ಗೋಡಂಬಿ ಬೀಜ ತಿನ್ನುವುದು ಎಲ್ಲರಿಗೂ ಗೊತ್ತು. ಆದರೆ ಗೇರಿನ ಬೀಜದ ಹಸಿರು ಮೊಳಕೆಯ ಸೇವನೆಯ ಪರಿಚಯ ಬಹಳ ಕಡಿಮೆ. ಮರದಿಂದ ಬಿದ್ದ ಗೇರು ಬೀಜ ಮಳೆ ಬಂದಾಗ ಮೊಳಕೆಯೊಡೆಯುತ್ತದೆ. ದಕ್ಷಿಣ ಕನ್ನಡ ಮತ್ತು ಮಲೆನಾಡಿನಲ್ಲಿ ಅಲ್ಲಲ್ಲಿ ಕೆಲವೆಡೆ ಇದನ್ನು ಸಾಂಬಾರ್ ಮಾಡಲು ಬಳಸುತ್ತಾರೆ. ಇದು ಪೋಷಕಾಂಶಗಳಿಂದ ಸಮೃದ್ಧ. ಕಬ್ಬಿಣ, ಕ್ಯಾಲ್ಷಿಯಂ ಹಾಗೂ ನಾರಿನಂಶಗಳ ಆಗರ. ಗೋಡಂಬಿ ಬೀಜಕ್ಕಿಂತ ಮೊಳಕೆಯಲ್ಲಿ ಪೋಷಕಾಂಶಗಳು ಹೆಚ್ಚಿರುತ್ತವೆ. ಕೊಬ್ಬಿನ ಅಂಶ ಮೊಳಕೆಯೊಡೆಯುವಾಗ ಅರ್ಧದಷ್ಟು ಕಡಿಮೆಯಾಗುತ್ತದೆ. ಹಾಗಾಗಿ ಆರೋಗ್ಯಕ್ಕೆ ಅನುಕೂಲಕರ. ಈ ಗೇರು ಬೀಜ ಹಸಿರು ಮೊಳಕೆ ಬಳಸಿಕೊಂಡು ಹೊಸ ರುಚಿಗಳನ್ನೂ ತಯಾರಿಸಬಹುದು. ಅಂತಹ ಕೆಲವು ಹೊಸ ರುಚಿಯ ರೆಸಿಪಿಗಳು ಇಲ್ಲಿವೆ.

1. ಗೇರು ಮೊಳಕೆಯ ಸಲಾಡ್

ಬೇಕಾಗುವ ಸಾಮಗ್ರಿ: ಗೇರು ಮೊಳಕೆ ಅರ್ಧ ಕಪ್, ಈರುಳ್ಳಿ 1, ಟೊಮೆಟೊ 1, ಕ್ಯಾರೆಟ್ 1, ಕೊತ್ತಂಬರಿ ಸೊಪ್ಪು, ಹಸಿಮೆಣಸು 1–2, ನಿಂಬೆರಸ, ಉಪ್ಪು, ಪೆಪ್ಪೆರ್ ಪೌಡರ್ ಕಾಲು ಚಮಚ.

ತಯಾರಿಸುವ ವಿಧಾನ:

ಮೊದಲು ಈರುಳ್ಳಿ, ಟೊಮೆಟೊ ಮತ್ತು ಕೊತ್ತುಂಬರಿ ಸೊಪ್ಪನ್ನು ಸಣ್ಣಗೆ ಹೆಚ್ಚಿಕೊಳ್ಳಿ. ಅದಕ್ಕೆ ಕ್ಯಾರೆಟ್ ತುರಿದು ಸೇರಿಸಿ. ಹಸಿ ಮೆಣಸನ್ನು ಸಣ್ಣಗೆ ಹೆಚ್ಚಿ ಹಾಕಿ. ಗೇರು ಮೊಳಕೆಯನ್ನು ಎರಡು ಭಾಗ ಮಾಡಿ ಸೇರಿಸಿ. ನಂತರ ರುಚಿಗೆ ತಕ್ಕ ಉಪ್ಪು,ನಿಂಬೆರಸ, ಪೆಪ್ಪೆರ್ ಪೌಡರ್ ಹಾಕಿ, ಎಲ್ಲವನ್ನು ಚೆನ್ನಾಗಿ ಮಿಶ್ರ ಮಾಡಿ. ಬೇಕೆಂದರೆ ಒಗ್ಗರಣೆಯನ್ನೂ ಕೊಡಬಹುದು. ಈಗ ಗೇರು ಬೀಜದ ಹಸಿರು ಮೊಳಕೆಯ ಸಲಾಡ್ ರೆಡಿ.

2. ಗೇರು ಮೊಳಕೆಯ ಗ್ರೇವಿ

ಬೇಕಾಗುವ ಸಾಮಗ್ರಿ: ಗೇರು ಮೊಳಕೆ 1 ದೊಡ್ಡ ಕಪ್, ಟೊಮೆಟೊ -4, ಈರುಳ್ಳಿ -1, ಕೊತ್ತಂಬರಿ ಸೊಪ್ಪು, ಅರಿಸಿನ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ. ಸಾಂಬಾರ್ ಪುಡಿ-ಒಂದು ಚಮಚ, ಮೆಣಸಿನ ಪುಡಿ –ಎರಡು ಚಮಚ, ಗರಂ ಮಸಾಲ ಸ್ವಲ್ಪ, ಗೋಡಂಬಿ 8 ರಿಂದ 10, ಉಪ್ಪು ರುಚಿಗೆ ತಕ್ಕಷ್ಟು, ಹಾಲಿನ ಕ್ರೀಮ್ ಎರಡು ಚಮಚ, ಚಿಟಿಕೆ ಸಕ್ಕರೆ, ಎಣ್ಣೆ 4 ರಿಂದ 5 ಚಮಚ

ತಯಾರಿಸುವ ವಿಧಾನ:ಮೊದಲು ಬಾಣಲೆಯಲ್ಲಿ ಎಣ್ಣೆ ಹಾಕಿ ಹೆಚ್ಚಿದ ಈರುಳ್ಳಿ, ಟೊಮೆಟೊ ಹಾಕಿ. ನಂತರ ಉಪ್ಪು ಹಾಕಿ ಹುರಿಯಿರಿ. ಕೊತ್ತಂಬರಿ ಸೊಪ್ಪು, ಶುಂಠಿ, ಬೆಳ್ಳುಳ್ಳಿ ಪೇಸ್ಟ್ ಸೇರಿಸಿ. ತಣ್ಣಗಾದ ನಂತರ ಗೋಡಂಬಿ ಸೇರಿಸಿ ರುಬ್ಬಿ.

ಇನ್ನೊಂದು ಬಾಣಲೆಗೆ ಎಣ್ಣೆ ಹಾಕಿ ಗೇರು ಮೊಳಕೆಯ ಪೀಸ್ ಹಾಕಿ ಹುರಿಯಿರಿ. ಚೂರು ಉಪ್ಪು ಹಾಕಿ. ಇದು ಬೇಗನೆ ಬೇಯುತ್ತದೆ. ನಂತರ ರುಬ್ಬಿದ ಮಿಶ್ರಣ ಹಾಕಿ. ಚೆನ್ನಾಗಿ ಬಾಡಿಸಿ.

ಅರಿಶಿಣ, ಸಾಂಬಾರ ಪುಡಿ, ಮೆಣಸಿನ ಪುಡಿ ಹಾಗೂ ಚೂರು ಗರಂ ಮಸಾಲ ಸೇರಿಸಿ. ನೀರು ಹಾಕಿ ಚೆನ್ನಾಗಿ ಕುದಿಸಿ. ಚಿಟಿಕೆ ಸಕ್ಕರೆ ಹಾಕಿ. ಹಾಲಿನ ಕ್ರೀಮ್ ಹಾಕಿ ಒಂದು ಬಾರಿ ಕುದಿಸಿ ಇಳಿಸಿ. ಇಳಿಸಿದ ನಂತರ ಮೇಲೆನಿಂಬೆ ರಸ, ಕೊತ್ತಂಬರಿ ಸೊಪ್ಪು ಹಾಕಿ. ಈ ಗ್ರೇವಿ ಚಪಾತಿಯ ಜೊತೆ ಅದ್ಭುತ ಸಂಗಾತಿ.

3. ಗೇರು ಮೊಳಕೆಯ ಫ಼್ರೈಡ್ ರೈಸ್

ಬೇಕಾದ ಸಾಮಗ್ರಿ:

ಗೇರು ಮೊಳಕೆ 1 ಕಪ್, ಉದುರಾದ ಅನ್ನ 4 ಕಪ್, ಈರುಳ್ಳಿ 2, ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಸ್ವಲ್ಪ, ಪೆಪ್ಪೆರ್ ಪೌಡರ್ 1/4 ಚಮಚ, ಹಸಿ ಮೆಣಸು 2, ಸೋಯಾ ಸಾಸ್ 2 ಚಮಚ, ಉಪ್ಪು, ನಿಂಬೆ ರಸ, ಎಣ್ಣೆ 4 ರಿಂದ 5 ಚಮಚ, ಜೀರಿಗೆ

ತಯಾರಿಸುವ ವಿಧಾನ:

ಬಾಣಲೆಯಲ್ಲಿ ಎಣ್ಣೆ ಹಾಕಿ, ಜೀರಿಗೆಯನ್ನು ಸೇರಿಸಿ. ಈರುಳ್ಳಿ ಮತ್ತು ಹಸಿ ಮೆಣಸನ್ನು ಹೆಚ್ಚಿ ಅದಕ್ಕೆ ಹಾಕಿ ಹುರಿಯಿರಿ, ಚಿಟಿಕೆ ಉಪ್ಪು ಸಹ ಸೇರಿಸಿ. ಶುಂಠಿ- ಬೆಳ್ಳುಳ್ಳಿ ಪೇಸ್ಟ್ ಹಾಕಿ. ಗೇರು ಮೊಳಕೆಯನ್ನು ಎರಡು ಭಾಗ ಮಾಡಿ. ಅದಕ್ಕೆ ಸೇರಿಸಿ, ಉಪ್ಪು ಮತ್ತು ಪೆಪ್ಪರ್ ಪೌಡರ್ ಹಾಕಿ ಬಾಡಿಸಿ, ಉಪ್ಪು ಗೇರಿನ ಮೊಳಕೆಗೆ ಹೀರಿಕೊಳ್ಳಬೇಕು. ನಂತರ ಸೋಯ ಸಾಸ್ ಹಾಕಿ, ಅನ್ನವನ್ನು ಹಾಕಿ, ಚೆನ್ನಾಗಿ ಮಿಶ್ರ ಮಾಡಿ, ಸ್ವಲ್ಪ ಹುರಿಯಿರಿ. ಕೊನೆಯಲ್ಲಿ ನಿಂಬೆರಸ ಸೇರಿಸಿ. ಈಗ ಗೇರು ಮೊಳಕೆಯ ಫ್ರೈಡ್‌ರೈಸ್ ಸಿದ್ಧವಾಯಿತು.

೪. ಗೇರು ಮೊಳಕೆಯ ಫ಼್ರೈ

ಬೆಕಾಗುವ ಸಾಮಗ್ರಿ: ಗೇರು ಮೊಳಕೆ 1 ಕಪ್, ಎಣ್ಣೆ 2 ರಿಂದ 3 ಚಮಚ, ಉಪ್ಪು, ಜೀರಿಗೆ ಪುಡಿ, ಆಮ್ ಚೂರು ಪೌಡರ್/ವಾಟೆ ಪುಡಿ, ಕೆಂಪು ಮೆಣಸಿನ ಪುಡಿ, ಅರಿಶಿಣ ಪುಡಿ, ಚಾಟ್ ಮಸಾಲ ಪುಡಿ ಎಲ್ಲವೂ ಸ್ವಲ್ಪ

ತಯಾರಿಸುವ ವಿಧಾನ:

ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಗೇರು ಮೊಳಕೆಯನ್ನು ಹಾಕಿ ಹುರಿಯಿರಿ. ಅದಕ್ಕೆ ಉಪ್ಪು ಸೇರಿಸಿ. ಆಮೇಲೆ ಉಳಿದ ಎಲ್ಲಾ ಮಸಾಲೆಗಳನ್ನು ಹಾಕಿ. ಚೆನ್ನಾಗಿ ಹುರಿಯಿರಿ. ಹೀಗೆ ಹುರಿಯುವಾಗ ಗೇರು ಮೊಳಕೆಗೆ ಎಲ್ಲಾ ಮಸಾಲೆಗಳು ಹಿಡಿದುಕೊಳ್ಳಬೇಕು. ಗೇರು ಮೊಳಕೆಯ ಫ್ರೈ ಸಿದ್ಧ. ಮಳೆಗಾಲಕ್ಕೆ ರುಚಿಕಟ್ಟಾದ ತಿನಿಸು ಇದು.

ಚಿತ್ರಗಳು: ಲೇಖಕರವು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.