2018 ಭಾರತೀಯ ಬೈಕ್ ಮಾರುಕಟ್ಟೆಯಲ್ಲಿ ನೆನಪಿಟ್ಟುಕೊಳ್ಳಬೇಕಾದ ದಿನ. ಏಕೆಂದರೆ, ಭಾರತದ ಯುವಕರ ನಾಡಿಮಿಡಿತಕ್ಕೆ ಹೊಸ ಹುರುಪುಕೊಟ್ಟ ವರ್ಷವಿದು. ಐತಿಹಾಸಿಕ ಹಿನ್ನೆಲೆಯ ಜಾವಾ ಬೈಕುಗಳು ಮತ್ತೆ ರಸ್ತೆಗಿಳಿಯಲು ಸಜ್ಜಾದವು. ಅಂತೆಯೇ, ರಾಯಲ್ ಎನ್ಫೀಲ್ಡ್ ಸಹ ಇಂಟರ್ಸೆಪ್ಟಾರ್ 650 ಬೈಕ್ ಪರಿಚಯಿಸಿ ಮೋಡಿ ಮಾಡಿತು. 2019ರಲ್ಲಿ ಇದೇ ಮಾದರಿಯ ದೈತ್ಯ ಬೈಕುಗಳು ರಸ್ತೆಯಲ್ಲಿ ರಾರಾಜಿಸಲಿವೆ. ಇಲ್ಲಿದೆ ಬಿಡುಗಡೆಯಾಗಲಿರುವ ಬೈಕುಗಳ ಪಕ್ಷಿನೋಟ.

ಹೀರೊ ಎಕ್ಸ್ಪಲ್ಸ್

ಹೀರೊ ಹಲವು ವರ್ಷಗಳಿಂದ ಒಳ್ಳೆಯ ಬೈಕ್ ಹೊರ ಬಿಟ್ಟೇ ಇಲ್ಲ. ಒಂದು ಕಾಲದಲ್ಲಿ ಹೀರೊ ಕರಿಜ್ಮಾ ಹಾಗೂ ಸಿಬಿಜೆಡ್ ಬೈಕ್ಗಳು ಪ್ರೀಮಿಯಂ ಬೈಕ್ ಕ್ಷೇತ್ರಗಳನ್ನು ಆಳಿದ್ದವು. ಹೀರೊನ ಸ್ಪ್ಲೆಂಡರ್ ಸಹ ಪ್ರಶ್ನಾತೀತವಾಗಿ ಬೈಕ್ ಪ್ರಿಯರ ಹೃದಯ ಗೆದ್ದಿತ್ತು. ಆದರೆ, ಹೋಂಡಾದಿಂದ ಕಳಚಿಕೊಂಡ ಮೇಲೆ ಹೀರೊ ಕಳೆಗುಂದಿದೆ. ಇದನ್ನು ಮರುಪಡೆಯುವ ಪ್ರಯತ್ನವನ್ನು ಹೀರೊ ಮಾಡುತ್ತಲೇ ಇದೆ. ಇಂಥದ್ದೊಂದು ಉತ್ತಮ ಪ್ರಯತ್ನ ಹೀರೊ ‘ಎಕ್ಸ್ಪಲ್ಸ್ 200’ ಹಾಗೂ ‘ಹೀರೊ ಎಕ್ಸ್ಪಲ್ಸ್ 200 ಟಿ’. ಆಫ್ ರೋಡ್ ಲಕ್ಷಣಗಳನ್ನು ಹೊಂದಿರುವ ಉತ್ತಮ ಬೈಕ್ ಇದು. ರಾಯಲ್ ಎನ್ಫೀಲ್ಡ್ನ ‘ಹಿಮಾಲಯನ್’ ಬೈಕಿನಂತೆ ದೊಡ್ಡ ದೇಹ, ಎತ್ತರದ ಗ್ರೌಂಡ್ ಕ್ಲಿಯರೆನ್ಸ್ ಹಾಗೂ ಹೆಚ್ಚು ವ್ಹೀಲ್ಬೇಸ್ ಹೊಂದಿದೆ. ಹಾಗಾಗಿ, ಇದು ಉತ್ತಮ ಆಫ್ ರೋಡ್ ಬೈಕ್ ಆಗುವ ಲಕ್ಷಣ ಹೊಂದಿದೆ.

‘ಹಿಮಾಯಲನ್’ನ ನಕಲು ಎಂದು ಬಿಂಬಿತವಾಗುವ ಸಾಧ್ಯತೆಗಳೂ ಇವೆ. ಆದರೆ, ಹಿಮಾಲಯನ್ ಬೈಕನ್ನು ಮರೆತು ಈ ಬೈಕನ್ನು ನೋಡಬೇಕು. ಏಕೆಂದರೆ, ಈ ಬೈಕಿನಲ್ಲೂ ಅನೇಕ ವೈಶಿಷ್ಟ್ಯಗಳಿವೆ. ಮೊದಲನೆದಾಗಿ ಇದರಲ್ಲಿ ಅತಿ ನಯವಾದ ಎಂಜಿನ್ ಇದೆ. ಇಡೀ ದೇಹದ ತೂಕ ಕಡಿಮೆ ಇದೆ. ಹಾಗಾಗಿ, ಬೈಕನ್ನು ಬಳಸುವುದು ಸುಲಭ. ಆದರೆ, ಬೈಕಿನ ಕೊರತೆ ಸಣ್ಣ ಎಂಜಿನ್. 200 ಸಿಸಿ ಎಂಜಿನ್ ಇದೆ. ಶಕ್ತಿ ಸಾಲದಾಯಿತು. ಹಾಗಾಗಿ, ಮತ್ತೆ ಹಿಮಾಲಯನ್ ಮುಂಚೂಣಿಯಲ್ಲಿ ನಿಲ್ಲುತ್ತದೆ. ಈ ಬೈಕಿನ ಬೆಲೆ ₹ 1.05 ಲಕ್ಷದಿಂದ ಶುರುವಾಗುತ್ತದೆ. ಕಡಿಮೆ ಬೆಲೆ ನೋಡುವವರಿಗೆ ಇದು ಒಳ್ಳೆಯ ಆಯ್ಕೆಯಾಗಲಿದೆ.

ಕೆಟಿಎಂ 390 ಅಡ್ವೆಂಚರ್

ಕೆಟಿಎಂ ಬೈಕ್ಗಳ ವಿಶ್ವಾಸಾರ್ಹತೆ ಬಗ್ಗೆ ವಿಶೇಷವಾಗಿ ಹೇಳುವ ಅಗತ್ಯವಿಲ್ಲ. ಕೆಟಿಎಂ ಬೈಕ್ಗಳ ಸಾಲಿಗೆ 2019ರ ಸೇರ್ಪಡೆ ‘ಕೆಟಿಎಂ 390 ಅಡ್ವೆಂಚರ್’. ನೋಡಲು ಬಹುತೇಕ ಕೆಟಿಎಂ ಡ್ಯೂಕ್ 390 ಹಾಗೆಯೇ ಇದೆ. ಆದರೆ, ಕೆಲವು ಕಾಸ್ಮೆಟಿಕ್ ಬದಲಾವಣೆಗಳನ್ನು ಮಾಡಲಾಗಿದೆ. ವಿನ್ಯಾಸವೂ ಕೊಂಚ ಬದಲಾಗಿದೆ. ಕೆಟಿಎಂ ಬೈಕ್ಗಳೆಲ್ಲವೂ ವಿನ್ಯಾಸದಲ್ಲಿ ಒಂದನ್ನೊಂದು ಹೋಲುತ್ತವೆ. ಅದು ಕೆಟಿಎಂನ ಸಿಗ್ನೇಚರ್ ಸ್ಟೈಲಿಂಗ್ ಎನ್ನಬಹುದು. ಹೊಸ ಅಡ್ವೆಂಚರ್ ಬೈಕನ್ನು ದೂರದ ಪ್ರಯಾಣಕ್ಕೆ ಒಪ್ಪುವಂತೆ ವಿನ್ಯಾಸ ಮಾಡಲಾಗಿದೆ. ಇಬ್ಬರು ಆರಾಮಾಗಿ ಕೂರುವ ಸೀಟ್ ಇದೆ. ಕೆಟಿಎಂ ಬೈಕ್ಗಳಲ್ಲಿ ಇದು ದೊಡ್ಡ ಬದಲಾವಣೆ. ಇತರೆ ಕೆಟಿಎಂ ಬೈಕ್ಗಳಲ್ಲಿ ಹಿಂಬಸಿ ಸೀಟ್ ಬಹಳ ಚಿಕ್ಕದಾಗಿರುತ್ತದೆ. ₹ 2.3 ಲಕ್ಷ ಇದರ ಬೆಲೆ.

ಡಿಎಸ್ಕೆ ಬನೇಲಿ ಟಿಆರ್ಕೆ 502

ಈಚೆಗಷ್ಟೇ ಭಾರತದಲ್ಲಿ ಪರಿಚಯಗೊಂಡಿರುವ ಬನೇಲಿ ಬೈಕ್ಗಳು ಮೋಡಿ ಮಾಡಲು ಶುರುಮಾಡಿವೆ. 2019ರಲ್ಲಿ ಸಂಪೂರ್ಣ ಆಫ್ರೋಡ್ ಬೈಕ್ ಹೊರಬರುತ್ತಿದೆ. ‘ಡಿಎಸ್ಕೆ ಬನೇಲಿ ಟಿಆರ್ಕೆ 502’ ಹೆಸರಿನ ಈ ಬೈಕ್ ಪಕ್ಕಾ ಗಡಸು ವಾಹನ. ಆಫ್ರೋಡ್ ಟೈರ್ ಉಳ್ಳ ವಿಶಾಲವಾದ ಚಕ್ರಗಳಿವೆ. ಆಧುನಿಕ ಬೈಕ್ ಆದರೂ ಸ್ಪೋಕ್ ವ್ಹೀಲ್ ಇರುವುದು ವಿಶೇಷ. 500 ಸಿಸಿ ಎಂಜಿನ್ ಇದೆ. 47 ಬಿಎಚ್ಪಿ ಶಕ್ತಿ ಹಾಗೂ 45 ಎನ್ಎಂ ಟಾರ್ಕ್ ಇರಲಿದೆ. ಹಾಗಾಗಿ, ಇದು ಶಕ್ತಿಯಲ್ಲಿ ದೈತ್ಯ. ಲೀಟರ್ ಪೆಟ್ರೋಲಿಗೆ 25 ಕಿಲೋಮೀಟರ್ ಮೈಲೇಜ್ ನೀಡುವುದು ಇನ್ನೊಂದು ವಿಶೇಷ. 20 ಲೀಟರ್ ಪೆಟ್ರೋಲ್ ಹಿಡಿಸುವ ಟ್ಯಾಂಕ್ ಇದ್ದು, ಕನಿಷ್ಠ 500 ಕಿಲೋಮೀಟರ್ ತಡೆರಹಿತ ಪ್ರಯಾಣದ ಭರವಸೆ ಇರಲಿದೆ. ಎರಡು ಸಿಲಿಂಡರ್ ಎಂಜಿನ್ ಇದ್ದು, ಎರಡು ಎಕ್ಸಾಸ್ಟ್ ಪೈಪ್ ಇರಲಿವೆ.

ದೂರದ ಪ್ರಯಾಣಕ್ಕೆ ಹೇಳಿ ಮಾಡಿಸಿದಂತೆ ಲಗ್ಗೇಜ್ ಇಟ್ಟುಕೊಳ್ಳಲು ಅಲ್ಯೂಮಿನಂ ಬಾಕ್ಸ್ ಇರಲಿವೆ. ಇದರ ಬೆಲೆ ₹ 6.5 ಲಕ್ಷ ಇರಲಿದೆ.

ಟ್ರಿಂಫ್ ಸ್ಕ್ರ್ಯಾಂಬ್ಲರ್ 1200

ಇದು ಎಲ್ಲ ಬೈಕುಗಳಿಂದ ದೈತ್ಯ ಬೈಕು. 1,200 ಸಿಸಿ ಎಂದರೆ ಅದರ ಶಕ್ತಿ ಸಾಮರ್ಥ್ಯ ಅರ್ಥವಾಗಬಹುದು ಅಲ್ಲವೇ. 89 ಬಿಎಚ್ಪಿ ಶಕ್ತಿ ಹಾಗೂ 110 ಎನ್ಎಂ ಟಾರ್ಕ್ ಇರಲಿದೆ. ಎರಡು ಸಿಲಿಂಡರ್ ಎಂಜಿನ್ ಇದ್ದು. ಡ್ಯೂಯಲ್ ಎಕ್ಸಾಸ್ಟ್ ಇರಲಿದೆ. ಡ್ಯೂಯಲ್ ಎಕ್ಸಾಸ್ಟ್ ಮಾತ್ರ ಇದರ ವಿಶೇಷವಲ್ಲ. ಆ್ಯಂಟಿಕ್ ಮಾದರಿಯಲ್ಲಿ ಸೀಟಿನ ಬಲಕೆಳಭಾಗದಲ್ಲಿ ಸೈಲೆನ್ಸರ್ ಪೈಪುಗಳನ್ನು ಇರಿಸಿರುವುದು ವಿಶೇಷ.

ಇದು ಬೈಕಿಗೆ ಹಳೆಯ ವಿನ್ಯಾಸದ ಮೆಲುಕನ್ನು ನೀಡುತ್ತದೆ. ಅಂದ ಹಾಗೆ, ಇದು ಆಫ್ ರೋಡ್ ಬೈಕ್ ಕೂಡಾ ಹೌದು. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವುದು ಕಡಿಮೆಯೇನಲ್ಲ. ಆದರೆ, ಈ ಬೈಕ್ ಕುಳ್ಳರಿಗಲ್ಲ. ಎತ್ತರದ ನಿಲುವಿನವರಿಗೆ ಇದು ಹೇಳಿ ಮಾಡಿಸಿದ ಬೈಕ್. ಇದರ ಬೆಲೆ ₹ 11 ಲಕ್ಷ ಇರಲಿದೆ.

ಬಿಎಂಡಬ್ಲ್ಯೂ ಆರ್ 1250 ಜಿಎಸ್

ದೈತ್ಯ ಎಂಜಿನ್ ಉಳ್ಳ ಬೈಕ್ಗಳನ್ನು ತಯಾರಿಸುವಲ್ಲಿ ಬಿಎಂಡಬ್ಲ್ಯೂ ಕಂಪನಿ ಹೆಸರುವಾಸಿ. ಅಂತೆಯೇ, ಹೊಸ ‘ಬಿಎಂಡಬ್ಲ್ಯೂ ಆರ್ 1250 ಜಿಎಸ್’ 1250 ಸಿಸಿ ಎಂಜಿನ್ ಹೊಂದಿದೆ. ಹೊಸ ‘ಬಾಕ್ಸರ್’ ಎಂಜಿನ್ ಇದರಲ್ಲಿದೆ. ಈ ಎಂಜಿನ್ನ ವಿಶೇಷವೆಂದರೆ ಅತಿ ಕಡಿಮೆ ಶಕ್ತಿ ನಷ್ಟ. ಅಂದರೆ, ಸಾಮಾನ್ಯ ಎಂಜಿನ್ಗಳಲ್ಲಿ ಉತ್ಪಾದನೆಯಾಗುವ ಶಕ್ತಿ ಚಲನಶಕ್ತಿಯಾಗಿ ಪರಿವರ್ತನೆಗೊಳ್ಳುವಾಗ ಕೊಂಚ ಕ್ಷೀಣಿಸುತ್ತದೆ. ಅದಕ್ಕೆ ಎಂಜಿನ್ನ ಕಂಪನ, ಒಳಗಿನ ಬಿಡಿಭಾಗಗಳ ಘರ್ಷಣೆ ಕಾರಣ. ಆದರೆ, ಬಾಕ್ಸರ್ ಎಂಜಿನ್ ಅತಿ ಸುಧಾರಿತವಾದುದು. ಇಲ್ಲಿ ಕಂಪನ, ಘರ್ಷಣೆ ಎರಡೂ ಕಡಿಮೆ. ಹಾಗಾಗಿ, ಗರಿಷ್ಠ ಶಕ್ತಿ ಸಿಗುತ್ತದೆ. ಮೈಲೇಜ್ ಸಹ ಉತ್ತಮವಾಗಿರುತ್ತದೆ. ಬರೋಬ್ಬರಿ 136 ಬಿಎಚ್ಪಿ ಶಕ್ತಿ ಇರಲಿದೆ. 143 ಎನ್ಎಂ ಟಾರ್ಕ್ ಇರಲಿದೆ. ಹಾಗಾಗಿ, ಸಾಮರ್ಥ್ಯದಲ್ಲಿ ಇದನ್ನು ಪ್ರಶ್ನಿಸುವಂತೆಯೇ ಇಲ್ಲ. ಎಲ್ಲ ಆಧುನಿಕ ತಂತ್ರಜ್ಞಾನಗಳಿವೆ. 6.5 ಇಂಚಿನ ಸ್ಪರ್ಶ ಸಂವೇದನೆಯ ಪರದೆ ಇರಲಿದೆ. ಎಬಿಎಸ್ ಇತ್ಯಾದಿ ಸೌಲಭ್ಯಗಳು ಇರಲಿವೆ. ಆದರೆ, ಬೆಲೆ ಕೇಳಿದರೆ ತಲೆಸುತ್ತು ಬರಬಹುದು. ₹ 20 ಲಕ್ಷದಿಂದ ಶುರುವಾಗುತ್ತದೆ.

ಬಜಾಜ್ ಡಾಮಿನರ್

2017ರಲ್ಲಿ ಬಿಡುಗಡೆಗೊಂಡಿರುವ ಬಜಾಜ್ ‘ಡಾಮಿನರ್’ ಹೊಸ ರೂಪ ಹೊತ್ತು ಬರುತ್ತಿದೆ. ಹಾಗಾಗಿ, ಇದನ್ನು ಹೊಸ ಬೈಕೆಂದು ಹೇಳಲಾಗದು. ಮೇಲ್ದರ್ಜೆಗೇರಿದ ಬೈಕೆಂದು ಹೇಳಬೇಕಷ್ಟೇ. 373 ಸಿಸಿ 4 ಸ್ಟ್ರೋಕ್ ಆಯಿಲ್ ಕೂಲ್ಡ್ ಎಂಜಿನ್ ಇರಲಿದೆ.

ಜತೆಗೆ, 34.5 ಬಿಎಚ್ಪಿ ಶಕ್ತಿ ಹಾಗೂ 35 ಎನ್ಎಂ ಟಾರ್ಕ್ ಇರಲಿದೆ. ಹಾಗಾಗಿ, ಹೊಸ ನಂಬರ್ ಪ್ಲೇಟ್, ಎಕ್ಸಾಸ್ಟ್ ಮಫ್ಲರ್ಗಳಿಗೆ ಹೊಸ ರೂಪ ಸಿಗುತ್ತಿದೆ. ಹಾಗಾಗಿ, ಅಂತಹ ಶ್ರೇಷ್ಠ ಬದಲಾವಣೆ ನಿರೀಕ್ಷಿಸುವಂತಿಲ್ಲ.

ಟ್ರಿಂಫ್ ಸ್ಕ್ರ್ಯಾಂಬ್ಲರ್ 1200

ಇದು ಎಲ್ಲ ಬೈಕುಗಳಿಂದ ದೈತ್ಯ ಬೈಕು. 1,200 ಸಿಸಿ ಎಂದರೆ ಅದರ ಶಕ್ತಿ ಸಾಮರ್ಥ್ಯ ಅರ್ಥವಾಗಬಹುದು ಅಲ್ಲವೇ. 89 ಬಿಎಚ್ಪಿ ಶಕ್ತಿ ಹಾಗೂ 110 ಎನ್ಎಂ ಟಾರ್ಕ್ ಇರಲಿದೆ. ಎರಡು ಸಿಲಿಂಡರ್ ಎಂಜಿನ್ ಇದ್ದು. ಡ್ಯೂಯಲ್ ಎಕ್ಸಾಸ್ಟ್ ಇರಲಿದೆ. ಡ್ಯೂಯಲ್ ಎಕ್ಸಾಸ್ಟ್ ಮಾತ್ರ ಇದರ ವಿಶೇಷವಲ್ಲ. ಆ್ಯಂಟಿಕ್ ಮಾದರಿಯಲ್ಲಿ ಸೀಟಿನ ಬಲಕೆಳಭಾಗದಲ್ಲಿ ಸೈಲೆನ್ಸರ್ ಪೈಪುಗಳನ್ನು ಇರಿಸಿರುವುದು ವಿಶೇಷ. ಇದು ಬೈಕಿಗೆ ಹಳೆಯ ವಿನ್ಯಾಸದ ಮೆಲುಕನ್ನು ನೀಡುತ್ತದೆ. ಅಂದ ಹಾಗೆ, ಇದು ಆಫ್ ರೋಡ್ ಬೈಕ್ ಕೂಡಾ ಹೌದು. 180 ಎಂಎಂ ಗ್ರೌಂಡ್ ಕ್ಲಿಯರೆನ್ಸ್ ಇರುವುದು ಕಡಿಮೆಯೇನಲ್ಲ. ಆದರೆ, ಈ ಬೈಕ್ ಕುಳ್ಳರಿಗಲ್ಲ. ಎತ್ತರದ ನಿಲುವಿನವರಿಗೆ ಇದು ಹೇಳಿ ಮಾಡಿಸಿದ ಬೈಕ್. ಇದರ ಬೆಲೆ ₹ 11 ಲಕ್ಷ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.