ಬೆಂಗಳೂರು: ಏಥರ್ ಎನರ್ಜಿ ಮಂಗಳವಾರ 'ಏಥರ್ 450ಎಕ್ಸ್' ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದೆ. ತಿಂಗಳ ಚಂದಾದಾರಿಕೆ ಯೋಜನೆಗಳೊಂದಿಗೆ ಸ್ಕೂಟರ್ ಆರಂಭಿಕ ಬೆಲೆ ₹ 99,000 ನಿಗದಿಯಾಗಿದೆ.

ಬಜಾಜ್ 'ಚೇತಕ್', ಟಿವಿಎಸ್ 'ಐಕ್ಯೂಬ್',.. ಹೀಗೆ ಪ್ರಮುಖ ದ್ವಿಚಕ್ರ ವಾಹನ ಕಂಪನಿಗಳು ಹೊಸ ಸ್ಕೂಟರ್ಗಳನ್ನು ಬಿಡುಗಡೆ ಮಾಡಿ ವಿದ್ಯುತ್ ಚಾಲಿತ ಸ್ಕೂಟರ್ ವಲಯದಲ್ಲಿ ಪೈಪೋಟಿಗೆ ಸಜ್ಜಾಗಿವೆ. ಈ ನಡುವೆ ಗುಣಮಟ್ಟದ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಸಿದ್ಧಪಡಿಸಿರುವ ಸ್ಟಾರ್ಟ್ಅಪ್ ಕಂಪನಿಗಳು ಸ್ಪರ್ಧೆಗೆ ನಿಂತಿವೆ. ಚೇತಕ್ ಮತ್ತು ಐಕ್ಯೂಬ್ ಎರಡಕ್ಕೂ ಏಥರ್ 450ಎಕ್ಸ್ ದೊಡ್ಡ ಪ್ರತಿಸ್ಪರ್ಧಿಯಾಗಿದೆ.

450 ಮಾದರಿ ಸ್ಕೂಟರ್ ಹೊಂದಿದ್ದ ಏಥರ್ ಸಾಮರ್ಥ್ಯ ಹೆಚ್ಚಳ ಮತ್ತು ವಿನ್ಯಾಸ ಬದಲಾವಣೆಗಳೊಂದಿಗೆ 450ಎಕ್ಸ್ ಆಗಿ ಅನಾವರಣಗೊಂಡಿದೆ.2.9 ಕಿ.ವ್ಯಾಟ್ ಹವರ್ ಬ್ಯಾಟರಿಯು ಒಮ್ಮೆ ಪೂರ್ಣ ಚಾರ್ಜ್ ಮಾಡಿದರೆ 86 ಕಿ.ಮೀ. ದೂರ ಸಂಚರಿಸಬಹುದಾಗಿದೆ. ಬ್ಯಾಟರಿಗೆ ಸ್ಕೂಟರ್ ಇರುವವರೆಗೂ ವಾರಂಟಿ ಇರುತ್ತದೆ ಹಾಗೂ ವರ್ಷಗಳು ಉರುಳಿದರೂಎಂಜಿನ್ ಸಾಮರ್ಥ್ಯ ಕಡಿಮೆ ಆಗುವುದಿಲ್ಲ ಎಂದು ಕಂಪನಿ ಹೇಳಿಕೊಂಡಿದೆ.

ಪವರ್ 6 ಕಿ.ವ್ಯಾ ವರೆಗೂ ಹೆಚ್ಚಿಸಲಾಗಿದ್ದು, 26 ನ್ಯೂಟನ್ ಮೀಟರ್ ಟಾರ್ಕ್ ಹೊಮ್ಮಿಸುವ ಸಾಮರ್ಥ್ಯವಿದೆ. ಪಸ್ಲ್ ಮತ್ತು ಪ್ರೊ ಎರಡು ಮಾದರಿಯ ಆಯ್ಕೆಗಳನ್ನು ನೀಡಿದ್ದು, ಕ್ರಮವಾಗಿ ತಿಂಗಳಿಗೆ ₹ 1,699 ಮತ್ತು ₹ 1,999 ನಿಗದಿಯಾಗಿದೆ. ತಿಂಗಳ ಚಂದಾದಾರಿಕೆ ಇಲ್ಲದೇ ಖರೀದಿಸುವುದಾದರೆ ಆರಂಭಿಕ ಬೆಲೆ ₹ 1,49,000 ಇದೆ. ತಿಂಗಳ ಚಂದಾದಾರಿಕೆ ಅನ್ವಯಿಸುವುದಾದರೆ₹ 99,000 ನೀಡಿ ಸ್ಕೂಟರ್ ಖರೀದಿಸಬಹುದು.

ಇಕೊ, ನಾರ್ಮಲ್, ಸ್ಫೋರ್ಟ್ಸ್ ಮೋಡ್ ಜತೆಗೆ 'ವ್ರ್ಯಾಪ್ ಮೋಡ್' ನೀಡಿದ್ದು, ಶೂನ್ಯದಿಂದ ಪ್ರತಿ ಗಂಟೆಗೆ 40 ಕಿ.ಮೀ. ವೇಗ ತಲುಪಲು 3.29 ಸೆಕೆಂಡ್ಗಳು ಹಾಗೂ 6.50 ಸೆಕೆಂಡ್ಗಳಲ್ಲಿ60 ಕಿ.ಮೀ. ವೇಗ ತಲುಪುತ್ತದೆ. 10 ನಿಮಿಷ ಚಾರ್ಜ್ ಮಾಡಿದರೆ 15 ಕಿ.ಮೀ. ದೂರ ಕ್ರಮಿಸಬಹುದು. ಗರಿಷ್ಠ ವೇಗ ಗಂಟೆಗೆ 80 ಕಿ.ಮೀ.

7 ಇಂಚು ಟಚ್ ಸ್ಕ್ರೀನ್, ಆ್ಯಂಡ್ರಾಯ್ಡ್ ಒಸ್, 1.3 ಗಿಗಾ ಹರ್ಟ್ಸ್ ಸ್ನ್ಯಾಪ್ಡ್ರ್ಯಾಗನ್ ಪ್ರೊಸೆಸರ್, 4ಜಿ ವೋಲ್ಟ್, ಬ್ಲೂಟೂಥ್ 4.1 ಮೂಲಕ ಮೊಬೈಲ್ ಕರೆ, ಹಾಡು ಹಾಗೂ ನ್ಯಾವಿಗೇಷನ್ ನಿಯಂತ್ರಿಸಬಹುದು. ವಾಹನ ಇರುವ ಜಾಗವನ್ನು ಸುಲಭವಾಗಿ ಟ್ರ್ಯಾಕ್ ಮಾಡುವುದು, ರಿವರ್ಸ್ ಮೋಡ್, ಇಂಡಿಕೇರ್ ಆಟೊ ಆಫ್ ಸೇರಿದಂತೆ '450' ಸ್ಕೂಟರ್ನಲ್ಲಿ ಅಳವಡಿಸಲಾಗಿದ್ದ ಸೌಲಭ್ಯಗಳನ್ನು ಮುಂದುವರಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.