ಬೆಂಗಳೂರು: ಸೂಪರ್‌ಬೈಕ್ ತಯಾರಿಸುವ ಇಟಲಿಯ ಡುಕಾಟಿ ಕಂಪನಿಯು ಮಾನ್‌ಸ್ಟರ್ ಸರಣಿಯಹೊಸ ದ್ವಿಚಕ್ರ ವಾಹನಗಳನ್ನುಭಾರತದ ಮಾರುಕಟ್ಟೆಗೆ ಗುರುವಾರ ಬಿಡುಗಡೆ ಮಾಡಿದೆ. ಎಕ್ಸ್ ಷೋರೂಂ ಬೆಲೆ ₹ 10.99 ಲಕ್ಷದಿಂದ ಆರಂಭವಾಗುತ್ತದೆ.

ಮಾನ್‌ಸ್ಟರ್ ಬೆಲೆ ₹ 10.99 ಲಕ್ಷ ಹಾಗೂ ಮಾನ್‌ಸ್ಟರ್ ಪ್ಲಸ್ ಬೆಲೆ ₹ 11.24 ಲಕ್ಷ ಇದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಹೊಸ ಮಾನ್‌ಸ್ಟರ್ ಹೆಚ್ಚು ಸ್ಪೋರ್ಟಿಯಾಗಿ, ಹಗುರವಾಗಿ ಇದೆ. ಚಾಲನೆ ಮಾಡುವುದು ಸುಲಭ. ಹೊಸಬರನ್ನು ಹಾಗೂ ಅನುಭವ ಹೊಂದಿರುವ ಚಾಲಕರನ್ನು ಗಮನದಲ್ಲಿ ಇಟ್ಟುಕೊಂಡು ಇದನ್ನು ರೂಪಿಸಲಾಗಿದೆ ಎಂದು ಕಂಪನಿಯ ಭಾರತದ ವ್ಯವಸ್ಥಾಪಕ ನಿರ್ದೇಶಕ ಬಿಪುಲ್ ಚಂದ್ರ ಹೇಳಿದ್ದಾರೆ.

ಈ ದ್ವಿಚಕ್ರ ವಾಹನಗಳು 937 ಸಿಸಿ ಎಂಜಿನ್ ಹೊಂದಿವೆ. ಎಬಿಎಸ್, ಟ್ರ್ಯಾಕ್ಷನ್ ಕಂಟ್ರೋಲ್, ಲಾಂಚ್ ಕಂಟ್ರೋಲ್ ವೈಶಿಷ್ಟ್ಯಗಳನ್ನು ಒಳಗೊಂಡಿವೆ. ಸ್ಪೋರ್ಟ್, ಅರ್ಬನ್ ಮತ್ತು ಟೂರಿಂಗ್ ಎಂಬ ಮೂರು ರೈಡಿಂಗ್ ಆಯ್ಕೆಗಳು ಇದರಲ್ಲಿವೆ.

ಬೆಂಗಳೂರು, ದೆಹಲಿ–ಎನ್‌ಸಿಆರ್, ಮುಂಬೈ, ಪುಣೆ, ಅಹಮದಾಬಾದ್, ಹೈದರಾಬಾದ್, ಕೊಚ್ಚಿ, ಕೊಲ್ಕತ್ತ ಮತ್ತು ಚೆನ್ನೈನ ಡುಕಾಟಿ ವಿತರಕರಲ್ಲಿ ಬುಕಿಂಗ್ ಆರಂಭವಾಗಿದ್ದು, ವಿತರಣೆಯನ್ನೂ ತಕ್ಷಣದಿಂದಲೇ ಆರಂಭಿಸಲಾಗುವುದು ಎಂದು ಕಂಪನಿಯು ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.