ತುಟಿಮೊಗ್ಗು, ಮದಿರೆಯ ಮಧುರ ತುಟಿಬಟ್ಟಲು ಎಂದೆಲ್ಲ ಕರೆಯುವ ಈ ತುಟಿ ಒಡೆಯುವುದು ಹೆಚ್ಚು. ಶುಷ್ಕವಾಗುವುದು, ಚರ್ಮ ಬಿರುಕು ಬಿಡುವುದು ಸಾಮಾನ್ಯ ಸಮಸ್ಯೆ. ಚಳಿಗಾಲದಲ್ಲಿಯಂತೂ ಇದು ಮಿತಿಮೀರುತ್ತದೆ.

ತುಟಿಯ ಮೇಲ್ಮೈ ಚರ್ಮ, ದೇಹದ ಉಳಿದ ಭಾಗದ ಚರ್ಮಕ್ಕಿಂತಲೂ ಸೂಕ್ಷ್ಮವಾದುದು. ತೆಳುವಾದುದು. ಈ ಭಾಗದಲ್ಲಿ ಮಾತ್ರ ಎಣ್ಣೆ ಕೋಶಗಳಿಲ್ಲ. ಹಾಗಾಗಿ ತುಟಿ ಬಲುಬೇಗನೇ ಶುಷ್ಕವಾಗುತ್ತವೆ. ಬಿರುಕು ಬಿಡುತ್ತದೆ. ತುಟಿ ರಕ್ಷಣೆಗೆ ಸರಳ ಸೂತ್ರಗಳು ಇಲ್ಲಿವೆ.

*ತುಟಿ ಕಚ್ಚಬೇಡಿ: ತುಟಿ ಕಚ್ಚುವುದು, ತುಟಿ ಕಚ್ಚಿ ಮಾತಾಡುವುದು ಹಲವರ ಅಭ್ಯಾಸ. ಆದರೆ ಇದು ಅತಿಯಾದಂತೆ ತುಟಿ ಊದಿಕೊಳ್ಳುವ ಸಾಧ್ಯತೆ ಇರುತ್ತದೆ. ಅನಾವಶ್ಯಕವಾಗಿ ತುಟಿಕಚ್ಚ ಬೇಡಿ

*ಲಿಪ್ಬಾಮ್ ಬಳಕೆ: ತುಟಿಗೆ ಆಗಾಗ ಆರೈಕೆ ಮಾಡುತ್ತಿರಬೇಕು. ಪ್ರತಿದಿನವೂ ಚಳಿಗಾಲವಿರಲಿ, ಬೇಸಿಗೆಯಿರಲಿ, ಯಾವುದೇ ದಿನವಿರಲಿ, ಲಿಪ್ ಬಾಮ್ ನಿಯಮಿತವಾಗಿ ಬಳಸಿ.

*ಮಲಗುವ ಮುನ್ನ: ತಿಳಿಕೆನೆ ಇಲ್ಲವೇ ತುಪ್ಪವನ್ನು ತುಟಿಗೆ ಸವರಿ. ಕೆನೆ ಹಾಗೂ ತುಪ್ಪದಂಶ ಇಂಗುವವರೆಗೂ ತುಟಿಗೆ ಸವರಬೇಕು.

*ಆಗಾಗ ನೀರು ಕುಡಿಯಿರಿ: ನೀರಿನ ಸೇವನೆಯಿಂದಲೂ ತುಟಿಯನ್ನು ಕೋಮಲವಾಗಿರಿಸಬಹುದು. ಸುಮಕೋಮಲ ತುಟಿಯ ನಿರ್ವಹಣೆ ಅತಿ ಸುಲಭ. ಆಗಾಗ ನೀರು ಕುಡಿಯುತ್ತಿರಿ.

*ತೇವಾಂಶ ಕಾಪಾಡಿ: ಆಗಾಗ ನಾಲಗೆಯಿಂದ ತುಟಿ ಸವರಿಕೊಳ್ಳಬಹುದು. ಇಲ್ಲವೇ ಸದಾ ಲಿಪ್ ಬಾಮ್ ನಿಮ್ಮ ಜೊತೆಗಿರಬೇಕು. ಜೊತೆಗಿದ್ದರಷ್ಟೇ ಸಾಲದು, ಆಗಾಗ ಲೇಪಿಸಿಕೊಳ್ಳಬೇಕು.

*ಮೇಕಪ್ ಜಾಗ್ರತೆ: ತುಟಿರಂಗು ಆಯ್ಕೆ ಮಾಡಿಕೊಳ್ಳುವಾಗ ಗುಣಮಟ್ಟದ ತುಟಿ ಬಣ್ಣವನ್ನು ಕೊಂಡುಕೊಳ್ಳಿ. ಇಲ್ಲವೇ ಕೆಲವು ಬಣ್ಣಗಳು ತುಟಿಗೆ ಹಾನಿಕಾರಕವಾಗಬಲ್ಲವು. ತುಟಿ ಕಪ್ಪು ಆಗಬಹುದು.

*ಮೇಕಪ್ ತೆಗೆಯಿರಿ: ರಾತ್ರಿ ಮಲಗುವ ಮುನ್ನ, ಸಮಾರಂಭಗಳ ನಂತರ ತುಟಿ ರಂಗನ್ನು ಒದ್ದೆ ಬಟ್ಟೆ ಅಥವಾ ಹತ್ತಿಯುಂಡೆಯಿಂದ ಸ್ವಚ್ಛಗೊಳಿಸಿ.

*ಧೂಮಪಾನ ಬೇಡ: ಅಂದದ ತುಟಿ ನಿಮ್ಮದಾಗಬೇಕೆಂದರೆ ಧೂಮಪಾನದಿಂದ ದೂರವಿರಿ. ತುಟಿ ಬಣ್ಣಗೆಡುವುದಷ್ಟೇ ಅಲ್ಲ, ಹೊಗೆ ಸುತ್ತಿದಂತೆ ಕಪ್ಪಾಗುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.