ಪ್ಯಾಂಟಿನ ಹರಿದ ಭಾಗವ ಹೊಲೆಸಿ ಹಾಕಿಕೊಂಡಾಗ
ಊರೆಲ್ಲ ಅದನ್ನೇ ನೋಡುತ್ತಿರುವುದು ಎನಿಸಿ
ಅದು ಕಾಣದ ಹಾಗೆ ಅಡ್ಡಕ್ಕೆ ಪುಸ್ತಕ ಕೈ ಬ್ಯಾಗು
ಏನೂ ಇಲ್ಲದಾಗ ಯಾರದೋ ಹಿಂದೆ ಸ್ವಲ್ಪ ಸರುಗಿ
ತಿರುಗಿ ದೂರ ಕೂತು ಎಲ್ಲರಿಗಿಂತ ಹಿಂದೆ ನಡೆದು

ಅದು ಇಲ್ಲೇ ಯಾಕೆ ಹರಿಯಿತೋ ಜನರ ಸೆಳೆವಂತೆ
ಕೆಳಗೋ ಸೊಂಟದಲ್ಲೋ ಹರಿಯಬಹುದಿತ್ತು ಯಾರೂ ಕಾಣದಂತೆ
ಸಾವಿರ ಸಲ ಅಂದುಕೊಳ್ಳುತ್ತಲೇ ಮುಗಿದ ಸೆಮಿಸ್ಟರ್
ಆಲ್ಟರ್ ಆಗುತ್ತಲೇ ಮುಗಿದ ಯೌವನ ಡಾರ್ನ್ ಮಾಡಿದ ಕನಸು

ಮೊನ್ನೆ ಸಾನಿಯಾ ಮಿರ್ಜಾ ಮೊಣಕಾಲ ಹತ್ತಿರ ಹರಿದ
ಪ್ಯಾಂಟ್ ಹಾಕಿಕೊಂಡು ಕಾರಿನಿಂದ ಇಳಿದು
ಆತ್ಮವಿಶ್ವಾಸದಿಂದ ನಡೆದು ವೇದಿಕೆಯ ಮೇಲೆ ಕೂತಾಗ
ಇನ್ನೂ ಜಾಸ್ತಿ ಫೇಡ್ ಜಾಸ್ತಿ ಫೇಡ್ ಎಂದು ಆಸೆ ಪಡುತ್ತ
ಅಲ್ಲಿ ಹರಿದಿರಲಿ ಇಲ್ಲಿ ಹರಿದಿರಲಿ ಅಂತ ಮಕ್ಕಳು
ಬಣ್ಣಗೆಟ್ಟ ಬಟ್ಟೆಗೆ ಅಂಗಡಿಯಲ್ಲಿ ಚೌಕಾಸಿ ಮಾಡುತ್ತಿರುವಾಗ
ಹೀಗೇ ಹರಿದು ಬಂದ ನೆನಪ ಅಮೃತವಾಹಿನಿ

ಬಟ್ಟೆ ಮಡಿಸಿ ರಾತ್ರಿ ತಲೆದಿಂಬಿನಡಿ ಇಟ್ಟು ಬೆಳಿಗ್ಗೆ ಉಡುತ್ತಿದ್ದ
ತಾತನ ವಂಶದ ಮೊಮ್ಮಗ
ಕನಸುಗಳೇ ಇಲ್ಲದ ದಾರಿಯಲಿ ಸಾಗುವುದು ಎಂತು ಎಂದು
ಉರು ಹಚ್ಚುತ್ತಿದ್ದಾನೆ ಒಂದು ಕಿವಿಯ ರಿಂಗು ನೀವಿಕೊಂಡು
ನಾಳೆ ತುಘಲಕ್ ಪಾತ್ರವಂತೆ
ನೋಡುವನೆ ನನ್ನೆಡೆಗೆ
ಕಟ್ಟುಮಸ್ತು ದೊರೆ, ಥ್ರಿಲ್ಲು ಜಿಮ್ಮು ಪ್ಯಾಕು ಟ್ಯಾಟೂ ಗೀಟೂ ದರಬಾರಿಂದ
ಉಳಿಸಿಕೊಂಡ ತಲೆಯ ಮೇಲಿನ ಪುಟ್ಟ ನಡುಗಡ್ಡೆಯಿಂದ

ಮಿಡಿ ತೊಟ್ಟ ಮಗಳ ಭರತನಾಟ್ಯದ ಪ್ರಾಕ್ಟೀಸು
ಬಡ ಮಕ್ಕಳಿಗೆ ಮೈಮುಚ್ಚಲು ಬಟ್ಟೆ ಕೊಟ್ಟು ಬಂದಿದ್ದಾಳೆ ನಿನ್ನೆಯಷ್ಟೇ
ದೇಸೀ ಕಾಂಟೆಂಪೊರರಿ ಫ್ಯೂಷನ್ನು ಫ್ಯಾಷನ್ನು ಪ್ಯಾಶನ್ನು
ಸದಾ ಒಂದು ಕೈಯಲ್ಲಿ ಮುಂದೆ ಬರುವ ಕೂದಲ ಹಿಂದೆ ತಳ್ಳಿಕೊಂಡು
ನಾಳೆ ಮಾನವ ಸರಪಳಿಯಂತೆ ಇನ್ನೊಂದು ಕೈಯಲ್ಲಿ

ಇಂತು ಪುರಸೊತ್ತಿಲ್ಲದ ಚಿ.ರಾ, ಚಿ.ಸೌ. ಗಳ ಹಿಂದೆ ಹಿಂದೆ ಹೋಗಿ
ಕೈತುತ್ತು ಬಾಯಿತುತ್ತು ನೀಡುತ್ತಿರಲು ನನ್ನ ಹ.ಕುಂ.ಶೋ
ಅಮೃತವಾಹಿನಿಯೊಂದು ಹರಿಯುತಿದೆ ರೂಮಿಂದ ರೂಮಿಗೆ

ಮಕ್ಕಳು ಹೇಳುತ್ತಿದ್ದಾರೆ ಟೀವಿಯಲ್ಲಿ ಕಣ್ಣು ಅರಳಿಸಿಕೊಂಡು
ನಾವು ಇವೊತ್ತು ಈ ಮಟ್ಟಕ್ಕೆ ಬರಲು
ತಂದೆ ತಾಯಿಗಳೇ ಕಾರಣ
ಐ ಲವ್ ಯು ಪಪ್ಪಾ ಮಮ್ಮೀ

ಹೆಂಡತಿಯ ಮುಖ ನೋಡಿದೆ
ಷರ್ಟಿಗೆ ಗುಂಡಿ ಹಾಕುತ್ತ ಕೂತಿದ್ದಾಳೆ
ಅವಳ ನಗು ಈಗಲೂ ಚಂದ ಮೊನ್ನೆ ಆಗಿತ್ತೇನೋ ಫೇಷಿಯಲ್ಲು
ನನ್ನ ಮಾಸಲು ನಗೆ ಅವಳಿಗೂ ಇಷ್ಟವಂತೆ
ಇವಳು ಪಾರ್ಲರಲ್ಲಿ ಕೂದಲು ಟ್ರಿಂ ಮಾಡಿಸಿಕೊಳ್ಳುವಲ್ಲಿ
ನಾಳೆ ಕ್ಯಾಪ್ ಹಾಕಿಸಬೇಕಿದೆ ನಾನು ಡೆಂಟಿಸ್ಟ್ ಬಳಿ

ಮ್ಯೂಟ್ ಮಾಡಿದ ಟೀವಿಯಲ್ಲಿ ಮ್ಯಾರೇಜ್ ಡಾಟ್ ಕಾಂ
ಬಾಗಿಲು ತೆರೆದೇ ಇದೆ ಬ್ರೋಕರ್ ಬರುವ ಹೊತ್ತು
ಅಷ್ಟರಲ್ಲಿ ಮಕ್ಕಳ ಫೋನು
ಮಾತು ಹರಿವ ಮೊದಲು
‘ಓಂ ಮಣಿ ಪದ್ಮೇ ಹಂ’ ರಿಂಗ್ ಟೋನು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.