ಬೇಸಿಗೆಯ ಆರೋಗ್ಯ ಸಮಸ್ಯೆಗಳು ಯಾವುವು? ಪರಿಹಾರಗಳೇನು?
ನಮ್ಮ ದೇಹವು ಸುಗಮವಾಗಿ ಕಾರ್ಯ ನಿರ್ವಹಿಸಲು ದೇಹದ ಉಷ್ಣತೆಯು ನಿರ್ದಿಷ್ಟ ಮಿತಿಯೊಳಗೆ ಇರಬೇಕು. ಯಾವುದೇ ಕಾರಣಕ್ಕೆ ಈ ಮಿತಿಯನ್ನು ಮೀರಿದರೆ ಮಿದುಳಿನಲ್ಲಿ ಇರುವ ತಾಪಮಾನ ನಿರೀಕ್ಷಣಾ ಕೇಂದ್ರವು ಬೆವರುಗ್ರಂಥಿಗಳಿಗೆ ಸಂದೇಶವನ್ನು ಕಳುಹಿಸಿ ಕಾರ್ಯಪ್ರವೃತ್ತವಾಗುವಂತೆ ಮಾಡುತ್ತದೆ. ಬೆವರು–ನೀರಿನ ಮೂಲಕ ಅಧಿಕ ಉಷ್ಣತೆ ಹೊರ ಹೋಗುವುದಲ್ಲದೆ, ಆವಿಯಾಗುವಾಗ ಚರ್ಮ ತಂಪಾಗುವುದು. ಇದಲ್ಲದೆ ಚರ್ಮದ ಮೂಲಕ ಆಗುವ ಉಷ್ಣ ವಿಕಿರಣ ಮತ್ತು ಸಂವಹನ ಕೂಡ ತಾಪ ವಿಸರ್ಜನೆಯಲ್ಲಿ ಮುಖ್ಯ ಪಾತ್ರವನ್ನು ವಹಿಸುವವು.Last Updated 3 ಮೇ 2022, 2:03 IST