ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ನವೀನ ಗಂಗೋತ್ರಿ

ಸಂಪರ್ಕ:
ADVERTISEMENT

ಇಂದು ನಾಗಪಂಚಮಿ: ನಾಗಪೂಜೆಯಲ್ಲಿ ಸಂಸ್ಕೃತಿಯ ಪದರಗಳು

ಸಾಂಪ್ರದಾಯಿಕವಾಗಿ ಭಾರತೀಯರು ಆಚರಿಸಿಕೊಂಡು ಬಂದಿರುವ ಹಬ್ಬಗಳು ಪ್ರಕೃತಿಯ ನಾನಾ ಸಂಗತಿಗಳೊಡನೆ ನಾವು ಬೆಳೆಸಿಕೊಂಡ ಪರಂಪರಾಗತ ಸಂವಾದವೆಂದೇ ಹೇಳಬಹುದು. ಮಳೆ, ಚಳಿ, ಬೇಸಿಗೆ – ಹೀಗೆ ಪ್ರಕೃತಿಯ ಎಲ್ಲ ಅವಸ್ಥಾಂತರದ ಹೊತ್ತಿಗೂ ಒಂದಿಲ್ಲೊಂದು ಹಬ್ಬಗಳು ನಮ್ಮಲ್ಲಿ ಆಚರಣೆಗೊಳ್ಳುತ್ತವೆ.
Last Updated 8 ಆಗಸ್ಟ್ 2024, 23:40 IST
ಇಂದು ನಾಗಪಂಚಮಿ: ನಾಗಪೂಜೆಯಲ್ಲಿ ಸಂಸ್ಕೃತಿಯ ಪದರಗಳು

ಇಂದು ಉತ್ಥಾನ ದ್ವಾದಶಿ | ವಿಷ್ಣುವಿನ ಎಚ್ಚರವೂ ತುಳಸಿಯ ಮದುವೆಯೂ

ವಿವಿಧ ಸಮುದಾಯಗಳಲ್ಲಿ ಮತ್ತು ಭಾಷೆಗಳಲ್ಲಿ ತುಲಸೀವಿವಾಹಕ್ಕೆಂದೇ ರಚಿತವಾದ ಸಾಂಪ್ರದಾಯಿಕ ಹಾಡುಗಳು ಸ್ಥಳೀಯ ಸಂಸ್ಕೃತಿಗಳ ಶ್ರೀಮಂತಿಕೆಯ ಪ್ರತೀಕವೂ ಹೌದು.
Last Updated 24 ನವೆಂಬರ್ 2023, 0:08 IST
ಇಂದು ಉತ್ಥಾನ ದ್ವಾದಶಿ | ವಿಷ್ಣುವಿನ ಎಚ್ಚರವೂ ತುಳಸಿಯ ಮದುವೆಯೂ

ಇಂದು ನರಕ ಚತುರ್ದಶಿ: ಇರುಳ ವಿರುದ್ಧ ಬೆಳಕಿನ ಯುದ್ಧ

ಬೆಳಕನ್ನು ಸಂಭ್ರಮಿಸುವುದು ಭಾರತೀಯರಿಗೆ ಬಲು ಸಹಜವಾಗಿ ಒದಗಿಬಂದ ಪ್ರವೃತ್ತಿ. ಹಬ್ಬ ಅಥವಾ ಉತ್ಸವ ಯಾವುದೇ ಇದ್ದರೂ ಅದರಲ್ಲಿ ದೀಪ ಮತ್ತು ಅಗ್ನಿಗೆ ಆದ್ಯಸ್ಥಾನ ಇದ್ದೇ ಇದೆ.
Last Updated 11 ನವೆಂಬರ್ 2023, 23:30 IST
ಇಂದು ನರಕ ಚತುರ್ದಶಿ: ಇರುಳ ವಿರುದ್ಧ ಬೆಳಕಿನ ಯುದ್ಧ

ಪಿತೃತರ್ಪಣೆಯ ಮಹಾಕಾಲ: ಇಂದು ಮಹಾಲಯ ಅಮಾವಾಸ್ಯೆ

ಪಿತೃಗಳು, ದೇವತೆಗಳು ಮತ್ತು ಋಷಿಗಳು ಭಾರತೀಯ ಜೀವನಪದ್ಧತಿಯಲ್ಲಿ ಶ್ರದ್ಧೇಯವಾದ ಹಲವು ಸಂಗತಿಗಳಲ್ಲಿ ಪ್ರಮುಖವಾದವು. ಜವಾಬ್ದಾರಿಯುತವಾದ ಗೃಹಸ್ಥನೊಬ್ಬನು ಪಿತೃ, ದೇವತಾ ಮತ್ತು ಋಷಿ – ಈ ಮೂವರ ಕುರಿತಾಗಿಯೂ ಮಾಡಬೇಕಾದ ಕರ್ತವ್ಯವನ್ನು ಸ್ಮೃತಿಗಳೂ ಕಲ್ಪಗ್ರಂಥಗಳೂ ಪದೇ ಪದೇ ಹೇಳಿದ್ದಿದೆ.
Last Updated 13 ಅಕ್ಟೋಬರ್ 2023, 22:32 IST
ಪಿತೃತರ್ಪಣೆಯ ಮಹಾಕಾಲ: ಇಂದು ಮಹಾಲಯ ಅಮಾವಾಸ್ಯೆ

ಹೋಳಿ ವಿಶೇಷ: ಕೆಡುಕನ್ನು ಸುಡುವ ಬಣ್ಣದ ಹಬ್ಬ

ಹೋಲಿಕಾ-ಕಾಮದಹನ, ಅಥವಾ ಹೋಳಿಹಬ್ಬ ಜಾನಪದವೂ ಶಾಸ್ತ್ರೀಯವೂ ಆಗಿರುವ ಒಂದು ಪರ್ವಾಚರಣೆ.
Last Updated 7 ಮಾರ್ಚ್ 2023, 19:32 IST
ಹೋಳಿ ವಿಶೇಷ: ಕೆಡುಕನ್ನು ಸುಡುವ ಬಣ್ಣದ ಹಬ್ಬ

ವೈಕುಂಠ ಏಕಾದಶಿ: ಅಧ್ಯಾತ್ಮ ಸಾಧನೆಯ ಪರ್ವಕಾಲ

ವಿಷ್ಣುವಿನ ಮಹಿಮೆ ಮತ್ತು ಲೋಕೋದ್ಧಾರ ಕವಾದ ಅನುಗ್ರಹಗಳ ಕುರಿತಾಗಿ ಭಾಗವತಾದಿ ಪುರಾಣಗಳಲ್ಲಿ ಮತ್ತು ಮಹಾಭಾರತದಲ್ಲಿ ಸಾಕಷ್ಟು ಚಿಂತನೆಗಳು ಸಿಗುತ್ತವೆ. ವೈಕುಂಠವೆನ್ನುವುದು ವಿಷ್ಣುವಿನ ಧಾಮ, ಅಲ್ಲಿ ಕುಂಠತೆಗೆ (ವಿಕಲತೆ, ಜಾಡ್ಯ, ಕೊರತೆ) ಅವಕಾಶವೇ ಇಲ್ಲ. ಹಾಗಾಗಿಯೇ ಅದು ವೈಕುಂಠ (ವಿಗತಾ ಕುಂಠತಾ ಯಸ್ಮಾತ್). ಅದೇನಿದ್ದರೂ ಪೂರ್ಣತೆ, ನೈರ್ಮಲ್ಯ, ಸಮೃದ್ಧಿ ಮತ್ತು ಆನಂದದ ಬೀಡು. ಆ ಧಾಮದ ಅಧಿಪತಿಯೇ ಶ್ರೀಹರಿ ವಿಷ್ಣು. ವೈಕುಂಠ ಏಕಾದಶಿಯಾದರೋ ಪಾಪಗಳನ್ನೆಲ್ಲ ಕಳೆಯುವ ಮೂಲಕ ಮಾನವಾತ್ಮಕ್ಕೆ ವಿಷ್ಣುವಿನ ಈ ಧಾಮವನ್ನು ಸೇರುವುದಕ್ಕೆ ನೆರವಾಗುವ ದಿವಸವೆನ್ನುವುದು ಪರಂಪರೆಯ ಶ್ರದ್ಧೆ. ನಾರಾಯಣನ ಪರಂಧಾಮವಾದ ವೈಕುಂಠವನ್ನು ಸೇರಬೇಕೆನ್ನುವುದು ಪ್ರತಿಯೊಂದು ಜೀವದ ಗುರಿ ಮತ್ತು ಬಯಕೆ. ಅಲ್ಲಿ ಸೇರಿದ ಬಳಿಕ ಪುನರ್ಜನ್ಮ ವಾಗಲೀ, ಸಂಸಾರವಾಗಲೀ ಇರಲಾರದು. ಹಾಗಾಗಿ ವೈಕುಂಠದ ಹೆಸರಿನಲ್ಲಿಯೇ ಪ್ರಸಿದ್ಧವಾಗಿರುವ ಪೌಷಮಾಸದ ಶುಕ್ಲ ಏಕಾದಶಿಗೆ ಎಲ್ಲಿಲ್ಲದ ಮಹತ್ತು; ಮತ್ತಿದನ್ನು ‘ಮೋಕ್ಷದಾ’ ಎಂಬುದಾಗಿ ಕರೆದಿದ್ದೂ ಈ ಹಿನ್ನೆಲೆಯಲ್ಲಿಯೇ.
Last Updated 1 ಜನವರಿ 2023, 19:46 IST
ವೈಕುಂಠ ಏಕಾದಶಿ: ಅಧ್ಯಾತ್ಮ ಸಾಧನೆಯ ಪರ್ವಕಾಲ

ಇಂದು ನರಕ ಚತುರ್ದಶಿ | ಸಂಭ್ರಮವೇ ಮೈದಳೆವ ಹಬ್ಬ: ದೀಪಾವಳಿ

ಹಬ್ಬಗಳ ಸಾಲಿನಲ್ಲಿ ‘ದೀಪಾವಳಿ’, ‘ದೀಪವಲ್ಲಿ’, ‘ದೀಪಪ್ರತಿಪದೋತ್ಸವ’ ಇತ್ಯಾದಿ ಹೆಸರಿನ ದೀಪಗಳ ಹಬ್ಬಕ್ಕೆ ವಿಶಿಷ್ಟವಾದ ಸ್ಥಾನವಿದೆ. ಏಕೆಂದರೆ, ಉಳಿದ ಬಹುತೇಕ ಹಬ್ಬಗಳಂತೆ ಇದು ಆರಾಧನೆಯನ್ನು ಕೇಂದ್ರವಾಗುಳ್ಳ ಹಬ್ಬವಲ್ಲ; ಬದಲಿಗೆ ಲೌಕಿಕ ಬದುಕಿನ ಸೊಗಸನ್ನು ಮತ್ತು ಮಾನವೀಯ ಸಂತಸಗಳನ್ನು ಸಂಭ್ರಮಿಸುವ ಹಬ್ಬ. ಕರ್ನಾಟಕದ ಬಹುಭಾಗದಲ್ಲಿ ಈ ಹಬ್ಬವನ್ನು ದೊಡ್ಡ ಹಬ್ಬವೆಂದು ಕರೆಯುವ ರೂಢಿಯೂ ಇದೆ. ದೀಪಾವಳಿಯು ಸಾಂಪ್ರದಾಯಿಕವಾಗಿ ಐದು ದಿನಗಳ ಹಬ್ಬವಾಗಿದ್ದರೂ ವ್ಯಾಪಕವಾಗಿ ಎರಡು ದಿನಗಳ ಸಂಭ್ರಮವನ್ನು ಆಚರಿಸುವುದು ವಾಡಿಕೆ.
Last Updated 23 ಅಕ್ಟೋಬರ್ 2022, 21:00 IST
ಇಂದು ನರಕ ಚತುರ್ದಶಿ | ಸಂಭ್ರಮವೇ ಮೈದಳೆವ ಹಬ್ಬ: ದೀಪಾವಳಿ
ADVERTISEMENT
ADVERTISEMENT
ADVERTISEMENT
ADVERTISEMENT