ಬೇಸಿಗೆಯಲ್ಲಿ ಶುಷ್ಕವೆನಿಸುವ ಚರ್ಮಕ್ಕೆ ಕಾಳಜಿ ಮಾಡಿಕೊಂಡವರು, ಮಳೆಗಾಲ ಬಂತೆಂದು ನಿರ್ಲಕ್ಷಿಸುವಂತಿಲ್ಲ. ಈ ಮಳೆಗಾಲದಲ್ಲಿ ತುಸು ನಿರ್ಲಕ್ಷ್ಯ ತೋರಿದರೂ ಚರ್ಮ ಕಾಂತಿಹೀನವಾಗುವ ಸಾಧ್ಯತೆಗಳು ಅತಿ ಹೆಚ್ಚಾಗಿರುತ್ತವೆ. ಹಾಗೆಯೇ ಒದ್ದೆಗೂದಲನ್ನು ಒಣಗಿಸದಿದ್ದಲ್ಲಿ ಕೇಶ ಆರೋಗ್ಯಕ್ಕೂ ಹಾನಿಯಾಗಲಿದೆ.

ಮಳೆಗಾಲದಲ್ಲಿ ಸೂರ್ಯನ ಸುಡುಬಿಸಿಲು ಇರಲಿ, ಬಿಡಲಿ ಸನ್ಸ್ಕ್ರೀನ್ ಲೋಷನ್ ಬಳಸುವುದನ್ನು ಬಿಡಬೇಡಿ. ಮಳೆಯಲ್ಲಿ ನೆನೆದಿದ್ದರೆ ಮೊದಲು ಮುಖವನ್ನು ಸ್ವಚ್ಛವಾಗಿ ತೊಳೆದುಕೊಂಡು, ಒಣ ಬಟ್ಟೆಯಿಂದ ಟ್ಯಾಪ್ ಮಾಡಿಕೊಂಡು ಒರೆಸಿಕೊಳ್ಳಿ. ಪ್ರತಿದಿನವೂ ಮೇಕಪ್ ಅನ್ನು ಮರೆಯದೇ ತೆಗೆಯಿರಿ. ಮಳೆಯಲ್ಲಿ ನೆನೆದೆವೆಂದು, ಮೇಕಪ್ ತೆಗೆಯದೇ ಇರಬೇಡಿ. ಅಳಿದುಳಿದ ಮೇಕಪ್ನ ಕೆಮಿಕಲ್ಗಳು ಚರ್ಮವನ್ನು ಶುಷ್ಕ ಮತ್ತು ಕಾಂತಿಹೀನಗೊಳಿಸುತ್ತದೆ.

ವಾರಕ್ಕೆ ಎರಡು ಸಲವಾದರೂ ನಿಮ್ಮ ಚರ್ಮಕ್ಕೆ ಹೊಂದುವ ಸ್ಕ್ರಬರ್ನಿಂದ ಸ್ವಚ್ಛಗೊಳಿಸಿಕೊಳ್ಳಿ. ಚರ್ಮದ ಮೇಲಿನ ಸತ್ತ ಮತ್ತು ಶುಷ್ಕ ಕೋಶಗಳು ಇದರಿಂದ ನಿರ್ಮೂಲನೆ ಆಗುತ್ತವೆ. ಮಳೆಗಾಲದಲ್ಲಿ ಅತಿಕಡಿಮೆ ಮೇಕಪ್ ಯಾವಾಗಲೂ ಚರ್ಮವನ್ನು ರಕ್ಷಿಸುತ್ತದೆ. ಕಡಿಮೆ ಇದ್ದಷ್ಟೂ ಒಳಿತು. ಸಹಜವಾಗಿ, ನೈಸರ್ಗಿಕವಾಗಿರುವುದು ಒಳಿತು. ಕಣ್ಣಿನ ಮೇಕಪ್ ಆದಷ್ಟೂ ಇಲ್ಲದಿರುವಂತೆ ನೋಡಿಕೊಳ್ಳುವುದು ಒಳಿತು. ಮಳೆಬಂದು, ನೆನೆಯುವ ಸಾಧ್ಯತೆ ಇದ್ದಲ್ಲಿ ಮೇಕಪ್ ಇಲ್ಲದೆಯೇ ಆಚೆ ಹೋಗಲು ಸಾಧ್ಯವೆ ಎಂಬುದನ್ನೂ ಗಮನಿಸಿ.

ಮಳೆಗಾಲ ನೆನೆಯಲು ಹಿತವೆನಿಸುತ್ತದೆ. ಆದರೆ ಚರ್ಮದ ಆರೋಗ್ಯಕ್ಕೆ ನೀವು ಸದಾ ಕಾಳಜಿ ತೆಗೆದುಕೊಳ್ಳಲೇ ಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.