ಅವರು ಸಾಯಬಾರದಿತ್ತು. ಶೃದ್ಧಾಂಜಲಿಯ ರೆಡಿಮೇಡ್ ಮಾತುಗಳನ್ನು ಹೇಳಲಾರೆ. ನನಗೆ ಬಹಳ ನಿರಾಸೆಯಾಗಿದೆ. ಪ್ರಶಸ್ತಿಗಳು ಅವರ ಸಾಹಿತ್ಯಕ್ಕೆ ಮಾನದಂಡವಲ್ಲವೆಂಬುದು ಗೊತ್ತು. ಆದರೂ ನಾವು ಅವರನ್ನು ‘ರಾಷ್ಟ್ರಕವಿ’ ಎಂದು ಗುರುತಿಸದೆ ಹೋದದ್ದು ಸರಿಯಲ್ಲ.

ಸತ್ತ ಎಮ್ಮೆಗೆ ಹಾಲು ಹೆಚ್ಚು ಮಾರಾಯ್ರೇ. ನನ್ನ ಮಾತು ಅಪ್ರಸ್ತುತ ಎಂಬುದು ಗೊತ್ತು. ಆದರೆ, ಸತ್ಯ ಕಹಿ. ಕಳೆದ ನವೆಂಬರ್‌ನಲ್ಲಿ ಬೆಂಗಳೂರಲ್ಲಿ ಅವರ ಐದು ಪುಸ್ತಕಗಳ ಬಿಡುಗಡೆ ಕಾರ್ಯಕ್ರಮವಿತ್ತು. ಮುನ್ನೂರು ಮಂದಿ ಸೇರಿದ್ದ ಸಭೆಯಲ್ಲಿ, ಭಾಷಣ ಮಾಡಲೆಂದು ಬಂದಿದ್ದ ಸಿ.ಎನ್. ರಾಮಚಂದ್ರನ್ ಸರ್ ಹೊರತಾಗಿ, ಸಭಿಕರಲ್ಲಿ ಒಬ್ಬನೇ ಒಬ್ಬ ಸಾಹಿತಿ ಕಾಣಿಸಿದ್ದಿರಲಿಲ್ಲ. ಅಲ್ಲಿ ಭಾಗವಹಿಸಿದ್ದವರಲ್ಲಿ ಬಹುಪಾಲು ಎಲ್ಲರೂ ಉರ್ದು ಕವಿ ಮಾಹೆರ್ ಮನ್ಸೂರ್ ಜಾತಿಯವರೇ ಎಂಬುದು ಅವರನ್ನೆಷ್ಟು ಹಿಂಸಿಸಿತ್ತೆಂದರೆ ಅವರ ಕಣ್ಣಂಚು ನೀರಾಗಿತ್ತು.

ಅದಕ್ಕೆ ಕಾರಣಗಳುಂಟು. ‘ಬೆಣ್ಣೆ ಕದ್ದು ಕೂಡಾ ನಿಮ್ಮಂತಾಗದೆ ಹೋದೆನೆಲ್ಲಾ?’ ಎಂಬ ಕೊರಗು ಅವರನ್ನು ಆ ದಿನ ಬಹುವಾಗಿ ಕಾಡಿತ್ತು. ಇವತ್ತು ಟೀವಿಯಲ್ಲಿ, ನಿಸಾರ್ ಸರ್ ಜೊತೆಗೆ ಬಹುಕಾಲ ಒಡನಾಡಿದವರೊಬ್ಬರು ಬಹಳ ಪ್ರೀತಿಯಿಂದ ಶ್ರದ್ಧಾಂಜಲಿ ಅರ್ಪಿಸುತ್ತಾ ಹೇಳಿದ್ದು, ‘ಅವರು ಒಬ್ಬ ಮುಸ್ಲಿಮ್ ಅಂತ ಅನ್ನಿಸ್ತಾನೇ ಇರಲಿಲ್ಲ’. ಏನಿದರ ಅರ್ಥ? ಬಿಡಿ ಸಾರ್...

‘ಒಳಗೊಳಗೆ ಬೇರು ಕೊಯ್ದು, ಲೋಕದೆದುರಲ್ಲಿ ನೀರು ಹೊಯ್ದು, ನನ್ನ ಸಲಹುವ ನಿಮ್ಮ ಕಪಟ ಗೊತ್ತಿದ್ದರೂ ಗೊತ್ತಿಲ್ಲದಂತೆ ನಟಿಸಿ, ಚಕಾರವೆತ್ತದೆ ನಿಮ್ಮೊಡನೆ ಕಾಫಿ ಹೀರಿ, ಪೇಪರೋದಿ ಹರಟಿ ಬಾಳ ತಳ್ಳುವುದಿದೆ ನೋಡಿ. ಅದು ಬಹಳ ಕಷ್ಟದ ಕೆಲಸ.’ ಅವರ ಆತ್ಮಕ್ಕೆ ಶಾಂತಿ ಸಿಗಬಹುದೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.