ಮುಂಬೈ: ದೇಶದ ಪ್ರಮುಖ ಅಟೋಮೊಬೈಲ್ ಸಂಸ್ಥೆ ಟಾಟಾ ಮೋಟಾರ್ಸ್, ಎಲೆಕ್ಟ್ರಿಕ್ ಆವೃತ್ತಿಯ ಮಿನಿ ಟ್ರಕ್ ಟಾಟಾ ಏಸ್ ಅನಾವರಣ ಮಾಡಿದೆ.

ಟಾಟಾದ ನೂತನ ಎಲೆಕ್ಟ್ರಿಕ್ ಏಸ್ ಪರಿಚಯಿಸುತ್ತಲೇ ಪ್ರಮುಖ ಇ ಕಾಮರ್ಸ್ ಸಂಸ್ಥೆಗಳಾದ ಅಮೆಜಾನ್, ಬಿಗ್ ಬಾಸ್ಕೆಟ್, ಸಿಟಿ ಲಿಂಕ್, ಫ್ಲಿಪ್ಕಾರ್ಟ್ ಸಹಿತ ಹಲವು ಕಂಪನಿಗಳು ಬುಕಿಂಗ್ ಮಾಡಿದ್ದು, ಟಾಟಾ ಈಗಾಗಲೇ 39,000 ಯೂನಿಟ್ಗಳಿಗೆ ಬುಕಿಂಗ್ ಪಡೆದುಕೊಂಡಿದೆ.

ಮಾರುಕಟ್ಟೆಯಲ್ಲಿನ ಬೇಡಿಕೆ ಪೂರೈಸಲು, ಟಾಟಾ ಮತ್ತಷ್ಟು ಹೆಚ್ಚಿನ ಎಲೆಕ್ಟ್ರಿಕ್ ವಾಹನ ಸರಣಿಯನ್ನು ಪರಿಚಯಿಸಲು ಮುಂದಾಗಿದೆ.

ಟಾಟಾ ಏಸ್ ವಾಹನದಲ್ಲಿ ‘ಇವೊಜನ್‘ ಹೊಸ ಬ್ಯಾಟರಿ ಶ್ರೇಣಿ ಪರಿಚಯಿಸಲಾಗಿದ್ದು, ಒಂದು ಬಾರಿ ಚಾರ್ಜ್ ಮಾಡಿದರೆ, 154 ಕಿ.ಮೀ ದೂರ ಚಲಿಸಬಹುದು ಎಂದು ಕಂಪನಿ ಹೇಳಿದೆ.

ಟಾಟಾ ಮೋಟರ್ಸ್ನ ವಿದ್ಯುತ್ ಚಾಲಿತ ಕಾನ್ಸೆಪ್ಟ್ ಕಾರ್ ‘ಅವಿನ್ಯಾ’ ಅನಾವರಣ

ನೂತನ ಎಲೆಕ್ಟ್ರಿಕ್ ಏಸ್ ಬೆಲೆ, ಮುಂದಿನ ತ್ರೈಮಾಸಿಕದಲ್ಲಿ ಬಹಿರಂಗಪಡಿಸಲಾಗುತ್ತದೆ. ವಾಹನ ಡೆಲಿವರಿ ಕೂಡ ಆಗಲೇ ಆರಂಭವಾಗಲಿದೆ ಎಂದು ಟಾಟಾ ಮೋಟಾರ್ಸ್ ಹೇಳಿದೆ.

ಮಾರುತಿ, ಹುಂಡೈ ಮಾರಾಟ ಇಳಿಕೆ: ಕಾರಣ ಏನು?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.