ಮುಂಬೈ: ದೇಶೀಯ ಆಟೊಮೊಬೈಲ್ ಸಂಸ್ಥೆ ಮಹೀಂದ್ರಾ ಆ್ಯಂಡ್ ಮಹೀಂದ್ರಾ ಲಿಮಿಟೆಡ್ನ ಬಹುನಿರೀಕ್ಷಿತ ಹೊಸ ಎಸ್ಯುವಿ, 7 ಸೀಟರ್ನ ಎಕ್ಸ್ಯುವಿ700 (XUV700) ಆರಂಭಿಕ ಬೆಲೆ ₹ 12.99 ಲಕ್ಷ ಎಂಬುದು ಲೀಕ್ ಆಗಿದೆ.

7 ಸೀಟರ್ನ ಎಕ್ಸ್ಯುವಿ700ನವಿವಿಧ ಮಾದರಿಗಳ ಕಾರಿನ ಬೆಲೆಗಳು ಕೂಡ ಸೋರಿಕೆಯಾಗಿವೆ. ಆದರೆ ಕಂಪನಿ ಯಾವುದೇ ಮಾದರಿಯ ಕಾರಿನ ಬೆಲೆಗಳನ್ನು ಅಧಿಕೃತವಾಗಿ ಘೋಷಣೆ ಮಾಡಿಲ್ಲ.

ಅತ್ಯಾಕರ್ಷಕ ವಿನ್ಯಾಸ, ವಿನೂತನ ತಂತ್ರಜ್ಞಾನದ ಅಳವಡಿಕೆ, ಕಂಪನಿಯ ಹೊಸ ಲೋಗೊ ಮೂಲಕ 'ಎಕ್ಸ್ಯುವಿ700' ಎಸ್ಯುವಿ ಪ್ರಿಯರ ಗಮನ ಸೆಳೆದಿದೆ. ಡೀಸೆಲ್ ಮತ್ತು ಗ್ಯಾಸೊಲಿನ್ (ಪೆಟ್ರೋಲ್) ಎಂಜಿನ್ ಹಾಗೂ ಮ್ಯಾನ್ಯುಯಲ್ ಮತ್ತು ಆಟೊಮ್ಯಾಟಿಕ್ ಆಯ್ಕೆಗಳಲ್ಲಿ ಎಕ್ಸ್ಯುವಿ700 ಲಭ್ಯವಿರಲಿದೆ.

ಐದು ಮತ್ತು ಏಳು ಸೀಟ್ ಸಾಮರ್ಥ್ಯದ ಆಯ್ಕೆಯೂ ಇದ್ದು, ವಾಹನದ ಎಲ್ಲ ಗಾಲಿಗಳಿಗೆ ಪವರ್ ಒದಗಿಸುವ ವ್ಯವಸ್ಥೆ ಆಲ್–ವೀಲ್ಹ್–ಡ್ರೈವ್ (ಎಡಬ್ಲ್ಯುಡಿ) ಆಯ್ಕೆಯೂ ಲಭ್ಯವಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಕಾರುಗಳು ಮಾರುಕಟ್ಟೆಗೆ ಬಿಡುಗಡೆಯಾಗಲಿವೆ.

ಪ್ರಸ್ತುತ 5 ಸೀಟರ್ನ ನಾಲ್ಕು ಮಾದರಿಗಳ ಬೆಲೆಯನ್ನು ಕಂಪನಿಯು ಪ್ರಕಟಿಸಿದೆ. ಎಂಎಕ್ಸ್ ಪೆಟ್ರೋಲ್ ಮಾದರಿಗೆ ₹ 11.99 ಲಕ್ಷ, ಡೀಸೆಲ್ ಎಂಜಿನ್ಗೆ ₹ 12.49 ಲಕ್ಷ ನಿಗದಿಯಾಗಿದೆ. ಅಡ್ರಿನಾಕ್ಸ್ ಎಎಕ್ಸ್3 ಪ್ರೆಟ್ರೋಲ್ ಮಾದರಿಗೆ ₹ 13.99 ಲಕ್ಷ ಮತ್ತು ಎಎಕ್ಸ್5 ಮಾದರಿಯ ಬೆಲೆ ₹ 14.99 ಲಕ್ಷ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.