ನವದೆಹಲಿ: ಪ್ರತಿಸ್ಪರ್ಧಿ ಬ್ರ್ಯಾಂಡ್‌ಗಳಿಂದ ಪೈಪೋಟಿ ಹೆಚ್ಚಾಗುತ್ತಿರುವ ಕಾರಣ ಟಾಟಾ ಮೋಟರ್ಸ್ ಕಂಪನಿಯು ಎಸ್‌ಯುವಿ ವಿಭಾಗದಲ್ಲಿ ತನ್ನ ಪ್ರಬಲ ಸ್ಥಾನವನ್ನು ಕಾಯ್ದುಕೊಳ್ಳಲು ಯೋಜನೆ ರೂಪಿಸಿದೆ ಎಂದುಕಂಪನಿಯ ಪ್ರಯಾಣಿಕ ವಾಹನ ವಿಭಾಗದ ಉಪಾಧ್ಯಕ್ಷ ರಾಜನ್ ಅಂಬಾ ತಿಳಿಸಿದ್ದಾರೆ.

ಇದಕ್ಕಾಗಿ ಹಾಲಿ ಇರುವ ಮಾದರಿಗಳ ವಿಸ್ತರಣೆ ಮತ್ತು ಹೊಸ ಮಾದರಿಗಳ ಬಿಡುಗಡೆಗೆ ಕಂಪನಿ ಯೋಜಿಸಿದೆ.

ಟಾಟಾ ಮೋಟರ್ಸ್ ಈಗ ಎಸ್‌ಯುವಿ ವಿಭಾಗದಲ್ಲಿ ಉತ್ತಮ ಮಾರುಕಟ್ಟೆ ಪಾಲು ಹೊಂದಿದ್ದು, ಪಂಚ್, ನೆಕ್ಸಾನ್, ಹ್ಯಾರಿಯರ್ ಮತ್ತು ಸಫಾರಿ ಮಾದರಿಗಳು ಉತ್ತಮ ಮಾರಾಟ ಕಾಣುತ್ತಿವೆ. ಗ್ರಾಹಕರ ಅಗತ್ಯಕ್ಕೆ ಅನುಗುಣವಾಗಿ ಹೆಚ್ಚುವರಿ ಆವೃತ್ತಿಗಳನ್ನು ತರಲು ಯೋಜನೆ ಹೊಂದಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

2021–22ರಲ್ಲಿ ಕಂಪನಿಯು 2.22 ಲಕ್ಷ ಎಸ್‌ಯುವಿಗಳನ್ನು ಮಾರಾಟ ಮಾಡಿದ್ದು, ಪ್ರಸಕ್ತ ಹಣಕಾಸು ವರ್ಷದಲ್ಲಿ ಅದಕ್ಕಿಂತಲೂ ಹೆಚ್ಚಿನ ಮಾರಾಟ ಪ್ರಗತಿ ಸಾಧಿಸಲು ಮುಂದಾಗಿದೆ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.