ಫ್ಯಾಷನ್ ಅನ್ನೋದು ಯಾವಾಗಲೂ ಉಡುಪಿನ ಬಗ್ಗೆ ಪ್ಯಾಷನ್ ಇರುವವರ ಸ್ವತ್ತು. ಅಲ್ಲಿ ಟ್ರೆಂಡ್ ಸೃಷ್ಟಿ ಆಗ್ತಾನೇ ಇರುತ್ತದೆ. ಹೊಸ ಹೊಸ ಟ್ರೆಂಡ್ ಮಾರುಕಟ್ಟೆಗೆ ಬಂದಷ್ಟೇ ವೇಗವಾಗಿ ಜನ ಮೆಚ್ಚಿ ಧರಿಸುತ್ತಾರೆ.

ಈಗ ನಾವು ಮಾಹಿತಿ ಯುಗದಲ್ಲಿದ್ದೇವೆ. ತುದಿ ಬೆರಳಲ್ಲಿ ನಾನಾ ದೇಶದ ನ್ಯೂಸ್‌ಗಳು ಸಿಗುವಂತಾಗಿದ್ದರೂ ನ್ಯೂಸ್ ಪೇಪರ್ ಮಾತ್ರ ತನ್ನ ಸ್ಥಾನ ಉಳಿಸಿಕೊಂಡಿದೆ. ಈಗ ಆ ನ್ಯೂಸ್ ಪೇಪರ್ ಅನ್ನೇ ಹೋಲುವ ಬಗೆಬಗೆಯ ಉಡುಪುಗಳು ಮಾರುಕಟ್ಟೆ ಪ್ರವೇಶಿಸಿವೆ . ಟ್ರೆಂಡ್ ಸೃಷ್ಟಿಸುತ್ತಿವೆ.

1800ನೇ ಇಸವಿಯಲ್ಲಿ ನ್ಯೂಸ್ ಪೇಪರ್ ಪ್ರಿಂಟ್‌ನ ದಿರಿಸು ಚಾಲ್ತಿಯಲ್ಲಿತ್ತು. ಅಂದಿನ ರಾಣಿಯರು ಗೌನ್ ರೂಪದ ನ್ಯೂಸ್ ಪೇಪರ್ ಪ್ರಿಂಟ್ ಬಟ್ಟೆ ತೊಡುತ್ತಿದ್ದರು. ಈಗ ಈ ಟ್ರೆಂಡ್ ಫ್ಯಾಷನ್ ಮಾರುಕಟ್ಟೆಗೆ ಮತ್ತೆ ಬಂದಿದೆ. ಸೀರೆ, ಟಾಪ್, ಟಿ ಶರ್ಟ್ ಹೀಗೆ ಪ್ರತಿಯೊಂದರಲ್ಲೂ ನ್ಯೂಸ್ ಪೇಪರ್ ಪ್ರಿಂಟ್ ನ ಲಾಲಿತ್ಯ ಎದ್ದು ಕಾಣುತ್ತಿದೆ.

l ಸೀರೆ: ನ್ಯೂಸ್ ಪೇಪರ್ ಪ್ರಿಂಟ್ ಇರುವ ಸೀರೆ ಹೆಚ್ಚು ಸದ್ದು ಮಾಡುತ್ತಿದೆ. ಬ್ಲ್ಯಾಕ್ ಅಂಡ್ ವೈಟ್ ಪ್ರಿಂಟ್ ಇರುವ ಸೀರೆ ಫ್ಯಾಷನ್ ಪ್ರಿಯರನ್ನು ಹೆಚ್ಚು ಸೆಳೆಯುತ್ತಿದೆ. ಇದರ ಜತೆಗೆ ಚಿತ್ತಾರವಿಲ್ಲದ ಪ್ಲೇನ್ ಬ್ಲೌಸ್ ಧರಿಸುವುದರಿಂದ ಇನ್ನಷ್ಟು ಅಂದವಾಗಿ ಕಾಣಬಹುದು. ಇದರ ಜತೆ ಹಾಫ್ ಸ್ಲೀವ್, ಫುಲ್ ಸ್ಲೀವ್, ಸ್ಲೀವ್ ಲೆಸ್ ಬ್ಲೌಸ್ ಕೂಡ ಧರಿಸಬಹುದು. ಭಿನ್ನ ಬ್ಲೌಸ್ ವಿನ್ಯಾಸದೊಂದಿಗೆ ಈ ಸೀರೆಯ ಅಂದವನ್ನು ಇನ್ನಷ್ಟು ಹೆಚ್ಚಿಸಬಹುದು.

lಕ್ರಾಪ್ ಟಾಪ್: ನ್ಯೂಸ್ ಪ್ರಿಂಟ್ ಚಿತ್ತಾರದ ಕ್ರಾಪ್ ಟಾಪ್ ಅನ್ನು ಮಿಲೇನಿಯಲ್ ಯುಗದ ಹುಡುಗಿಯರು ಇಷ್ಟಪಟ್ಟು ಧರಿಸುತ್ತಿದ್ದಾರೆ. ವಿವಿಧ ಬಣ್ಣದ ಕ್ರಾಪ್ ಗಳು ಹೆಣ್ಣುಮಕ್ಕಳ ಅಂದ ಹೆಚ್ಚಿಸುವುದರಲ್ಲಿ ಎರಡು ಮಾತಿಲ್ಲ. ಇದನ್ನು ಜೀನ್ಸ್ ಜತೆ, ಮಿಡ್ಡಿ ಜೊತೆ, ಸ್ಕರ್ಟ್ ಜತೆ, ಜಗ್ಗಿಂಗ್ಸ್ ಜೊತೆ ಧರಿಸಲು ಸೂಕ್ತ ಎನ್ನಿಸುತ್ತದೆ. ಜೀನ್ಸ್ ಶಾರ್ಟ್ಸ್ ಜೊತೆ ಕೂಡ ಇದು ಸುಂದರವಾಗಿ ಕಾಣುತ್ತದೆ.

lಶರ್ಟ್: ನ್ಯೂಸ್ ಪ್ರಿಂಟ್ ಚಿತ್ತಾರವಿರುವ ಶರ್ಟ್ ಗಳು ಪುರುಷ ಹಾಗೂ ಮಹಿಳೆ ಇಬ್ಬರಿಗೂ ಹೊಂದಿಕೆಯಾಗುತ್ತದೆ. ಈ ಶರ್ಟ್ ಜೀನ್ಸ್ ಪ್ಯಾಂಟ್ ಜೊತೆ ಹೆಚ್ಚು ಹೊಂದುತ್ತದೆ. ಹೆಣ್ಣುಮಕ್ಕಳಿಗೆ ಉದ್ದನೆಯ ಶರ್ಟ್ ಟಾಪ್ ಧರಿಸುವುದರಿಂದ ಸುಂದರವಾಗಿ ಕಾಣಬಹುದು. ಇದರಲ್ಲೂ ಬ್ಲ್ಯಾಕ್ ಅಂಡ್ ವೈಟ್ ಹಾಗೂ ಭಿನ್ನ ಕಲರ್ ನ ಶರ್ಟ್ ಗಳು ಅಂದ ಹೆಚ್ಚಿಸುವುದರಲ್ಲಿ ಮಾತಿಲ್ಲ.

lಕುರ್ತಾ: ಕುರ್ತಾ ಭಾರತೀಯ ಹೆಣ್ಣುಮಕ್ಕಳ ನೆಚ್ಚಿನ ಉಡುಪು. ನ್ಯೂಸ್ ಪೇಪರ್ ಪ್ರಿಂಟ್ ಇರುವ ಕುರ್ತಾ ಗಳನ್ನು ಹೆಂಗಳೆಯರು ಮೆಚ್ಚಿ ಧರಿಸುತ್ತಿದ್ದಾರೆ. ಕಪ್ಪು. ಬಿಳಿ ಬಣ್ಣದ ನ್ಯೂಸ್ ಪೇಪರ್ ಪ್ರಿಂಟ್ ಇರುವ ಕುರ್ತಾ ಹೆಣ್ಣುಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತಿದೆ. ಇದರೊಂದಿಗೆ ಟಾಪ್ ಬಣ್ಣದ್ದೇ ಪ್ಯಾಂಟ್ ಧರಿಸುವುದು ಸೂಕ್ತ.

l ಛತ್ರಿ: ಬರೀ ಉಡುಪಿನಲ್ಲಿ ಮಾತ್ರವಲ್ಲ ಛತ್ರಿಯಲ್ಲೂ ನ್ಯೂಸ್ ಪೇಪರ್ ಪ್ರಿಂಟ್ ನ ಚಿತ್ತಾರ ಎದ್ದು ಕಾಣುತ್ತಿದೆ. ಬಣ್ಣ ಬಣ್ಣ ನ್ಯೂಸ್ ಪ್ರಿಂಟ್ ಇರುವ ಛತ್ರಿಗಳನ್ನು ಜನ ಮೆಚ್ಚಿ ಖರೀದಿಸುತ್ತಿದ್ದಾರೆ. ನ್ಯೂಸ್ ಪ್ರಿಂಟ್ ಚಿತ್ತಾರದ ಛತ್ರಿಯನ್ನು ಅದೇ ರೀತಿಯ ವಿನ್ಯಾಸದ ಉಡುಪಿನೊಂದಿಗೆ ಮ್ಯಾಚಿಂಗ್ ಮಾಡಿ ಧರಿಸುವುದರಿಂದ ಸ್ಟೈಲಿಶ್ ಆಗಿ ಕಾಣಬಹುದು.

lಜಾಕೆಟ್: ಮಳೆಗಾಲ ಚಳಿಗಾಲಕ್ಕೆ ಧರಿಸಲು ಸೂಕ್ತ ಎನ್ನಿಸುವ ಜಾಕೆಟ್ ನಲ್ಲಿ ನ್ಯೂಸ್ ಪ್ರಿಂಟ್ ಚಿತ್ತಾರ ಮೂಡಿರುವುದು ಫ್ಯಾಷನ್ ಪ್ರಿಯರಿಗೆ ಇನ್ನಷ್ಟು ಖುಷಿ ಹೆಚ್ಚುವಂತಾಗಿದೆ. ಪ್ಲೇನ್ ಶರ್ಟ್, ಟಿ ಶರ್ಟ್ ಜೊತೆ ಇದನ್ನು ಧರಿಸುವುದು ಸೂಕ್ತ. ಇದು ಚಳಿ. ಮಳೆಯಿಂದ ರಕ್ಷಣೆ ನೀಡುವ ಜೊತೆಗೆ ಸ್ಟೈಲಿಶ್ ಲುಕ್ ಸಿಗುವಂತೆ ಮಾಡುವುದಲ್ಲೂ ಅನುಮಾನವಿಲ್ಲ.⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.