ವಿದ್ಯುತ್ ಚಾಲಿತ ಸ್ಕೂಟರ್ ತಯಾರಿಸುವ ಬೆಂಗಳೂರಿನ ನವೋದ್ಯಮ ‘ಏಥರ್ ಎನರ್ಜಿ’ ತನ್ನ ಫ್ಲ್ಯಾಗ್‌ಶಿಪ್ 125 ಸಿಸಿ ಏಥರ್ 450 ಎಕ್ಸ್ ಸ್ಕೂಟರ್ ಅನ್ನು ನವೆಂಬರ್‌ನಲ್ಲಿ ಹಂತ ಹಂತವಾಗಿ ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.

ಬೆಂಗಳೂರಿನಲ್ಲಿ ಇದರ ಬೆಲೆ ₹ 1.59 ಲಕ್ಷ ಇದೆ. ಮೊದಲಿಗೆ ಬೆಂಗಳೂರು ಮತ್ತು ಚೆನ್ನೈನಲ್ಲಿ ಈ ಸ್ಕೂಟರ್ ಲಭ್ಯವಾಗಲಿದೆ.

ಹೀರೊಮೊಟೊಕಾರ್ಪ್ ಕಂಪನಿಯಿಂದ ಬಂಡವಾಳದ ನೆರವು ಪಡೆಯುತ್ತಿರುವ ಈ ನವೋದ್ಯಮವು 2021ರ ಮೊದಲ ತ್ರೈಮಾಸಿಕದ ಒಳಗಾಗಿ ಬೆಂಗಳೂರು, ಚೆನ್ನೈ, ಹೈದರಾಬಾದ್, ಮುಂಬೈ, ಪುಣೆ, ದೆಹಲಿ, ಅಹಮದಾಬಾದ್, ಕೊಚ್ಚಿ, ಕೋಲ್ಕತ್ತ ಮತ್ತು ಕೊಯಂಬತೂರು ನಗರಗಳಲ್ಲಿ ತನ್ನ ವಿದ್ಯುತ್ ಚಾಲಿತ ಸ್ಕೂಟರ್‌ಗಳನ್ನು ರಸ್ತೆಗಿಳಿಸುವ ಯೋಜನೆ ರೂಪಿಸಿಕೊಂಡಿದೆ.

ಈ ಸ್ಕೂಟರ್ ಗ್ರಾಹಕರ ಕೈಸೇರುವ ಮೊದಲೇ, ಪ್ರತಿಯೊಂದು ನಗರದಲ್ಲಿಯೂ ವೇಗದ ಚಾರ್ಜಿಂಗ್ ನೆಟ್‌ವರ್ಕ್ ಇರುವ ಏಥರ್ ಗ್ರಿಡ್ ಅಳವಡಿಸುವುದಾಗಿಯೂ ಕಂಪನಿ ಹೇಳಿಕೊಂಡಿದೆ. ಮೊದಲ ಹಂತದಲ್ಲಿ ಒಂದು ನಗರದಲ್ಲಿ 10–15 ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗುವುದು ಎಂದೂ ಹೇಳಿದೆ.

ಮುಂದಿನ ತಿಂಗಳಿನಿಂದ ಟೆಸ್ಟ್ ರೈಡ್‌ಗೆ ವ್ಯವಸ್ಥೆ ಮಾಡುವ ಆಲೋಚನೆ ಇದೆ. ಏಥರ್ ಎಕ್ಸ್‌ಪೀರಿಯನ್ಸ್ ಸೆಂಟರ್ ಸ್ಥಾಪಿಸುವ ಕುರಿತು ಮಾರುಕಟ್ಟೆಯ ಪ್ರಮುಖ ಕಂಪನಿಗಳೊಂದಿಗೆ ಪಾಲುದಾರಿಕೆ ಮಾಡಿಕೊಳ್ಳ ಲಾಗುವುದು ಎಂದೂ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.