ನವದೆಹಲಿ: ಹೋಂಡಾ ಕಾರ್ಸ್ ಇಂಡಿಯಾದ ಅತ್ಯಂತ ಯಶಸ್ವಿ ಬ್ರಾಂಡ್ 'ಹೋಂಡಾ ಸಿಟಿ'. ಜನವರಿಯಿಂದ ಡಿಸೆಂಬರ್ 2020 ಅವಧಿಯಲ್ಲಿ ಒಟ್ಟು 21,826 ಕಾರುಗಳನ್ನು ಮಾರಾಟ ಮಾಡುವುದರೊಂದಿಗೆ ಮಿಡ್-ಸೈಜ್ ಸೆಡಾನ್ ವರ್ಗದಲ್ಲಿ 'CY 2020'ರಲ್ಲಿ ಅತಿ ಹೆಚ್ಚು ಮಾರಾಟಗಳಲ್ಲಿ ಪ್ರಪ್ರಥಮ ಸ್ಥಾನದಲ್ಲಿದೆ.

ಭಾರತದಲ್ಲಿ ಅತ್ಯಂತ ಪ್ರಖ್ಯಾತ ಕಾರೆಂಬ ಕೀರ್ತಿಗೆ ತಕ್ಕಂತೆ, ಆಲ್ ನ್ಯೂ 5ನೇ ಜನರೇಷನ್ ಸಿಟಿಯನ್ನು ಜುಲೈ 2020 ರಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿತ್ತು. ಇದು ತಮ್ಮ ಶ್ರೇಷ್ಠ ಡಿಸೈನ್, ಅದ್ಭುತ ಟೆಕ್ನಾಲಜಿ, ಸರಿಸಾಟಿಯಿಲ್ಲದ ಆರಾಮ, ಅಡ್ವಾನ್ಸ್ಡ್ ಸೇಫ್ಟಿ ಮತ್ತು ಕನೆಕ್ಟಿವಿಟಿಗಳಲ್ಲಿ ಇದು ಉನ್ನತ ಬೆಂಚ್ಮಾರ್ಕ್ ಹೊಂದಿದೆ. ಡಿಸೆಂಬರ್ 2020 ರಲ್ಲಿ ಹೋಂಡಾ ಸಿಟಿಯ ಮಾರ್ಕೆಟ್ ಶೇರ್ ಈ ವರ್ಗದಲ್ಲಿ 41% ಗೆ ತಲುಪಿದೆ.

ಇದನ್ನೂ ಓದಿ:ಪ್ರಯಾಣಿಕ ವಾಹನ ಮಾರಾಟ 10 ವರ್ಷಗಳ ಕನಿಷ್ಠ ಮಟ್ಟಕ್ಕೆ

ಹೋಂಡಾ ಸಿಟಿ ಈ ವರ್ಗದಲ್ಲಿ ಪ್ರಮುಖ ಕಾರು ತಯಾರಕ ಕಂಪೆನಿಯಾಗಿದೆ ಮಾತ್ರವಲ್ಲದೆ, ಆಲ್ ನ್ಯೂ 5 ನೇ ಜನರೇಷನ್ ಸಿಟಿ ಮಾರಾಟ ಪ್ರಾರಂಭವಾದ ಬಳಿಕ ಜುಲೈ-ಡಿಸೆಂಬರ್ 2020 ಅವಧಿಯಲ್ಲಿ ಮಿಡ್-ಸೈಜ್ ವರ್ಗ ಹೆಚ್ಚು ಬೆಳವಣಿಗೆ ಹೊಂದುತ್ತಾ ಈ ವರ್ಗದ ಕಾರುಗಳ ಒಟ್ಟಾರೆ ಮಾರಾಟ ಹೆಚ್ಚಳಕ್ಕೆ ಕೂಡಾ ಇದು ತನ್ನ ಕೊಡುಗೆಯನ್ನು ನೀಡಿದೆ. ಈ ವರ್ಗದಲ್ಲಿ ಜುಲೈ-ಡಿಸೆಂಬರ್ 2020 ಅವಧಿಯಲ್ಲಿ ಒಟ್ಟಾರೆ ಮಾರಾಟಗಳು 45,277 ಆಗಿವೆ ಮತ್ತು ಕಳೆದ ವರ್ಷ ಇದೇ ಅವಧಿಯಲ್ಲಿ 41,122 ಕಾರುಗಳು ಮಾರಾಟವಾಗಿದ್ದವು. ಜುಲೈ-ಡಿಸೆಂಬರ್ 2020 ಅವಧಿಯಲ್ಲಿ ಹೋಂಡಾ ಸಿಟಿಯ ಮಾರಾಟ 17,347 ಕಾರುಗಳಾಗಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.