ಹೃದಯ ವೈದ್ಯರ ಅನುಭವ ಕಥನದೊಂದಿಗೆ ಲೇಖಕರ ಸ್ವಾನುಭವವೂ ಸೇರಿ ಇಲ್ಲಿ ಮಾತುಗಳು ಹರಿದಿವೆ. ಬೇರೆ ಬೇರೆ ಲೇಖನಗಳ ಗುಚ್ಛವಿದಲ್ಲ. ಹೃದಯಕ್ಕೆ ಸಂಬಂಧಿಸಿದ ಆಚೆ ಈಚೆಗಿನ ಸಂಗತಿಗಳನ್ನು ಒಟ್ಟುಗೂಡಿಸಿ ಹಲವು ಪ್ರಶ್ನೆಗಳನ್ನು ಖ್ಯಾತ ಹೃದಯ ತಜ್ಞ, ಜಯದೇವ ಆಸ್ಪತ್ರೆಯ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಅವರ ಮುಂದಿಟ್ಟಿದ್ದಾರೆ. ಪ್ರತಿಯೊಂದಕ್ಕೂ ‘ಟು ದಿ ಪಾಯಿಂಟ್’ ಅನ್ನುವ ಹಾಗೆ ವೈದ್ಯರು ಹೃದಯದಿಂದಲೇ ಮಾತನಾಡಿದ್ದಾರೆ.

ಕೋವಿಡ್ ನಂತರ ಹೃದಯ ಸಮಸ್ಯೆಗಳ ಸಂಖ್ಯೆ ಹೆಚ್ಚಾಗಿರುವುದು, ನಟ ಪುನೀತ್ ರಾಜ್‌ಕುಮಾರ್ ಅವರ ಹಠಾತ್ ನಿಧನ, ತಪಾಸಣೆಗಳ ಸಂಖ್ಯೆ ಹೆಚ್ಚಾಗಿರುವುದು ಇತ್ಯಾದಿ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಕೃತಿ ಹೆಚ್ಚು ಮಾತನಾಡಿದೆ. ಆ ದೃಷ್ಟಿಯಲ್ಲೇ ಈ ಕೃತಿ ಹೆಚ್ಚು ಪ್ರಸ್ತುತವೂ ಹೌದು.

ಹೃದಯ ಕಸಿ, ದೇಹದಿಂದ ಹೊರಗಿದ್ದ ಹೃದಯಕ್ಕೆ ಚಿಕಿತ್ಸೆ ಕೊಟ್ಟಿರುವುದು, ಅಪರಿಚಿತರು ಹೃದಯಾಘಾತಕ್ಕೆ ಒಳಗಾದ ಸಂದರ್ಭಗಳು, ವೈದ್ಯರ ತಂಡದ ಪರಿಶ್ರಮದ ಹೃದಯ ತಟ್ಟುವ ಘಟನೆಗಳನ್ನು ಉದಾಹರಣೆಗಳ ಸಹಿತ ಕೃತಿ ಕಟ್ಟಿಕೊಟ್ಟಿದೆ.

ಹೃದಯ ಸಂಬಂಧಿತ ವಿಷಯಗಳ ಮಿಥ್ಯೆಗಳತ್ತಲೂ ಬೆಳಕು ಚೆಲ್ಲಿದೆ. ಅನಗತ್ಯ ಔಷಧ ತೆಗೆದುಕೊಳ್ಳದಂತೆಯೂ ಎಚ್ಚರಿಕೆ ಇದೆ. ಮಹಿಳೆಯರೇಕೆ ಹೃದಯದ ವಿಚಾರದಲ್ಲಿ ಅಲಕ್ಷ್ಯ ವಹಿಸುತ್ತಾರೆ ಎಂಬ ಚರ್ಚೆಯೂ ಇಲ್ಲಿದೆ. ಹಲವು ಪುಟ್ಟ ಪುಟ್ಟ ‘ಹೃದಯದ’ ಕಥೆಗಳಿವೆ. ಎಲ್ಲ ವಯೋಮಾನದವರು, ಆಧುನಿಕ ಜೀವನಶೈಲಿಗೆ ಒಗ್ಗಿಕೊಂಡಿರುವವರು ಓದಬೇಕಾದ ಕೃತಿ.

ಕೃತಿ: ಹೃದಯದ ಮಾತು

ಲೇ: ಮಂಜುನಾಥ ಚಾಂದ್

ಪ್ರ: ವೀರಲೋಕ ಬುಕ್ಸ್ ಪ್ರೈವೇಟ್ ಲಿಮಿಟೆಡ್

ಸಂ: 7022122121

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.