ಚೆನ್ನೈ: ಕರ್ಣಾಟಕ ಸಂಗೀತ ಗಾಯಕ ಟಿ.ವಿ ಶಂಕರನಾರಾಯಣನ್ ಅವರು ಶುಕ್ರವಾರ ಸಂಜೆ ಚೆನ್ನೈನಲ್ಲಿ ನಿಧನರಾಗಿದ್ದಾರೆ.

ಅವರಿಗೆ 77 ವರ್ಷ ವಯಸ್ಸಾಗಿತ್ತು. ಪತ್ನಿ, ಮಗ ಮತ್ತು ಮಗಳನ್ನು ಅವರು ಅಗಲಿದ್ದಾರೆ.

ಕರ್ಣಾಟಕ ಸಂಗೀತದ ಮೇರು ಶಿಖರ ಎನಿಸಿದ್ದ ಮಧುರೈ ಮಣಿ ಅಯ್ಯರ್ ಶೈಲಿಯಲ್ಲಿ ಹಾಡುತ್ತಿದ್ದ ಟಿ.ವಿ.ಶಂಕರನಾರಾಯಣನ್ ಅವರು 2003 ರಲ್ಲಿ ಪದ್ಮಭೂಷಣ ಪ್ರಶಸ್ತಿಗೆ ಭಾಜನರಾಗಿದ್ದರು.

ವೆಂಬು ಅಯ್ಯರ್ ಅವರ ಮಗನಾದ ಶಂಕರನಾರಾಯಣನ್ ಅವರು ಮಣಿ ಅಯ್ಯರ್ ಅವರ ಸೋದರ ಸಂಬಂಧಿಯೂ ಹೌದು.

ಪದ್ಮಭೂಷಣ ಪ್ರಶಸ್ತಿ, ಸಂಗೀತ ಕಲಾನಿಧಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯೂ ಸೇರಿದಂತೆ ಹಲವಾರು ಗೌರವಗಳು ಟಿ. ವಿ. ಶಂಕರನಾರಾಯಣನ್ ಅವರಿಗೆ ಸಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.