ಬೆಂಗಳೂರು: ಟಿವಿಎಸ್ ಮೋಟಾರ್ ಕಂಪನಿಯು ತನ್ನ ಎಲೆಕ್ಟ್ರಿಕ್ ದ್ವಿಚಕ್ರ ವಾಹನವಾದ ಟಿವಿಎಸ್ ಐಕ್ಯೂಬ್ ಅನ್ನು ನಗರದಲ್ಲಿ ಬುಧವಾರ ಬಿಡುಗಡೆ ಮಾಡಿದೆ.

ಇದು 2.2 ಕೆಡಬ್ಲ್ಯುಎಚ್ ಬ್ಯಾಟರಿ ಸಾಮರ್ಥ್ಯ ಹೊಂದಿದೆ.

‘ಎರಡು ಗಂಟೆಯೊಳಗೆ ಬ್ಯಾಟರಿಯು ಪೂರ್ಣ ಜಾರ್ಜ್ ಆಗಲಿದೆ. ಒಂದು ಬಾರಿಗೆ ಚಾರ್ಜ್ ಮಾಡಿದರೆ 100 ಕಿ.ಮೀ. ಸಂಚರಿಸಬಹುದಾಗಿದೆ’ ಎಂದು ಕಂಪನಿಯ ಉಪಾಧ್ಯಕ್ಷ ಸೌರಬ್ ಕಪೂರ್ ತಿಳಿಸಿದ್ದಾರೆ.

ಜೂನ್ 30ರ ವರೆಗೆ ಎಲೆಕ್ಟ್ರಿಕ್ ವಾಹನಗಳಿಗೆ ನಿಗದಿಪಡಿಸಿರುವ ಸಬ್ಸಿಡಿ ಮತ್ತು ಕ್ಯಾಷ್ಬ್ಯಾಕ್ ಸೌಲಭ್ಯ ದೊರೆಯಲಿದೆ. ಬೆಂಗಳೂರಿನಲ್ಲಿ ಇದರ ಎಕ್ಸ್ ಷೋ ರೂಂ ಬೆಲೆ ₹94,999 ಆಗಿದೆ ಎಂದು ಹೇಳಿದ್ದಾರೆ.

ಐದು ಶ್ರೇಣಿಗಳಲ್ಲಿ ದೊರೆಯಲಿದ್ದು, ಹೊಸೂರು ಘಟಕದಲ್ಲಿ ಇದನ್ನು ತಯಾರಿಸಲಾಗಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.