ಮುಂಬೈ: ಔಡಿ ಕಂಪನಿಯು ಭಾರತದ ಮಾರುಕಟ್ಟೆಗೆ ಶುಕ್ರವಾರ ವಿದ್ಯುತ್ ಚಾಲಿತ (ಇ.ವಿ) ‘ಕ್ಯು8 ಇ-ಟ್ರಾನ್’ ಕಾರು ಬಿಡುಗಡೆ ಮಾಡಿದೆ.

ಔಡಿ ಕ್ಯು8 50 ಇ-ಟ್ರಾನ್, 55 ಇ-ಟ್ರಾನ್, ಔಡಿ ಕ್ಯು8 ಸ್ಪೋರ್ಟ್ ಬ್ಯಾಕ್ 50 ಇ-ಟ್ರಾನ್ ಮತ್ತು ಔಡಿ ಕ್ಯು8 ಸ್ಪೋರ್ಟ್ ಬ್ಯಾಕ್ 55 ಇ-ಟ್ರಾನ್ ಹೀಗೆ ಒಟ್ಟು ನಾಲ್ಕು ಆವೃತ್ತಿಗಳಲ್ಲಿ ಇದು ಲಭ್ಯವಿದೆ. ಎಕ್ಸ್ಷೋರೂಂ ಬೆಲೆಯು ₹1,13,70,000ಯಿಂದ ಆರಂಭ ಆಗುತ್ತದೆ ಎಂದು ಔಡಿ ಇಂಡಿಯಾದ ಮುಖ್ಯಸ್ಥ ಬಲ್ಬೀರ್ ಸಿಂಗ್ ದಿಲ್ಲೋನ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ವಾಹನ ಉದ್ಯಮದಲ್ಲೇ ಅತಿದೊಡ್ಡದಾದ 114 ಕಿಲೋ ವಾಟ್ ಬ್ಯಾಟರಿಯನ್ನು ಇದು ಹೊಂದಿದೆ. ಔಡಿ ಕ್ಯು8 55 ಇ-ಟ್ರಾನ್ ಮತ್ತು ಸ್ಪೋರ್ಟ್ ಬ್ಯಾಕ್ 55 ಇ-ಟ್ರಾನ್ ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 600 ಕಿ.ಮೀ ಚಲಾಯಿಸಬಹುದು. ಕ್ಯು8 50 ಇ-ಟ್ರಾನ್ ಮತ್ತು ಸ್ಪೋರ್ಟ್ ಬ್ಯಾಕ್ 50 ಇ-ಟ್ರಾನ್ ಒಮ್ಮೆ ಚಾರ್ಜ್ ಮಾಡಿದರೆ ಗರಿಷ್ಠ 505 ಕಿ.ಮೀ.ವರೆಗೆ ಚಲಾಯಿಸಬಹುದು ಎಂದು ಅವರು ತಿಳಿಸಿದರು.

ಕಾರಿನ ಎರಡೂ ಕಡೆಗಳಲ್ಲಿ ಚಾರ್ಜಿಂಗ್ ಸಾಕೆಟ್ ನೀಡಿರುವುದು ಪಾರ್ಕಿಂಗ್ ಸುಲಭವಾಗಿಸಿದೆ.

ಬ್ಯಾಟರಿಯು ಶೇ 20ರಷ್ಟು ಮಟ್ಟದಿಂದ ಶೇ 80ರಷ್ಟು ಮಟ್ಟಕ್ಕೆ ಚಾರ್ಜ್ ಆಗಲು 26 ನಿಮಿಷ ಹಾಗೂ ಶೇ 10ರಷ್ಟು ಮಟ್ಟದಿಂದ ಶೇ 80ರಷ್ಟಕ್ಕೆ ಚಾರ್ಜ್ ಆಗಲು 31 ನಿಮಿಷ ಬೇಕು. ಹೊಸ ವಿನ್ಯಾಸ, ಐಷಾರಾಮಿ, ಆರಾಮದಾಯಕ ಸೌಲಭ್ಯಗಳು, ಸುಧಾರಿತ ಕಾರ್ಯಕ್ಷಮತೆ, ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಹಾಗೂ ಚಾಲನಾ ಅನುಭವವನ್ನು ಇನ್ನಷ್ಟು ಹೆಚ್ಚಿಸುವ ಗುಣಗಳಿಂದಾಗಿ ಇ-ಟ್ರಾನ್ ಯಶಸ್ಸಿಗೆ ಕ್ಯು8 ಇ-ಟ್ರಾನ್ ಕಾರಣವಾಗಲಿದೆ ಎಂದರು.

ಕಾರಿನ ಮುಂದೆ ಮತ್ತು ಹಿಂದೆ ಒಟ್ಟು ಎರಡು ಎಲೆಕ್ಟ್ರಿಕ್ ಮೋಟರ್ ಇದೆ. ನಿಂತ ಸ್ಥಿತಿಯಿಂದ ಗಂಟೆಗೆ 100 ಕಿ.ಮೀ. ವೇಗವನ್ನು ತಲುಪಲು 55 ಇ-ಟ್ರಾನ್ ಮತ್ತು ಸ್ಪೋರ್ಟ್ ಬ್ಯಾಕ್ 55 ಇ-ಟ್ರಾನ್ಗೆ 5.6 ಸೆಕೆಂಡ್ ಬೇಕು. 50 ಇ-ಟ್ರಾನ್ ಮತ್ತು ಸ್ಪೋರ್ಟ್ ಬ್ಯಾಕ್ 50 ಇ-ಟ್ರಾನ್ 6.0 ಸೆಕೆಂಡ್ಗಳನ್ನು ತೆಗೆದುಕೊಳ್ಳುತ್ತವೆ ಎಂದು ಕಂಪನಿ ತಿಳಿಸಿದೆ.

ಔಡಿ ಡ್ರೈವ್ ನಲ್ಲಿ 7 ಡ್ರೈವ್ ಮೋಡ್ಗಳಿದ್ದು, ಸಿಂಗಲ್ ಕ್ಲಿಕ್ನಲ್ಲಿ ಮೋಡ್ ಬದಲಿಸಬಹುದು. ಗ್ರೌಂಡ್ ಕ್ಲಿಯರೆನ್ಸ್ ಗರಿಷ್ಠ 226 ಎಂಎಂ ಇದೆ.

(ಕಂಪನಿಯ ಆಹ್ವಾನದ ಮೇರೆಗೆ ಪ್ರತಿನಿಧಿ ಮುಂಬೈಗೆ ತೆರಳಿದ್ದರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.