ನವದೆಹಲಿ: ಬಳಸಿದ ಕಾರುಗಳ ಮಾರಾಟಕ್ಕೆ ನಿರಾಕ್ಷೇಪಣಾ ಪತ್ರವನ್ನು (ಎನ್ಒಸಿ) ನೀಡಲು ತನಗೆ ಅಧಿಕಾರ ನೀಡಲಾಗಿದೆ ಎಂದು ಕೇಂದ್ರ ಸರ್ಕಾರಿ ಸ್ವಾಮ್ಯದ ಸಿಎಸ್ಸಿ ಇ–ಗವರ್ನೆನ್ಸ್ ಇಂಡಿಯಾ ಲಿಮಿಟೆಡ್ (ಸಿಎಸ್ಸಿ ಎಸ್ಪಿವಿ) ಭಾನುವಾರ ಹೇಳಿದೆ.

ಈ ಸೇವೆಯನ್ನು ದೇಶದಾದ್ಯಂತ ನೀಡಲು ಸಿಎಸ್ಸಿ, ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್ಸಿಆರ್ಬಿ) ಜೊತೆ ಪಾಲುದಾರಿಕೆ ಮಾಡಿಕೊಂಡಿದೆ. ದೇಶದಲ್ಲಿನ ನಾಲ್ಕು ಲಕ್ಷ ಸಿಎಸ್ಸಿ ಫ್ರ್ಯಾಂಚೈಸಿಗಳಲ್ಲಿ ಈ ಸೌಲಭ್ಯ ಸಿಗಲಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ ಅವರು ಈ ಸೇವೆಗೆ ಚಾಲನೆ ನೀಡಿದ್ದಾರೆ ಎಂದು ಸಿಎಸ್ಸಿ ತಿಳಿಸಿದೆ. ‘ಹತ್ತಿರದ ಸಿಎಸ್ಸಿ ಕೇಂದ್ರದಿಂದ ನಿರಾಕ್ಷೇಪಣಾ ಪತ್ರ ಪಡೆಯಲು ಗ್ರಾಹಕರಿಗೆ ಸಾಧ್ಯವಾಗಲಿದೆ. ಸಿಸಿಟಿಎನ್ಎಸ್ (ಅಪರಾಧ ಮತ್ತು ಅಪರಾಧಿಯ ಜಾಡಿನ ಮೇಲೆ ಕಣ್ಣಿಡುವ ವ್ಯವಸ್ಥೆ) ಸೇವೆಗಳನ್ನು ಡಿಜಿಟಲ್ ಸೇವಾ ಪೋರ್ಟಲ್ ಜೊತೆ ಬೆಸೆಯುವಂತೆ ಎನ್ಸಿಆರ್ಬಿ ರಾಜ್ಯ ಸರ್ಕಾರಗಳಿಗೆ ಮನವಿ ಮಾಡಿದೆ. ಸಿಎಸ್ಸಿ ಕೇಂದ್ರಗಳು ಈ ಸೇವೆಯ ಬಗ್ಗೆ ಜನರಲ್ಲಿ ಅರಿವು ಮೂಡಿಸಲಿವೆ’ ಎಂದು ಪ್ರಕಟಣೆ ತಿಳಿಸಿದೆ.

ಸೆಕೆಂಡ್–ಹ್ಯಾಂಡ್ ಕಾರು ಖರೀದಿಸುವ ಗ್ರಾಹಕರು ಈ ನಿರಾಕ್ಷೇಪಣಾ ಪತ್ರವನ್ನು ಪಡೆದರೆ ಅವರಿಗೆ ತಾವು ಖರೀದಿಸಲು ಉದ್ದೇಶಿಸಿರುವ ವಾಹನದ ಕುರಿತು ವಿವರಗಳು ದೊರೆಯುತ್ತವೆ. ಆ ವಾಹನವು ಯಾವುದಾದರೂ ಕಾರಣಕ್ಕೆ ಪೊಲೀಸ್ ದಾಖಲೆಗಳಲ್ಲಿ ನಮೂದಾಗಿದೆಯೇ ಎಂಬುದು ಗೊತ್ತಾಗುತ್ತದೆ. ವಾಹನ ಮಾಲೀಕತ್ವ ವರ್ಗಾವಣೆ ಮುನ್ನ ನಿರಾಕ್ಷೇಪಣಾ ಪತ್ರ ಬರೆಯುವುದು ಕಡ್ಡಾಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.