ಮುಂಬೈ: ಗೋ ಫಸ್ಟ್ ವಿಮಾನಯಾನ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಕೌಶಿಕ್ ಖೋನಾ ರಾಜೀನಾಮೆ ನೀಡಿದ್ದಾರೆ. 2020ರ ಆಗಸ್ಟ್ನಲ್ಲಿ ಖೋನಾ ಗೋ ಫಸ್ಟ್ಗೆ ಸಿಇಒ ಆಗಿ ನೇಮಕಗೊಂಡಿದ್ದರು.

ಕಂಪನಿಯಲ್ಲಿ ನ.30 ತನ್ನ ಕೊನೆಯ ದಿನವಾಗಿದೆ ಎಂದು ಖೋನಾ ಅವರು ಏರ್ಲೈನ್ನ ಉದ್ಯೋಗಿಗಳಿಗೆ ಇ–ಮೇಲ್ನಲ್ಲಿ ತಿಳಿಸಿದ್ದಾರೆ.

'ಭಾರವಾದ ಹೃದಯದಿಂದ ಕಂಪನಿಯೊಂದಿಗೆ ಇಂದು ನನ್ನ ಕೊನೆಯ ದಿನ ಎಂದು ನಾನು ತಿಳಿಸಬೇಕಾಗಿದೆ. 2020ರ ಆಗಸ್ಟ್ನಲ್ಲಿ ಮತ್ತೊಮ್ಮೆ ಗೋ ಫಸ್ಟ್ನಲ್ಲಿ ಕೆಲಸ ಮಾಡಲು ನನಗೆ ಅವಕಾಶ ಸಿಕ್ಕಿತು.(ಇದಕ್ಕೂ ಮೊದಲು ಅವರು 2008 ರಿಂದ 2011 ರವರೆಗೆ ಕಾರ್ಯನಿರ್ವಹಿಸಿದ್ದರು). ನಿಮ್ಮ ಸಮರ್ಥ ಮತ್ತು ಸಕ್ರಿಯ ಬೆಂಬಲದೊಂದಿಗೆ ನಾನು ನನ್ನ ಅತ್ಯುತ್ತಮ ಸಾಮರ್ಥ್ಯಗಳನ್ನು ಪ್ರದರ್ಶಿಸಲು ಪ್ರಯತ್ನಿಸಿದೆ' ಎಂದು ಕೌಶಿಕ್ ಖೋನಾ ಇ-ಮೇಲ್ನಲ್ಲಿ ತಿಳಿಸಿದ್ದಾರೆ.

ಹಣಕಾಸಿನ ಸಂಕಷ್ಟಕ್ಕೆ ಸಿಲುಕಿದ ಕಂಪನಿ:

ಭಾರತದ ವಿಮಾನಯಾನ ಕ್ಷೇತ್ರದಲ್ಲಿ 2019ರಲ್ಲಿ ಜೆಟ್ ಏರ್ವೇಸ್ ಕಂಪನಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ನಂತರದಲ್ಲಿ, ಹಣಕಾಸಿನ ಸಂಕಷ್ಟಕ್ಕೆ ಸಿಲುಕಿರುವ ಮತ್ತೊಂದು ಕಂಪನಿ ಗೋ ಫಸ್ಟ್.

2021ರ ಚಳಿಗಾಲದಲ್ಲಿ ಗೋ ಫಸ್ಟ್ ಕಂಪನಿಯು ಭಾರತದ ಮಾರುಕಟ್ಟೆಯಲ್ಲಿ ಶೇ 10ರಷ್ಟು ಪಾಲು ಹೊಂದಿತ್ತು. ಇದು 2022ರ ಅಕ್ಟೋಬರ್ ವೇಳೆಗೆ ಶೇ 7ಕ್ಕೆ ಕುಸಿಯಿತು.
.ಆರ್ಥಿಕ ಸಂಕಷ್ಟ: ‘ಗೋ ಫಸ್ಟ್’ಗೆ ₹450 ಕೋಟಿ ಮಧ್ಯಂತರ ನೆರವು?.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.