ಚಂಡೀಗಢ: ಇತ್ತೀಚೆಗೆ ನಡೆದ ಪ್ಯಾರಿಸ್ ಒಲಿಂಪಿಕ್ಸ್ 2024 ಕ್ರೀಡಾಕೂಟದಲ್ಲಿ ಪದಕ ಗೆದ್ದ ಭಾರತೀಯ ಕ್ರೀಡಾ ಸಾಧಕರಿಗೆ ಜೆಎಸ್ಡಬ್ಲೂ ಮೋರಿಸ್ ಗ್ಯಾರೇಜಸ್ (ಎಂಜಿ) ಕಂಪನಿಯು ಬ್ಯಾಟರಿ ಚಾಲಿತ ವಿಂಡ್ಸರ್ ಕಾರನ್ನು ಉಡುಗೊರೆಯಾಗಿ ನೀಡಿದೆ.

ಈ ಬಾರಿ ಒಲಿಂಪಿಕ್ಸ್ನಲ್ಲಿ ಜಾವ್ಲಿನ್ ಥ್ರೋ, ಪಿಸ್ತೂಲ್ ಹಾಗೂ ರೈಫಲ್ ಶೂಟಿಂಗ್, ಕುಸ್ತಿ ಮತ್ತು ಹಾಕಿ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಸಾಧನೆಗೈದು ಪದಕಗಳನ್ನು ಗೆದ್ದಿದ್ದಾರೆ.

ಇವರಲ್ಲಿ ನೀರಜ್ ಚೋಪ್ರಾ (ಜಾವ್ಲಿನ್ ಥ್ರೋ, ಬೆಳ್ಳಿ), ಮನು ಬಾಕರ್ (ಶೂಟಿಂಗ್, ಕಂಚು), ಸರಬಜೀತ್ ಸಿಂಗ್ (ಏರ್ ಪಿಸ್ತೂಲ್, ಕಂಚು), ಸ್ವಪ್ನಿಲ್ ಕುಸಳೆ (ಶೂಟಿಂಗ್, ಕಂಚು), ಅಮನ್ ಸೆಹ್ರಾವತ್ (ಕುಸ್ತಿ, ಕಂಚು), ವಿನೇಶ್ ಫೋಗಟ್ (ಕುಸ್ತಿ). ಇವರೊಂದಿಗೆ ಕಂಚಿನ ಪದಕ ಗೆದ್ದ ಹಾಕಿ ತಂಡದ ಪಿ.ಆರ್. ಶ್ರಿಜೇಶ್, ಹರ್ಮನ್ಪ್ರೀತ್ ಸಿಂಗ್, ಜರ್ಮನ್ ಪ್ರೀತ್ಸಿಂಗ್, ಅಮಿತ್ ರೋಹಿದಾಸ್, ಸುಮಿತ್, ಸಂಜಯ್, ಮನ್ಪ್ರೀತ್ ಸಿಂಗ್, ರಾಜ್ ಕುಮಾರ್ ಪಾಲ್, ಶಮ್ಶೇರ್ ಸಿಂಗ್, ಹಾರ್ದಿಕ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್, ಅಭಿಷೇಕ್, ಸುಖಜೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಮನ್ದೀಪ್ ಸಿಂಗ್, ನೀಲಕಂಠ ಶರ್ಮಾ, ಜುಗರಾಜ್ ಸಿಂಗ್, ಕೃಷ್ಣ ಬಹದ್ದೂರ್ ಪಾಠಕ್ ಅವರಿಗೆ ಜೆಎಸ್ಡಬ್ಲೂ ಎಂಜಿ ಕಂಪನಿಯು ಕಾರನ್ನು ಉಡುಗೊರೆಯಾಗಿ ನೀಡಿದೆ.

‘ಜಾಗತಿಕ ಮಟ್ಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪದಕ ಜಯಿಸುವ ಮೂಲಕ ದೇಶಕ್ಕೆ ಹೆಮ್ಮೆ ತಂದ ಕ್ರೀಡಾಪಟುಗಳಿಗೆ ವಿಂಡ್ಸರ್ ಕಾರುಗಳನ್ನು ಉಡುಗೊರೆಯಾಗಿ ನೀಡುತ್ತಿರುವುದು ಸಂತಸದ ಸಂಗತಿ. ವಿಂಡ್ಸರ್ ಕಾರು ಕೂಡಾ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿದ್ದು, ಬಿಡುಗಡೆಗೊಂಡ ಕೆಲವೇ ದಿನಗಳಲ್ಲಿ 15 ಸಾವಿರ ಬುಕಿಂಗ್ ಪೂರೈಸಿದೆ. ಲೈಫ್ಟೈಂ ಬ್ಯಾಟರಿ ವಾರಂಟಿ, ಶೇ 60ರಷ್ಟು ಹಣ ನೀಡಿ ಮರಳಿ ಪಡೆಯುವ ಗ್ಯಾರಂಟಿ, ಒಂದು ವರ್ಷ ಉಚಿತ ಚಾರ್ಜಿಂಗ್ ಸೌಕರ್ಯ, ಪ್ರತಿ ಚಾರ್ಜ್ಗೆ 332 ಕಿ.ಮೀ. ದೂರ ಕ್ರಮಿಸುವ ಸಾಮರ್ಥ್ಯ ಇದರದ್ದು’ ಎಂದು ಕಂಪನಿ ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.