‘ಸಮ್ಮಿಲನ್ 2.0 ಮತ್ತು ಇತರ ‘ಇ’ ಕಾಲದ ಕಥೆಗಳು’, ವೃತ್ತಿಯಲ್ಲಿ ಪತ್ರಕರ್ತರಾಗಿರುವ ಚರಣ್ ಸಿ.ಎಸ್. ಅವರ ಎರಡನೇ ಕಥಾಸಂಕಲನ. ಕೃತಿಯ ಶೀರ್ಷಿಕೆಯೇ ಉಲ್ಲೇಖಿಸುವಂತೆ ಇವುಗಳು ‘ಇಂಟರ್‌ನೆಟ್’ ಕಾಲಕ್ಕೆ ಬಹು ಹತ್ತಿರದವು. ಒಟ್ಟು 10 ಕಥೆಗಳ ಗುಚ್ಛವಿದು.

ಕೋವಿಡ್ ತಂದೊಡ್ಡಿದ ಲಾಕ್‌ಡೌನ್ ಪರಿಸ್ಥಿತಿ ಜನರನ್ನು ಡಿಜಿಟಲ್ ಲೋಕದತ್ತ ಮತ್ತಷ್ಟು ಸೆಳೆದಿತ್ತು. ‘ವರ್ಕ್‌ಫ್ರಂ ಹೋಂ’, ‘ಗೂಗಲ್‌ಮೀಟ್’, ‘ಆನ್‌ಲೈನ್ ಕ್ಲಾಸ್’ ಹೀಗೆ ಹೊಸ ಪದಗಳು ಜನ್ಮತಾಳಿ ಸಾಮಾನ್ಯ ಜನರ ‘ಜೀವನ’ಕೋಶ ಸೇರ್ಪಡೆಯಾದವು. ಎಲ್ಲರೂ ಅನುಭವಿಸಿದ ಈ ‘ಕಟ್ಟು’ಪಾಡಿನೊಳಗೇ ಲೇಖಕರು ತಮ್ಮೊಳಗಿದ್ದ ಕಥಾ ಎಳೆಗಳಿಗೆ ಅಕ್ಷರರೂಪ ಕೊಟ್ಟಿದ್ದಾರೆ. ಹೀಗಾಗಿ ಇಲ್ಲಿರುವ ಬಹುತೇಕ ಕಥೆಗಳಿಗೆ ಡಿಜಿಟಲ್ ನೆಂಟಸ್ತಿಕೆ ಇದೆ. ಇವುಗಳ ಪೈಕಿ ಕೆಲ ಕಥೆಗಳು ಕನ್ನಡ ಪತ್ರಿಕೆಗಳಲ್ಲಿ ಪ್ರಕಟವಾಗಿವೆ.

ಕೃತಿಯ ಶೀರ್ಷಿಕೆ ಹೊತ್ತಿರುವ ಕಥೆ ‘ಸಮ್ಮಿಲನ್ 2.0’ನಲ್ಲಿ ಸ್ಟಾರ್ಟ್‌ಅಪ್ ಕಂಪನಿಗೆ ಜನ್ಮವಿತ್ತ ಯುವಕನೊಬ್ಬನ ಸರಳವಾದ ಕಥೆಯಿದೆ. ಮೊದಲೇ ಹೇಳಿದಂತೆ ಇಲ್ಲಿರುವ ಕಥೆಗಳೆಲ್ಲವೂ ‘ಇ’ ಕಾಲದ ಕಥೆಯಾಗಿರುವ ಕಾರಣ ಆಡುಮಾತಿನಲ್ಲಿ ಬಳಸುವ ಆಂಗ್ಲಪದಗಳ ಗೊಂಚಲುಗಳೇ ಇಲ್ಲಿನ ಎಲ್ಲ ಕಥೆಗಳಲ್ಲೂ ಇವೆ. ಜೊತೆಗೆ ವಾಟ್ಸ್‌ಆ್ಯಪ್‌ನಲ್ಲಿ ಸಿಗುವ ಇಮೊಜಿಗಳೂ ಅಲ್ಲಿಲ್ಲಿ ಇಣುಕುತ್ತವೆ. ಕೊನೆಯ ಅಧ್ಯಾಯ ‘ಗುಚ್ಛ’ದಲ್ಲಿ ನ್ಯಾನೊ ಕಥೆಗಳೂ ಇವೆ, ‘ಸ್ಕ್ರ್ಯಾಚ್ ಕಾರ್ಡ್’ನಂತಹ ಕೆಲ ಮೈಕ್ರೊ ಕಥೆಗಳೂ ಇವೆ. ಆ ನಿಟ್ಟಿನಲ್ಲಿ ಕಥೆಯ ಜಾಡಿನಲ್ಲಿ ಹೊಸ ಹೆಜ್ಜೆ ಗುರುತು ಮೂಡಿಸುವ ಉತ್ಸಾಹವನ್ನೂ ಈ ಸಂಕಲನ ಹೊಂದಿದೆ.

ಕೃತಿ: ಸಮ್ಮಿಲನ್ 2.0 ಮತ್ತು ಇತರ ‘ಇ’ ಕಾಲದ ಕಥೆಗಳು

ಲೇ: ಚರಣ್ ಸಿ.ಎಸ್

ಪ್ರ: ಟೋಟಲ್ ಕನ್ನಡ, ಬೆಂಗಳೂರು

ಸಂ: 9686152902

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.