ನೀವು ಆರುಣಿ(ಉದ್ದಾಲಕ)ಯ ಕಥೆಯನ್ನು ಕೇಳಿರಬಹುದು. ಅವನು ಧೌಮ್ಯಮುನಿಯ ಶಿಷ್ಯ. ಅವನು ಒಮ್ಮೆ ಕಾಡಿಗೆ ಕಟ್ಟಿಗೆಯನ್ನು ತರಲು ಹೋಗಿದ್ದಾಗ ಹೊಲದ ಕಾಲುವೆಯ ದಡ ಬಿರಿದು, ನೀರು ಹರಿದು ಪೋಲಾಗುತ್ತಿರುವುದನ್ನು ಕಂಡ. ಪಾಪ! ಆಗ ಅವನ ಬಳಿ ಹಾರೆಯಾಗಲಿ, ಪಿಕ್ಕಾಸಿಯಾಗಲಿ ಇರಲಿಲ್ಲ; ಇದ್ದಿದ್ದರೂ ಅವನು ಸಣ್ಣವನು ಅದನ್ನು ಸರಿಪಡಿಸಿ, ನೀರನ್ನು ನಿಲ್ಲಿಸಲು ಅವನಿಂದ ಆಗುತ್ತಿರಲಿಲ್ಲ. ಆದರೆ ಅವನಿಗೆ ಅಪಾಯ ಅರಿವಾಯಿತು. ಕೂಡಲೇ ಬಿರುಕು ಬಿಟ್ಟ ಕಡೆ ತಾನೇ ನೀರಿಗೆ ಅಡ್ಡ ಮಲಗಿದ. ಇತ್ತ ಬಹಳ ಹೊತ್ತು ಶಿಷ್ಯನನ್ನು ಕಾಣದೆ ಹುಡುಕಿ ಬರುವಾಗ ನೀರಲ್ಲಿ ಮಲಗಿದ್ದ ಇವನನ್ನು ಗುರುಗಳು ಕಂಡರು. ಅವರಿಗೆ ಪರಿಸ್ಥಿತಿ ಅರ್ಥವಾಯಿತು. ಉದ್ದಾಲಕನನ್ನು ಅಲ್ಲಿಂದ ಎಬ್ಬಿಸಿದರು. ಇತರ ಶಿಷ್ಯರು ಮತ್ತು ಅಗತ್ಯ ಸಲಕರಣೆಗಳೊಡನೆ ಬಂದು ಬದುವನ್ನು ಸರಿ, ಹರಿಯುತ್ತಿದ್ದ ನೀರನ್ನು ನಿಲ್ಲಿಸಿದರು. ಇದು ಆ ಕಥೆ.

ನಮ್ಮ ರಕ್ತದಲ್ಲಿ ಪ್ಲೇಟ್ಲೇಟ್ ಎಂಬ ಕಣ ಇದೆ. ನಮಗೆ ಗಾಯವಾಗಿ, ಅದರಿಂದ ರಕ್ತನಾಳಗಳು ಭೇದಿಸಲ್ಪಟ್ಟರೆ, ಆ ಕೂಡಲೇ ಅಲ್ಲಿ ತನ್ನ ಸಂಗಡಿಗರೊಂದಿಗೆ ತೆರಳಿ ಅಡ್ಡ ಮಲಗಿ ರಕ್ತಸ್ರಾವವನ್ನು ಕಡಿಮೆ ಮಾಡುವ ಪ್ರಯತ್ನ ಮಾಡುವುದು ಇದರ ಕೆಲಸ. ಸ್ವಲ್ಪ ಹೊತ್ತಿನಲ್ಲಿ ಅವುಗಳ ಸಂದೇಶ ಮಿದುಳಿಗೆ ಹೋಗಿ ತಲುಪಿ, ರಕ್ತಹೆಪ್ಪು ಗಟ್ಟಿಸುವ ಸಾಮಗ್ರಿಗಳು (clotting factors) ಸ್ಥಳಕ್ಕೆ ಧಾವಿಸಿ ಮುಂದಿನ ಕ್ರಮವನ್ನು ಕೈಗೊಳ್ಳುವವು. ಒಂದು ವೇಳೆ ಈ ಕಣಗಳು ನಮ್ಮ ದೇಹದಲ್ಲಿ ಬಹಳ ಕಡಿಮೆ ಆದರೆ ಆಗ ನಮ್ಮಲ್ಲಿ ರಕ್ತಸ್ರಾವ ಆಗಬಹುದು. ನಿಮಗೆ ತಿಳಿದಂತೆ ಡೆಂಗಿ ಜ್ವರದಲ್ಲಿ ಇವುಗಳ ಸಂಖ್ಯೆ ಕಡಿಮೆ ಆಗುವುದು. ಒಂದು ಅರ್ಥದಲ್ಲಿ, ಪ್ಲೇಟ್ಲೇಟ್ಗಳನ್ನು ಜನಪ್ರಿಯಗೊಳಿಸಿದ ಶ್ರೇಯಸ್ಸು ಡೆಂಗಿ ಜ್ವರಕ್ಕೆ ಸಲ್ಲಬೇಕು ಎನ್ನಬಹುದು! ಈ ಕಣಗಳು ಮೊದಲೇ ನಮ್ಮ ಶರೀರದಲ್ಲಿ ಸದ್ದು ಗದ್ದಲ ಇಲ್ಲದೆ ಕೆಲಸ ಮಾಡುತ್ತಿದ್ದವು; ಯಾರೂ ಆ ಕಡೆಗೆ ಗಮನ ಹರಿಸಿರಲಿಲ್ಲ.

ಡೆಂಗಿ ಜ್ವರದ ರೋಗಿಯ ಸಾಮಾನ್ಯ ರಕ್ತಪರೀಕ್ಷೆಯಲ್ಲಿ ಇವುಗಳ ಸಂಖ್ಯೆ ಕಡಿಮೆ ಆಗುವುದು ಕಂಡುಬಂದಾಗ ಆಗ ಅದು ಸುದ್ದಿ ಆಯಿತು. ಅಂದ ಹಾಗೆ, ಡೆಂಗಿ ಜ್ವರದಲ್ಲಿ ಜನರು ತಿಳಿದುಕೊಂಡಿರುವಂತೆ ಈ ಕಾರಣದಿಂದ ಅಪಾಯ ಕಡಿಮೆ. ಡೆಂಗಿ ಶಾಕ್ ಎಂಬುದೊಂದಿದೆ. ಅದು ಅಪಾಯ ತರುವುದು. ಪ್ಲೇಟ್ಲೇಟ್ ಹೆಚ್ಚಿಸಲು ಕಿವಿಹಣ್ಣು, ಪಪ್ಪಾಯಿಹಣ್ಣು ಮತ್ತು ಅದರ ಎಲೆಗಳನ್ನು ತಿನ್ನಬೇಕಿಲ್ಲ. ಡೆಂಗಿ ಕಾಯಿಲೆಯಲ್ಲಿ ತನ್ನಿಂದ ತಾನೇ ಪ್ಲೇಟ್ಲೇಟ್ಗಳ ಪ್ರಮಾಣ ಸರಿ ಆಗುವುದು. ಯಾವುದೇ ರಕ್ತಸ್ರಾವ ಇಲ್ಲದಿದ್ದರೆ ಮಿಲಿಲೀಟರ್ಗೆ ಹತ್ತು ಸಾವಿರಕ್ಕಿಂತ ಪ್ಲೇಟ್ಲೇಟ್ಗಳ ಸಂಖ್ಯೆ ಕಡಿಮೆ ಇಲ್ಲದಿದ್ದರೆ ಪ್ಲೇಟ್ಲೇಟ್ಗಳ ಮರುಪೂರಣವನ್ನು ಮಾಡಬಾರದು ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮಾರ್ಗಸೂಚಿ ಹೇಳುತ್ತದೆ.

ಆರೋಗ್ಯವಂತ ಮನುಷ್ಯನ ರಕ್ತದಲ್ಲಿ ಪ್ಲೇಟ್ಲೇಟ್ಗಳು ಒಂದು ಮಿಲಿಲೀಟರ್ಗೆ 1.5 ಲಕ್ಷದಿಂದ 4.5 ಲಕ್ಷದಷ್ಟು ಇರುವುದು. ಪ್ಲೇಟ್ಲೇಟ್ಗಳ ಕಣಗಳು ಕೆಂಪು ಮತ್ತು ಬಿಳಿರಕ್ತ ಕಣಗಳಂತೆ ಆಸ್ಥಿಮಜ್ಜೆಯಲ್ಲಿ ಉತ್ಪಾದನೆ ಆಗಿ 7ರಿಂದ 10 ದಿನಗಳ ತಮ್ಮ ಆಯುಸ್ಸು ಮುಗಿದ ಮೇಲೆ ಗುಲ್ಮ(spleen)ದಲ್ಲಿ ನಾಶ ಹೊಂದುವವು. ಡೆಂಗಿ ಅಲ್ಲದೆ ಇತರ ಸೋಂಕುಕಾಯಿಲೆಗಳಾದ ಮಲೇರಿಯಾ, ಟೈಪಸ್ ಸಾಮಾನ್ಯ ವೈರಲ್ ಸೋಂಕು, ಅಸ್ಥಿಮಜ್ಜೆಯನ್ನು ವ್ಯಾಪಿಸುವ ಕಾನ್ಸರ್ ಮತ್ತು ಅದರ ಚಿಕಿತ್ಸೆ, ಮದ್ಯಪಾನ, ವಿಟಮಿನ್ ಬಿ 12 ಕೊರತೆ ಕೂಡ ಪ್ಲೇಟ್ಲೇಟ್ಗಳ ಕೊರತೆಗೆ ಕಾರಣಗಳಾಗಬಹುದು. ‘ಐ ಟಿ ಪಿ’ ಎಂಬ ರೋಗದಲ್ಲಿ ಸರಿಯಾಗಿ ಉತ್ಪತ್ತಿ ಆದಂತಹ ಕಣಗಳನ್ನು ದೇಹದ ರೋಗನಿರೋಧಕ ವ್ಯವಸ್ಥೆಯೇ ಗುರಿ ತಪ್ಪಿ ಅತಿಯಾಗಿ ನಶಿಸುವ ಕಾರಣ ಇವುಗಳ ಸಂಖ್ಯೆ ಕಡಿಮೆ ಆಗುವುದು.

ಈ ಕಣಗಳು ಕೆಲವೊಮ್ಮೆ ಶರೀರದಲ್ಲಿ ರೋಗಗಳು ಉಂಟಾಗುವ ಕ್ರಿಯೆಯಲ್ಲಿ ಭಾಗಿಯಾಗುವುದೂ ಇದೆ. ಹೃದಯ ಮತ್ತು ಮಿದುಳಿನ ರಕ್ತನಾಳಗಳಲ್ಲಿ ಕೊಲೆಸ್ಟ್ರಾಲ್ ಶೇಖರಣೆ ಆದಾಗ ಪ್ಲೇಟ್ಲೇಟ್ಗಳ ಕಣಗಳು ಅಲ್ಲಿ ಶೇಖರವಾಗಿ, ರಕ್ತವು ಹೆಪ್ಪುಗಟ್ಟುವಂತೆ ಮಾಡುತ್ತವೆ. ಇದರಿಂದ ಸ್ಥಳೀಯ ರಕ್ತ ಸರಬರಾಜು ನಿಂತು, ಆ ವ್ಯಕ್ತಿಗೆ ಹೃದಯಾಘಾತ ಮತ್ತು ‘ಸ್ಟ್ರೋಕ್’ (ಮಿದುಳಿನ ಆಘಾತ) ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ಪ್ಲೇಟ್ಲೇಟ್ಗಳ ನಿರೋಧಕಗಳಾದ ಆಸ್ಪಿರಿನ್ನಂತಹ ಔಷಧಗಳನ್ನು ಕೊಡಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.