ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :

ಸೌಖ್ಯ ಮೋಹನ್

ಸಂಪರ್ಕ:
ADVERTISEMENT

ಆಹಹಾ... ಹೆರಳೆಕಾಯಿ

ಕಂಚಿಕಾಯಿ ಕಿತ್ತಳೆ ಜಾತಿಗೆ ಸೇರಿದ್ದು. ಸಾಧಾರಣವಾಗಿ ಮನೆಯ ಹಿತ್ತಿಲು, ತೋಟಗಳಲ್ಲಿ ಒಂದೆರಡು ಮರಗಳಿರುತ್ತವೆ. ಇದಕ್ಕೆ ಹೆರಳೆಕಾಯಿ ಎಂದೂ ಹೇಳುತ್ತಾರೆ. ಇದರಿಂದ ರುಚಿಕರ ಅಡುಗೆ ತಯಾರಿಸಬಹುದು.
Last Updated 9 ಫೆಬ್ರುವರಿ 2024, 23:57 IST
ಆಹಹಾ... ಹೆರಳೆಕಾಯಿ

ಬಾಯಲ್ಲಿ ನೀರೂರಿಸುವ ಆಮಟೆಕಾಯಿ ಖಾದ್ಯಗಳು

ಈ ಸಿಹಿ ಅಮಟೆ ಮಾಮೂಲಿ ಅಮಟೆಗಿಂತ ತುಸು ಭಿನ್ನ. ಸ್ವಲ್ಪ ಸಿಹಿ- ಹುಳಿ ರುಚಿ. ಒಳಗಿನ ತಿರುಳು ಸಾಕಷ್ಟು ಇರುತ್ತದೆ. ಬೀಜ ಚಿಕ್ಕದಿರುತ್ತದೆ. ಅಡುಗೆಗೆ ಹೆಚ್ಚು ಸೂಕ್ತ. ಸಿಹಿ ಆಮಟೆಯಿಂದ ತಯಾರಿಸುವ ಕೆಲವು ಸಾಂಪ್ರದಾಯಿಕ ಅಡುಗೆಗಳನ್ನು ಸೌಖ್ಯ ಮೋಹನ್ ತಲಕಾಲುಕೊಪ್ಪ ಇಲ್ಲಿ ಪರಿಚಯಿಸಿದ್ದಾರೆ.
Last Updated 17 ಜೂನ್ 2023, 1:38 IST
ಬಾಯಲ್ಲಿ ನೀರೂರಿಸುವ ಆಮಟೆಕಾಯಿ ಖಾದ್ಯಗಳು

Recipe| ಬಜ್ಜಿ ಮೆಣಸಿನ ಬಗೆ ಬಗೆ ಖಾದ್ಯ

ಬಜ್ಜಿ ರೈಸ್ ಬೇಕಾಗುವ ಸಾಮಗ್ರಿ: ಬೋಂಡ ಮೆಣಸು 4-5 , ಉದುರಾದ ಅನ್ನ 4 ಕಪ್, ಈರುಳ್ಳಿ 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಪೆಪ್ಪೆರ್ ಪೌಡರ್ ಕಾಲು ಚಮಚ, ಹಸಿ ಮೆಣಸು 1, ಉಪ್ಪು, ನಿಂಬೆ ರಸ, ಎಣ್ಣೆ 4 ರಿಂದ 5 ಚಮಚ, ಜೀರಿಗೆ ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆಯನ್ನು ಸೇರಿಸಿ. ಈರುಳ್ಳಿ ಮತ್ತು ಹಸಿ ಮೆಣಸನ್ನು ಹೆಚ್ಚಿ ಅದಕ್ಕೆ ಹಾಕಿ ಹುರಿಯಿರಿ, ಚಿಟಿಕೆ ಉಪ್ಪು ಸೇರಿಸಿ. ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ. ಹೆಚ್ಚಿದ ಮೆಣಸು ಸೇರಿಸಿ, ಉಪ್ಪು ಮತ್ತು ಪೆಪ್ಪರ್ ಪೌಡರ್ ಹಾಕಿ ಬಾಡಿಸಿ, ಮೆಣಸು ಉಪ್ಪನ್ನು ಹೀರಿಕೊಳ್ಳಬೇಕು. ನಂತರ ಅನ್ನವನ್ನು ಹಾಕಿ, ಚೆನ್ನಾಗಿ ಮಿಶ್ರ ಮಾಡಿ, ಸ್ವಲ್ಪ ಹುರಿಯಿರಿ. ಕೊನೆಯಲ್ಲಿ ನಿಂಬೆ ರಸ ಸೇರಿಸಿ.
Last Updated 3 ಮಾರ್ಚ್ 2023, 19:31 IST
Recipe| ಬಜ್ಜಿ ಮೆಣಸಿನ ಬಗೆ ಬಗೆ ಖಾದ್ಯ

ನಳಪಾಕ: ಕುಂಬಳಕಾಯಿಯ ಸವಿ ರುಚಿ

ಕುಂಬಳಕಾಯಿ ಅಥವಾ ಚೀನಿಕಾಯಿ– ಎಲ್ಲೆಡೆ ಧಾರಾಳವಾಗಿ ಲಭ್ಯವಾಗುವ ತರಕಾರಿ. ಇದು ಬೆಳೆಯುವುದು ಸುಲಭ. ಬಳಸುವುದು ಸುಲಭ. ಇದರಲ್ಲಿ ‘ಎ’ ವಿಟಮಿನ್ ಇರುತ್ತದೆ. ಇದರಿಂದ ಮಾಡಿದ ಕೆಲವು ರಸರುಚಿಗಳು ಇಲ್ಲಿವೆ.
Last Updated 7 ಅಕ್ಟೋಬರ್ 2022, 19:30 IST
ನಳಪಾಕ: ಕುಂಬಳಕಾಯಿಯ ಸವಿ ರುಚಿ

ನಳಪಾಕ: ಗೇರು ಮೊಳಕೆಯ ಪಾಕ ವೈವಿಧ್ಯ

ಗೋಡಂಬಿ ಬೀಜ ತಿನ್ನುವುದು ಎಲ್ಲರಿಗೂ ಗೊತ್ತು. ಆದರೆ ಗೇರಿನ ಬೀಜದ ಹಸಿರು ಮೊಳಕೆಯ ಸೇವನೆಯ ಪರಿಚಯ ಬಹಳ ಕಡಿಮೆ. ಮರದಿಂದ ಬಿದ್ದ ಗೇರು ಬೀಜ ಮಳೆ ಬಂದಾಗ ಮೊಳಕೆಯೊಡೆಯುತ್ತದೆ. ದಕ್ಷಿಣ ಕನ್ನಡ ಮತ್ತು ಮಲೆನಾಡಿನಲ್ಲಿ ಅಲ್ಲಲ್ಲಿ ಕೆಲವೆಡೆ ಇದನ್ನು ಸಾಂಬಾರ್ ಮಾಡಲು ಬಳಸುತ್ತಾರೆ. ಇದು ಪೋಷಕಾಂಶಗಳಿಂದ ಸಮೃದ್ಧ. ಕಬ್ಬಿಣ, ಕ್ಯಾಲ್ಷಿಯಂ ಹಾಗೂ ನಾರಿನಂಶಗಳ ಆಗರ. ಗೋಡಂಬಿ ಬೀಜಕ್ಕಿಂತ ಮೊಳಕೆಯಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ. ಕೊಬ್ಬಿನ ಅಂಶ ಮೊಳಕೆಯೊಡೆಯುವಾಗ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಆರೋಗ್ಯಕ್ಕೆ ಅನುಕೂಲಕರ. ಈ ಗೇರು ಬೀಜ ಹಸಿರು ಮೊಳಕೆ ಬಳಸಿಕೊಂಡು ಹೊಸ ರುಚಿಗಳನ್ನೂ ತಯಾರಿಸಬಹುದು. ಅಂತಹ ಕೆಲವು ಹೊಸ ರುಚಿಯ ರೆಸಿಪಿಗಳು ಇಲ್ಲಿವೆ.
Last Updated 22 ಜುಲೈ 2022, 23:30 IST
ನಳಪಾಕ: ಗೇರು ಮೊಳಕೆಯ ಪಾಕ ವೈವಿಧ್ಯ

ನಳಪಾಕ: ಗೇರುಹಣ್ಣಿನ ರಸರುಚಿಗಳು

ಇದು ಗೇರುಹಣ್ಣಿನ ಕಾಲ. ಗೇರುಬೀಜಕ್ಕೆ ಹೋಲಿಸಿದರೆ ತಾಜಾಹಣ್ಣಿನ ಬಳಕೆಗೆ ಅಷ್ಟು ಪ್ರಾಮುಖ್ಯತೆ ಇಲ್ಲ. ಅದರ ಗಾಢ ಪರಿಮಳ ಕೆಲವರಿಗೆ ಹಿಡಿಸುವುದಿಲ್ಲ. ಇದಕ್ಕಿರುವ ಗಂಟಲು ಕೆರೆಸುವ ಗುಣ ತಾಜಾಹಣ್ಣನ್ನು ತಿನ್ನದಂತೆ ಹೆದರಿಸುತ್ತದೆ. ಜೊತೆಗೆ ಗೇರುಹಣ್ಣಿನ ರಸರುಚಿಗಳೂ ಕಮ್ಮಿ. ಅಲ್ಲಲ್ಲಿ ಕೆಲವರು ಬಳಸಿದರೂ, ಬಹುತೇಕ ಗೃಹಿಣಿಯರು ಯಾಕೋ ಆ ಬಗ್ಗೆ ಗಮನ ಹರಿಸಿದ್ದು ಕಡಿಮೆ. ಆದರೆ ತಾಜಾ ಗೇರುಹಣ್ಣಿನಿಂದ ಹಲವು ಬಗೆಯ ರುಚಿಕರ ರೆಸಿಪಿಗಳನ್ನು ಮಾಡಬಹುದು. ಈ ಹಣ್ಣಿನ ಕೆಲವು ರಸರುಚಿಗಳು ಇಲ್ಲಿವೆ.
Last Updated 22 ಏಪ್ರಿಲ್ 2022, 19:30 IST
ನಳಪಾಕ: ಗೇರುಹಣ್ಣಿನ ರಸರುಚಿಗಳು

ನಳಪಾಕ: ಬಾಳೆಕಾಯಿ ರೋಸ್ಟ್‌ ಸಮೋಸ, ನಗ್ಗೆಟ್ಸ್

ಬಾಳೆಕಾಯಿ ರೋಸ್ಟ್‌ ಸಮೋಸ, ನಗ್ಗೆಟ್ಸ್
Last Updated 3 ಡಿಸೆಂಬರ್ 2021, 19:30 IST
ನಳಪಾಕ: ಬಾಳೆಕಾಯಿ ರೋಸ್ಟ್‌ ಸಮೋಸ, ನಗ್ಗೆಟ್ಸ್
ADVERTISEMENT
ADVERTISEMENT
ADVERTISEMENT
ADVERTISEMENT