‘ಅಕ್ಕ ಕೆಫೆ’ ಆರಂಭಿಸುವ ಉತ್ಸಾಹದಲ್ಲಿ ಸಂಘದ ಮಹಿಳೆಯರು ಪೂರ್ವಭಾವಿ ಸಭೆ ಸೇರಿದ್ದರು.

‘ಮಹಿಳೆಯರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು ಎಂದು ಅಕ್ಕ ಕೆಫೆ ತೆರೆಯಲು ಸರ್ಕಾರ ನಮಗೆ ಅವಕಾಶ ನೀಡಿದೆ. ನಾವು ಸಮರ್ಥವಾಗಿ ಕೆಫೆಯನ್ನು ಮುನ್ನಡೆಸೋಣ’ ಸಂಘದ ಅಧ್ಯಕ್ಷೆ ಸುಮಿ ಹೇಳಿದಳು.

‘ಇವಳು ಚಿತ್ರಾನ್ನ ಚೆನ್ನಾಗಿ ಮಾಡುತ್ತಾಳೆ, ಚಿತ್ರಾನ್ನ ತಯಾರಿಕೆ ಜವಾಬ್ದಾರಿಯನ್ನು ಇವಳಿಗೇ ವಹಿಸೋಣ’ ಸರೋಜಾಳ ಹೆಸರನ್ನು ಸೂಚಿಸಿದಳು ಮಂಗಳಾ.

‘ಇಡ್ಲಿ, ವಡೆ, ದೋಸೆ ಯಾರು ಮಾಡ್ತೀರಿ?’ ಸುಮಿ ಕೇಳಿದಳು.

‘ಈ ಲಕ್ಷ್ಮಿಗೆ ದೋಸೆಗೂ ಇಡ್ಲಿಗೂ ವ್ಯತ್ಯಾಸವೇ ಗೊತ್ತಿಲ್ಲ. ಇವಳು ಮಾಡುವ ದೋಸೆಯು ಇಡ್ಲಿಯ ಗಾತ್ರ ಇರುತ್ತದೆ, ಇಡ್ಲಿಯು ದೋಸೆಯಂತೆ ತೆಳುವಾಗಿ ಇರುತ್ತದೆ. ಇವಳಿಗೆ ದೋಸೆ ಹೊಣೆಗಾರಿಕೆ ವಹಿಸಬೇಡಿ’ ರೇಗಿಸಿದಳು ನಾಗರತ್ನ.

ಕೋಪಗೊಂಡ ಲಕ್ಷ್ಮಿ, ‘ನೀನೇ ಇಡ್ಲಿ, ದೋಸೆ ಮಾಡು, ನಾನು ಚಟ್ನಿ ರುಬ್ಬುತ್ತೇನೆ’ ಎಂದಳು.

‘ಅಡುಗೆ, ತಿಂಡಿ ಮಾಡಿದರೆ ಸಾಕಾಗೋದಿಲ್ಲ, ಗ್ರಾಹಕರನ್ನು ಕೆಫೆಗೆ ಸೆಳೆಯುವ ವ್ಯವಹಾರ ಜ್ಞಾನ ರೂಢಿಸಿಕೊಳ್ಳಬೇಕು’ ಅಂದಳು ಸುಮಿ.

‘ಮನೆರುಚಿಯ ಊಟ, ತಿಂಡಿ ಲಭ್ಯ’ ಅಂತ ಬೋರ್ಡ್ ಹಾಕಿ ಗ್ರಾಹಕರನ್ನು ಆಕರ್ಷಿಸೋಣ’.

‘ಬೇಡ, ಮನೆ ಊಟ, ತಿಂಡಿ ಬೇಜಾರಾದವರು ಇಲ್ಲೂ ಅದೇ ರುಚಿ ಅಂದುಕೊಂಡು ಬರೋದಿಲ್ಲ. ನಾವೆಲ್ಲಾ ಸೇರಿ ಮಾಡೋದ್ರಿಂದ ‘ಬಹುರುಚಿ ಭಾಗ್ಯ’ ಅಂತ ಬೋರ್ಡ್ ಬರೆಯೋಣ’ ಸವಿತಾಳ ಸಲಹೆ.

‘ನಮ್ಮ ನಮ್ಮ ಫ್ಯಾಮಿಲಿಗಳು ಕೆಫೆಗೆ ಬರುವುದನ್ನು ಕಡ್ಡಾಯ ಮಾಡಿದರೆ ಇತರ ಫ್ಯಾಮಿಲಿಗಳೂ ಬರ್ತವೆ’.

‘ನೀವ್ಯಾರೂ ಮನೆಯಲ್ಲಿ ಅಡುಗೆ ಮಾಡಬೇಡಿ. ನಿಮ್ಮ ಗಂಡ, ಮಕ್ಕಳು, ಅತ್ತೆ, ಮಾವ ಕೆಫೆಗೇ ಬಂದು ದುಡ್ಡು ಕೊಟ್ಟು ಊಟ, ತಿಂಡಿ ತಿಂದು, ಹತ್ತಾರು ಜನರಿಗೆ ಪ್ರಚಾರ ಮಾಡಲು ತಿಳಿಸಿ...’ ಎಂದು ಸುಮಿ ಸಲಹೆ ನೀಡಿದಳು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.