಿದ್ದರು. ನಾಡಿನ ಅನೇಕ ದಿಗ್ಗಜರಿಗೆ ಮೃದಂಗ ನುಡಿಸಿದ್ದು, ಬಾಲಮುರಳಿಕೃಷ್ಣ ಅವರ ಸಂಗೀತ ಕಛೇರಿಗಳಿಗೆ ಮೃದಂಗ ಸಹಕಾರ ನೀಡಿದ್ದು ಇಂದಿಗೂ ನನಗೆ ಸ್ಮರಣೀಯ ಕ್ಷಣ ಎನಿಸಿದೆ. ನುರಿತ ಗಾಯಕರಾದ ತಂಜಾವೂರು ಎಸ್.ಕಲ್ಯಾಣರಾಮನ್, ವಯೊಲಿನ್ ವಾದಕ ಲಾಲ್ಗುಡಿ ಜಯರಾಮನ್, ಕೊಳಲು ವಾದಕ ಎನ್.ರಮಣಿ, ಗಾಯಕಿಯರಾದ ಬಾಂಬೆ ಸಹೋದರಿಯರು ಮುಂತಾದವರಿಗೆ ಮೃದಂಗ ನುಡಿಸಿದರೆ, ಸಂಗೀತ ದಿಗ್ಗಜ ಶೆಮ್ಮಂಗುಡಿ ಅವರಿಗೆ ಘಟಂನಲ್ಲಿ ಸಹಕಾರ ನೀಡಿದ್ದೆ. ಕರ್ನಾಟಕ ಸಂಗೀತ ಕಲಾವಿದರಾದ ಆರ್.ಕೆ. ಶ್ರೀಕಂಠನ್, ಆರ್.ಕೆ. ಪದ್ಮನಾಭ, ಎಂ.ಎಸ್. ಶೀಲಾ, ಸತ್ಯವತಿ, ಸುಕನ್ಯಾ ಪ್ರಭಾಕರ್, ಶ್ರೀಲತಾ ಎಲ್ಲರಿಗೂ ಮೃದಂಗ ಸಹಕಾರ ನೀಡಲು ಅವಕಾಶ ದೊರೆತದ್ದು ನನ್ನ ಅದೃಷ್ಟ. ಫ್ರಾನ್ಸ್ ಮತ್ತು ಸ್ವಿಟ್ಜರ್ಲೆಂಡ್, ಯುರೋಪಿನಲ್ಲಿ ಕಛೇರಿ ನೀಡಿದ್ದು ಖುಷಿ ತಂದಿದೆ.

ಮನೋಧರ್ಮ ಸಂಗೀತದ ಬಗ್ಗೆ ಈ ಸಂದರ್ಭದಲ್ಲಿ ಹೇಳಲೇಬೇಕು. ಮೃದಂಗ ಕಲಾವಿದನ ಜವಾಬ್ದಾರಿ ಎಂದರೆ ಮುಖ್ಯ ಕಲಾವಿದರ ಮನೋಧರ್ಮ ಅರಿತು ನುಡಿಸಿಕೊಂಡು ಹೋಗುವುದು. ತನಿಯಾವರ್ತನದಲ್ಲಿ ಮೃದಂಗ ಕಲಾವಿದರ ಮನೋಧರ್ಮ ವ್ಯಕ್ತಪಡಿಸುವ ಅವಕಾಶ ಇದೆ. ಇಲ್ಲೂ ಸಹ ಕಲಾವಿದನ ಮುಖ್ಯ ಕೃತಿ ಏನಿದೆ, ಯಾವ ಲಯದಲ್ಲಿ ಹಾಡುತ್ತಿದ್ದಾರೆ ಎಂಬುದನ್ನು ಅರಿತು ಅದರಂತೆ ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಲಯ ಕಲಾವಿದರಿಗೆ ಇರಬೇಕು.

ಗಾನಕಲಾಭೂಷಣ ಬಿರುದಿನ ಭಾಜನರಾದದ್ದು ನನ್ನ ಸಂಗೀತ ಬದುಕಿನ ಮತ್ತೊಂದು ಅವಿಸ್ಮರಣೀಯ ಗಳಿಗೆ. ಏಕೆಂದರೆ 2002ರಲ್ಲಿ ನನ್ನ ಗುರುವಿಗೆ ಇದೇ ಪ್ರಶಸ್ತಿ ಒಲಿದಿತ್ತು. ಈಗ ಅದೇ ಬಿರುದು ನನ್ನ ಮಡಿಲಿಗೆ. ಒಬ್ಬ ಕಲಾವಿದನ ಜೀವನದಲ್ಲಿ ಇಂಥ ಪ್ರತಿಷ್ಠಿತ ಪ್ರಶಸ್ತಿಯನ್ನು ಸ್ವೀಕರಿಸುವುದು ಹೆಮ್ಮೆ, ಅಭಿಮಾನದ ಸಂಗತಿ.⇒v

ಗಾನಕಲಾಶ್ರೀ ಉದಯ ಕಿರಣ್ ಕೆ.ಟಿ

ಇದೇ ಕಾರ್ಯಕ್ರಮದ ಯುವ ಸಂಗೀತ ಸಮ್ಮೇಳನದ ಅಧ್ಯಕ್ಷತೆ ಹಾಗೂ ಗಾನಕಲಾಶ್ರೀ ಬಿರುದು ವಿದ್ವಾನ್ ಉದಯ ಕಿರಣ್ ಕೆ.ಟಿ. ಅವರಿಗೆ ಈ ಬಾರಿ ಒಲಿದಿದೆ. ಮೈಸೂರಿನವರಾದ ಉದಯ ಕಿರಣ್ ಅವರು ಮೈಸೂರು ವಿಶ್ವವಿದ್ಯಾಲಯದ ಲಲಿತ ಕಲಾ ಕಾಲೇಜಿನಲ್ಲಿ ಎಂ ಮ್ಯೂಸಿಕ್ನಲ್ಲಿ ಚಿನ್ನದ ಪದಕ ಪಡೆದವರು. ಕರ್ನಾಟಕ ಶಾಸ್ತ್ರೀಯ ಗಾಯನ ಹಾಗೂ ಪಿಟೀಲು ವಾದನ ಎರಡರಲ್ಲೂ ಉನ್ನತ ಸಾಧನೆ ಮಾಡಿರುವ ಇವರು. ಗಾಯನ ಪಿಟೀಲು ಪಾಶ್ಚಾತ್ಯ ಸಂಗೀತ ಫ್ಯೂಷನ್ ಸಂಗೀತ ಕೀಬೋರ್ಡ್ ನುಡಿಸಾಣಿಕೆಯಲ್ಲೂ ಪಳಗಿದವರು. ಆಕಾಶವಾಣಿ ದೂರದರ್ಶನ ಮಾತ್ರವಲ್ಲದೆ ನಾಡಿನಾದ್ಯಂತ ದೇಶ ವಿದೇಶಗಳಲ್ಲಿ ಹಲವಾರು ಸಂಗೀತ ಕಛೇರಿ ನೀಡಿ ಸಂಗೀತಪ್ರಿಯರ ಮನತಣಿಸಿದವರು. ಅನನ್ಯ ಯುವ ಪುರಸ್ಕಾರ ಬೆಂಗಳೂರು ಗಾಯನ ಸಮಾಜದಿಂದ ಪ್ರಶಸ್ತಿ ಸ್ವರಾಲಯ ರತ್ನ ಪ್ರಶಸ್ತಿ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಿಂದ ಪ್ರಶಸ್ತಿ ಪಡೆದಿರುವ ಉದಯ್ ಅವರು ಇದೀಗ ಪ್ರತಿಷ್ಠಿತ ಗಾನಕಲಾಶ್ರೀ ಬಿರುದು ಮುಡಿಗೇರಿಸಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.