ಮೂಕಜೀವಿಗಳೂ ಕಥೆ ಹೇಳುತ್ತವೆ. ಸಂತಸ, ನೋವು ಹಂಚಿಕೊಳ್ಳುತ್ತವೆ. ಇವುಗಳನ್ನು ಅರಿಯುವ ಮನಸ್ಸು, ಅನುಭವಿಸುವ ಆಸಕ್ತಿ ಇರಬೇಕು. ಇಂತಹ ಅನುಭಾವದ ಲೋಕವನ್ನು ಅಕ್ಷರ ಹಾಗೂ ಚಿತ್ರಗಳ ರೂಪದಲ್ಲಿ ಓದುಗರ ಮುಂದೆ ತೆರದಿಟ್ಟವರು ಪಶುವೈದ್ಯ ಬಿ.ಕೆ.ರಮೇಶ್ (ಬೊಪ್ಪಸಮುದ್ರ).

ಲೇಖಕರು ಬೆಳೆದ ಪರಿಸರ, ಅನುಭವಿಸಿದ ಬದುಕು ಮತ್ತು ವೃತ್ತಿ ಬದುಕಿನಲ್ಲಿ ಕಂಡ ಕಥೆಗಳ ಬುತ್ತಿ ಈ ಕೃತಿ. ಅನುಭವಗಳನ್ನು ಕಥನ ರೂಪದಲ್ಲಿ ಲೇಖಕರು ಹೇಳುತ್ತಾ ಹೋಗಿದ್ದಾರೆ. ಹೀಗಾಗಿ ಲೇಖಕರ ಜೊತೆಯಲ್ಲೇ ನಿಂತು ಈ ಘಟನೆಗಳನ್ನು ಓದುಗರೂ ಅನುಭವಿಸುವಂತೆ ಬರವಣಿಗೆಯಿದೆ. ಪಶುವೈದ್ಯ ‘ಕರೆಂಟ್ ಡಾಕ್ಟ್ರು’ ಆಗಿದ್ದು ಹೇಗೆ?, ಹೀಟ್‌ಗೆ ಬಂದ ‘ನಾಚಿಕೆ ಎಮ್ಮೆ’ಯ ಪುರಾಣ... ಹೀಗೆ 17 ಅಧ್ಯಾಯಗಳಲ್ಲಿ ಕಥೆಯ ರೀತಿ ಅನುಭವಗಳಿವೆ. ಚಾಮರಾಜನಗರ ಜಿಲ್ಲೆಯ ಹಳ್ಳಿ ಮೂಲೆಗಳ ಜನರೂ ಜಾನುವಾರುಗಳೂ ಆನೆಗಳೂಜಾನುವಾರು ಜಾತ್ರೆಗಳೂ ಅಲ್ಲಿ ಸುಳಿಯುವ ರಾಜಕೀಯವೂ (ಈಗಲೂ ಅಲ್ಲಲ್ಲಿ ಕಾಣುವುದು) ಇಲ್ಲಿ ಚಿತ್ರಿತವಾಗಿವೆ. ಪಶುವೈದ್ಯನೊಬ್ಬನಿಗೆ ಜನಜೀವನವನ್ನು ಹತ್ತಿರದಲ್ಲೇ ನೋಡುವ, ಅಂತಃಕರಣದ ಕಣ್ಣನ್ನು ತೆರೆದು ನೋಡುವ ಅಗಾಧ ಅವಕಾಶ ಇಲ್ಲಿದೆ ಎಂಬುದನ್ನು ಲೇಖಕರು ತೋರಿಸಿಕೊಟ್ಟಿದ್ದಾರೆ.

‘ನೀನು ಎಮ್ಮೆಗಳ ನೋವಿಗೆ ಮದ್ದು ಕೊಡೋ ಡಾಕ್ಟ್ರು. ಅವುಗಳಿಗೆ ಮೋಸ ಮಾಡ್ಬೇಡಪ್ಪಾ...’ ಅನ್ನುವುದು ಲೇಖಕರ ತಾಯಿ ಹೇಳಿದ ಮಾತು. ಇದು ಎಲ್ಲ ಕ್ಷೇತ್ರಗಳ ವೃತ್ತಿಪರರಿಗೂ ಅನ್ವಯಿಸುವ ಮಾತು. ಅದನ್ನು ಪಾಲಿಸಿಕೊಂಡೇ ವೃತ್ತಿ ಬದುಕನ್ನು ನಡೆಸಿದೆ ಎನ್ನುವ ಲೇಖಕರ ಅನುಭವದ ‘ಮೆಲುಕು’ ಕೃತಿಯಲ್ಲಿದೆ.

ಕೃತಿ: ಮೆಲುಕು

ಲೇ: ಡಾ.ಬಿ.ಕೆ.ರಮೇಶ್

ಪ್ರ: ನಗು ನೆಲೆ ಪ್ರಕಾಶನ, ಬೆಂಗಳೂರು

ಸಂ: 9448407118

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.