ಹೈದರಾಬಾದ್: ಆಂಧ್ರಪ್ರದೇಶವು ತನ್ನ ನೂತನ ರಾಜಧಾನಿ ವಿಷಯವಾಗಿ ಸಮಸ್ಯೆಯನ್ನು ಮೈಮೇಲೆ ಎಳೆದು ಕೊಂಡಿದೆ. ವಿಜಯವಾಡ ಹಾಗೂ ಗುಂಟೂರು ನಗರಗಳ ಮಧ್ಯೆ ಕೃಷ್ಣಾ ನದಿ ದಂಡೆಯಲ್ಲಿ 33,೦೦೦ ಎಕರೆ ವಿಸ್ತಾರವಾದ ಪ್ರದೇಶದಲ್ಲಿ ಸಿಂಗಪುರ ವನ್ನು ನಾಚಿಸುವಂತೆ ಇಂದ್ರನ ‘ಅಮರಾ ವತಿ’ಯನ್ನು ಧರೆಗಿಳಿಸುವುದಕ್ಕೆ ಮುಖ್ಯ ಮಂತ್ರಿ ಚಂದ್ರಬಾಬು ನಾಯ್ಡು ಶತಾಯ ಗತಾಯ ಪ್ರಯತ್ನಕ್ಕೆ ಕೈಹಾಕಿದ್ದಾರೆ.

ದೇಶದ ಇತಿಹಾಸವನ್ನು ಇಣುಕಿ ನೋಡಿದರೆ ಹಿಂದೆಂದೂ ಹೊಸ ರಾಜಧಾನಿ ನಿರ್ಮಾಣ ವಿಷಯ ಇಷ್ಟೊಂದು ಕೌತುಕ ಮೂಡಿಸಿರಲಿಲ್ಲ ಮತ್ತು ಟೀಕೆಗೆ ಗುರಿಯಾಗಿರಲಿಲ್ಲ. ಇದಕ್ಕೆ ಕಾರಣ ರಾಜಧಾನಿಯ ಸಂಕೀರ್ಣ ಸ್ವರೂಪ ಹಾಗೂ ಗಾತ್ರ. ಮಾಧ್ಯಮಗಳ ಗಮನ ಸೆಳೆಯುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ, ಸಿಂಗಪುರ ಪ್ರಧಾನಿ ಲೀ ಸೈನ್ ಲೂಂಗ್‌್ ಹಾಗೂ ಜಪಾನ್ ಪ್ರಧಾನಿ ಶಿಂಜೊ ಅಬೆ ಅವರ ಸಮ್ಮುಖದಲ್ಲಿ ರಾಜಧಾನಿ ‘ಅಮರಾವತಿ’ಗೆ ಶಂಕುಸ್ಥಾಪನೆ ನೇರವೇರಿಸುವುದಕ್ಕೆ ಆಂಧ್ರ ಸರ್ಕಾರ ನಿರ್ಧರಿಸಿದೆ.

ಅವಿಭಜಿತ ಆಂಧ್ರ ರಾಜ್ಯದ ಸಿ.ಎಂ ಆಗಿದ್ದಾಗ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಮೈಕ್ರೊಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರನ್ನು ಹೈದರಾಬಾದ್‌ಗೆ ಕರೆತರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ನಾಯ್ಡು ಅವರ ರಾಜಕೀಯ ಬದುಕಿನಲ್ಲಿ ‘ಅಮರಾವತಿ’ ನಿರ್ಮಾಣ ದೊಡ್ಡ ಕನಸು. ಯಾವುದೇ ಕಾರ ಣಕ್ಕೂ ಅವರು ಇದರಿಂದ ಹಿಂದೆ ಸರಿಯುವುದಿಲ್ಲ.

ವಿಧಾನಸಭೆ, ರಾಜ ಭವನ, ಸಚಿವಾಲಯ ಹಾಗೂ ಇತರ ಇಲಾಖೆಗಳನ್ನು ಇಲ್ಲಿ ನಿರ್ಮಿಸ ಲಾಗುತ್ತದೆ. ಇದಕ್ಕಾಗಿ 300 ರಿಂದ 400 ಎಕರೆ ಮೀಸಲಿಡಲಾಗುತ್ತದೆ. ಉಳಿದ ಪ್ರದೇಶವನ್ನು ಯಾವ ರೀತಿ ಅಭಿವೃದ್ಧಿಪಡಿಸಬೇಕಾಗುತ್ತದೆ ಎಂದರೆ ಇದಕ್ಕೆ ಮೂಲ ಧನವೇ ಬೇಕಾಗುತ್ತದೆ. ನಾಯ್ಡು ಅವರ ಅತಿರೇಕಗಳಿಗೆ ಹಣಕಾಸು ನೆರವು ನೀಡಲು ಸಾಧ್ಯವಿಲ್ಲ ಎಂದು ಕೇಂದ್ರವು ಖಡಾಖಂಡಿತವಾಗಿ ಹೇಳಿದೆ. ರಾಜ್ಯದ ರಾಜ ಧಾನಿಯಲ್ಲಿ ಹೈಕೋರ್ಟ್‌್ ಸೇರಿದಂತೆ ಪ್ರಮುಖ ಕಟ್ಟಡಗಳು ಮಾತ್ರ ಇರ ಬೇಕು ಎಂದೂ ಹೇಳಿದೆ.

ನೂತನ ರಾಜಧಾನಿಯಲ್ಲಿ ವಿಶಿಷ್ಟ ಗೋಪುರವೊಂದನ್ನು ನಿರ್ಮಿಸುವುದಕ್ಕೆ ಆಂಧ್ರ ಸರ್ಕಾರವು ಸಿಂಗಪುರದ ಅಸೆಂಡಾಸ್ ಸಿಂಗ್‌ಬ್ರಿಜ್‌್ ಕಂಪೆನಿಗೆ 275 ಎಕರೆ ಭೂಮಿ ಮಂಜೂರು ಮಾಡಿದೆ. ಕಂಪೆನಿಗೆ 3,000 ಎಕರೆ ಜಾಗ ಅಭಿವೃದ್ಧಿ ಪಡಿಸುವಂತೆ ಹೇಳಲಾಗಿತ್ತು. ಆದರೆ ರಾಜಕೀಯ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರವು ಇದನ್ನು 275 ಎಕರೆಗೆ ಸೀಮಿತಗೊಳಿಸಿತು. ಗೋಪುರ ನಿರ್ಮಾಣ ಗುತ್ತಿಗೆ ಸಲುವಾಗಿ ಇತ್ತೀಚೆಗೆ ಅಸೆಂಡಾಸ್ ಹಾಗೂ ರಾಜಧಾನಿ ವಲಯ ಅಭಿವೃದ್ಧಿ ಪ್ರಾಧಿಕಾರ (ಸಿಆರ್‌ಡಿಎ) ಮಧ್ಯೆ ವಿಜಯವಾಡದಲ್ಲಿ ಸಭೆ ನಡೆದಿತ್ತು.

219 ಚದರ ಕಿ.ಮೀ ವ್ಯಾಪ್ತಿಯಲ್ಲಿ ‘ಅಮರಾವತಿ’ ತಲೆ ಎತ್ತಲಿದೆ. ಪ್ರಮುಖ ವಾಣಿಜ್ಯ ಕೇಂದ್ರ, ಕೈಗಾರಿಕಾ ಪಾರ್ಕ್‌ಗಳನ್ನು ಇದು ಒಳಗೊಳ್ಳಲಿದೆ. ಇದಲ್ಲದೇ, ಸುತ್ತಮುತ್ತಲಿನ ವಸತಿ ಪ್ರದೇಶಗಳಲ್ಲಿ ಇದು ಉದ್ಯೋಗಸೃಷ್ಟಿಗೆ ಬೆಂಬಲ ನೀಡಲಿದೆ. ಜನ ತಮ್ಮ ಮನೆಯ ಸನಿಹವೇ ಕೆಲಸ ಮಾಡಬಹುದು. ಹೊಸ ರಾಜಧಾನಿಯು 2035ರ ಹೊತ್ತಿಗೆ 33ಲಕ್ಷ ಹೊಸ ಉದ್ಯೋಗ ಸೃಷ್ಟಿ ಸುತ್ತದೆ ಮತ್ತು 1.2 ಕೋಟಿ ಜನಸಂಖ್ಯೆಗೆ ಆಶ್ರಯ ತಾಣವಾಗಲಿದೆ ಎಂದು ಆಂಧ್ರ ಸರ್ಕಾರ ಲೆಕ್ಕಾಚಾರ ಹಾಕಿದೆ.

ಅಕ್ಟೋಬರ್ 22ರಂದು ನಡೆ ಯಲಿರುವ ‘ಅಮರಾವತಿ’ ಶಂಕುಸ್ಥಾಪ ನೆಯ ಅಧಿಕೃತ ಆಮಂತ್ರಣವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಒಪ್ಪಿ ಕೊಂಡಿದ್ದಾರೆ. ಆದರೆ ಸಿಂಗಪುರ ಹಾಗೂ ಜಪಾನ್ ಪ್ರಧಾನಿಗಳು ಈ ಬಗ್ಗೆ ಏನನ್ನೂ ಹೇಳಿಲ್ಲ. ಶಿಷ್ಟಾಚಾರದ ಪ್ರಕಾರ, ವಿದೇಶಾಂಗ ಸಚಿವಾಲಯವನ್ನು ಕಡೆಗಣಿಸಿ ಇಂತಹ ಕಾರ್ಯಕ್ರಮಕ್ಕೆ ವಿದೇಶಿ ಗಣ್ಯರನ್ನು ಆಹ್ವಾನಿಸುವುದಕ್ಕೆ ಸಾಧ್ಯವಿಲ್ಲ ಎನ್ನಲಾಗುತ್ತಿದೆ. ಆದಾಗ್ಯೂ, ನಾಯ್ಡು ಅವರು ಈ ಕಾರ್ಯಕ್ರಮಕ್ಕೆ ₹100 ಕೋಟಿ ಖರ್ಚು ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇದರ ಜವಾಬ್ದಾರಿಯನ್ನು ಕಾರ್ಯಕ್ರಮ ನಿರ್ವಹಣಾ ಸಂಸ್ಥೆಯೊಂದಕ್ಕೆ ವಹಿಸಿಕೊಟ್ಟಿದ್ದಾರೆ.

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ರಾಜ್ಯಸಭೆಯಲ್ಲಿ ಭರವಸೆ ನೀಡಿದ್ದರು. ಆದರೆ ಎನ್‌ಡಿಎ ಸರ್ಕಾರಕ್ಕೆ ಇದು ಇಷ್ಟ ಇಲ್ಲ. ಆದ ಕಾರಣ ‘ಅಮರಾವತಿ ನಗರ’ ಅಭಿವೃದ್ಧಿ ಯೋಜನೆಗೆ ಹಣಕಾಸು ನೆರವಿಗೆ ಆಂಧ್ರ ಸರ್ಕಾರವು ಹೊರಗಿನ ಸಂಸ್ಥೆಗಳನ್ನು ನೆಚ್ಚಿಕೊಳ್ಳಬೇಕಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.