ಆನ್‌ಲೈನಿನ ಕಾಳಜಿಯೇ ಬೇರೆ
ಮೊಬೈಲಿನ ಮಾತುಗಾರಿಕೆಯೇ ಬೇರೆ
ಫೇಸ್ ಬುಕ್ಕಿನ ಫೇಸಿಗೂ ನಿಜವಾದ ಫೇಸಿಗೂ
ಇಷ್ಟು ಅಂತರವಿಟ್ಟು ನೀನಿದ್ದರೇನು ಹತ್ತಿರ

ಒಂದೇ ಮನೆಯೊಳಗಿದ್ದು ಕಂಪ್ಯೂಟರಲ್ಲಿ ಚ್ಯಾಟ್ ಮಾಡುವ
ಗಮ್ಮತ್ತಿನ ಮುಂದೆ ದಾಂಪತ್ಯವೂ ಬೋರು
ನೆಟ್ ಕೊರಿಯರ್‌ನವ ಹುಟ್ಟುಹಬ್ಬದ ಗುಲಾಬಿ ತಂದು ಕೊಡುವಾಗ
ಬಾಗಿಲ ಸಂದಿಯಲ್ಲಿ ನಿಂತು ಹೆಂಡತಿಯನ್ನು ನೋಡುವುದು
ಎ಼ಷ್ಟು ಚಂದ
ಬೇಗನೇ ಲಾಗ್ ಆನಾಗಿ ಅವಳ ಥ್ಯಾಂಕ್ಸ್‌ಗೆ
ಕಾಯುತ್ತ ಕೂರುವ ಆನಂದದಲ್ಲಿ
ಕೊಲ್ಲುತ್ತಲೇ ಇರು ಹಾಗೇ ಸುಮ್ಮನೆ
ಎಂಬ ಹುಡುಗಿಯಂತೆ ಅವಳು ಕಾಡಲು

ಅವಳ ರೂಮಲ್ಲಿ ಅವಳು ಯಾರನ್ನೋ ಲೈಕ್ ಮಾಡುತ್ತ
ತನ್ನ ರೂಮಲ್ಲಿ ಇವನು ಇನ್ನಾರೊಂದಿಗೋ ಷೇರ್ ಮಾಡುತ್ತ
ಬ್ಲಾಗಿನಲ್ಲಿ ಕಳೆದು ಚಾನೆಲ್‌ನಲ್ಲಿ ಎದ್ದು ಆಪ್‌ನಲ್ಲಿ ತಡಕಿ
ಇನ್ ಬಾಕ್ಸ್‌ನಲ್ಲಿ ಇಣುಕಿ ಕೊನೆಗೆ ಸೈನ್ ಔಟಾಗಿ

ಗಂಧ ತೀಡಿದವರಂತೆ ರಾತ್ರಿ ಮಂಚದ ಮೇಲೆ
ಎದುರು ಬದುರು ಕೂತು
ನೇರಾನೇರ ಮಾತನಾಡುವ ಸ್ಕಿಲ್‌ನ ತರಬೇತಿಗೆ
ನಾಳೆ ಜಾಯಿನ್ ಆಗಲು ತೀರ್ಮಾನಿಸುವಲ್ಲಿ

ಮಗೂಗೊಂದು ಸ್ಮಾರ್ಟ್ ಫೋನ್ ಬುಕ್ ಮಾಡಿ ಎಂದಳು
ಅವಳ ಹೊಟ್ಟೆಯಲ್ಲಿ ಮಗು ಕಾಲು ಆಡಿಸಿತು
ಎಂಥ ರೋಮಾಂಚನ
ತಕ್ಷಣ ಇದನ್ನು ಟ್ವೀಟ್ ಮಾಡಬೇಕು
ಇಬ್ಬರೂ ಎದ್ದರು
ಗುಡ್ ನೈಟ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.