ಬೆಂಗಳೂರು: ಕಾರು ತಯಾರಿಕಾ ಕಂಪನಿ ಟೊಯೊಟಾ, ಮೂರು ಚಕ್ರಗಳ, ಬ್ಯಾಟರಿ ಚಾಲಿತ ಪುಟ್ಟ ಸ್ಕೂಟರ್ ಅನ್ನು ಬಿಡುಗಡೆ ಮಾಡಿದೆ.

ಸಿ+ವಾಕ್ ಹೆಸರಿನ ಎಲೆಕ್ಟ್ರಿಕ್ ಸ್ಕೂಟರ್, ಪಾದಾಚಾರಿ ಮಾರ್ಗಗಳಲ್ಲಿ ಬಳಕೆಗೆ ಹೆಚ್ಚು ಸೂಕ್ತವಾಗಿದೆ. ಅಲ್ಲದೆ, ಕಡಿಮೆ ಸ್ಥಳವನ್ನು ಇದು ಆಕ್ರಮಿಸಿಕೊಳ್ಳುವ ಜತೆಗೆ, ಸಾಮಾನ್ಯರು ನಡೆದಾಡುವ ಗರಿಷ್ಠ ವೇಗದಷ್ಟೇ ವೇಗ ಹೊಂದಿದ್ದು, ಜನರಿಗೆ ಮತ್ತು ಇತರ ವಸ್ತುಗಳಿಗೆ ಡಿಕ್ಕಿಯಾಗುವ ಸಾಧ್ಯತೆ ಇರುವುದಿಲ್ಲ ಎಂದು ಕಂಪನಿ ಹೇಳಿದೆ.

ಮುಂಭಾಗದಲ್ಲಿ ಒಂದು ಮತ್ತು ಹಿಂಭಾಗದಲ್ಲಿ ಎರಡು ಪುಟ್ಟ ಚಕ್ರಗಳು ಇದ್ದು, ಕ್ಯಾಂಪಸ್‌ಗಳಲ್ಲಿ, ಬಡಾವಣೆಯಲ್ಲಿ ಮತ್ತು ನಡೆದಾಡಲು ತೊಂದರೆ ಇರುವವರು ಬಳಸಲು ಪ್ರಶಸ್ತವಾಗಿದೆ ಎಂದು ಟೊಯೊಟಾ ತಿಳಿಸಿದೆ.

2.5 ಗಂಟೆಗಳಲ್ಲಿ ಬ್ಯಾಟರಿ ಪೂರ್ತಿಯಾಗಿ ಚಾರ್ಜ್ ಆಗಲಿದೆ. ಬಳಿಕ 14 ಕಿ.ಮೀ ಚಲಾಯಿಸಬಹುದಾಗಿದೆ.

ಟಾಟಾ ಪಂಚ್ ಅನಾವರಣ: ₹21 ಸಾವಿರಕ್ಕೆ ಬುಕಿಂಗ್ ಆರಂಭ

ಜಪಾನ್‌ನಲ್ಲಿ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆ ಪ್ರವೇಶಿಸಿದ್ದು,ಅಂದಾಜು ₹2.27 ಲಕ್ಷ ಮತ್ತು ₹2.36 ಲಕ್ಷ ದರ ಹೊಂದಿದೆ.

ಡುಕಾಟಿಯ ಹೊಸ ಮಾನ್ಸ್ಟರ್ ಬಿಡುಗಡೆ: ಬೆಲೆ ₹10.99 ಲಕ್ಷದಿಂದ ಆರಂಭ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.