2020ರಲ್ಲಿ, ಅಂದರೆ ಕೋವಿಡ್ ಸಮಯದಲ್ಲಿ ಶೇ 6.7ರಷ್ಟಿದ್ದ ಗೃಹ ಸಾಲದ ಮೇಲಿನ ಬಡ್ಡಿ ದರ ಈಗ ಶೇ 9ರ ಆಸುಪಾಸಿನಲ್ಲಿದೆ. ಆಗ ಸಾಲ ಪಡೆದಿರುವ ಹೆಚ್ಚಿನವರಿಗೆ ಈಗ ಮಾಸಿಕ ಕಂತಿನ ಮೊತ್ತ ಜಾಸ್ತಿಯಾಗಿದೆ. ₹50 ಲಕ್ಷ ಸಾಲವನ್ನು ಶೇ 6.7ರ ಬಡ್ಡಿ ದರದಲ್ಲಿ 20 ವರ್ಷಗಳಿಗೆ ಪಡೆದಿದ್ರೆ ಮಾಸಿಕ ಕಂತು ₹37,870 ಪಾವತಿಸಬೇಕಿತ್ತು. ಆದರೆ ಈಗ ಅದೇ ಸಾಲಕ್ಕೆ ಬಡ್ಡಿ ದರ ಶೇ 9 ಆಗಿರುವುದರಿಂದ ಮಾಸಿಕ ಕಂತು ₹44,986 ಆಗಿದೆ. ಈ ಹೊತ್ತಿನಲ್ಲಿ ಸಾಲದ ಹೊರೆಯನ್ನು ಬೇಗ ಇಳಿಸಿಕೊಳ್ಳೋದು ಹೇಗೆ ಎಂದು ಸಾಲಗಾರರು ಆಲೋಚನೆ ಮಾಡುತ್ತಿದ್ದಾರೆ. ಸಾಲ ಮರುಪಾವತಿ ಪ್ರಕ್ರಿಯೆಯಲ್ಲಿ ಸಣ್ಣ ಬದಲಾವಣೆ ಮಾಡಿಕೊಂಡರೆ ಹೇಗೆ ಸಾಲದ ಮೇಲಿನ ಬಡ್ಡಿ ಕಡಿಮೆ ಮಾಡಿಕೊಳ್ಳುವ ಜೊತೆಗೆ ಮರುಪಾವತಿ ಅವಧಿಯನ್ನೂ ತಗ್ಗಿಸಿಕೊಳ್ಳಬಹುದು ಎನ್ನುವುದರ ಪ್ರಾಯೋಗಿಕ ವಿವರಣೆ ಈ ಲೇಖನದಲ್ಲಿದೆ.

ಆರಂಭದಲ್ಲಿ ಬಡ್ಡಿಗೇ ಸಿಂಹಪಾಲು: ಗೃಹ ಸಾಲದ ಆರಂಭಿಕ ವರ್ಷಗಳಲ್ಲಿ ಪಾವತಿಸುವ ಕಂತುಗಳ ಸಿಂಹಪಾಲು ಬಡ್ಡಿಗೇ ಹೋಗುತ್ತದೆ. ಅಸಲಿನ ಮೊತ್ತಕ್ಕೆ ಹೋಗುವ ಪಾಲು ತೀರಾ ಕಡಿಮೆ. ಉದಾಹರಣೆಗೆ ಶೇ 9ರ ಬಡ್ಡಿ ದರದಲ್ಲಿ 20 ವರ್ಷಗಳಿಗೆ ₹50 ಲಕ್ಷ ಗೃಹ ಸಾಲ ಪಡೆದಿದ್ದು ಮಾಸಿಕ ₹44,986 ಕಂತು ಪಾವತಿಸುತ್ತಿದ್ದೀರಿ ಎಂದು ಭಾವಿಸಿ. ಇದರಂತೆ ಮೊದಲ ವರ್ಷ ₹5 ಲಕ್ಷ 40 ಸಾವಿರ ಪಾವತಿಸಿರುತ್ತೀರಿ. ಈ ಪೈಕಿ ₹4 ಲಕ್ಷ 46 ಸಾವಿರ ಬಡ್ಡಿಗೆ ಹೋಗುತ್ತದೆ. ಉಳಿದ ₹94 ಸಾವಿರ ಮಾತ್ರ ಅಸಲಿನ ಮೊತ್ತಕ್ಕೆ ಸೇರ್ಪಡೆಯಾಗುತ್ತದೆ. ಎರಡನೇ ವರ್ಷ ₹4 ಲಕ್ಷದ 38 ಸಾವಿರ ಬಡ್ಡಿಗೆ ಹೋಗುತ್ತದೆ. ₹1 ಲಕ್ಷದ 2 ಸಾವಿರ ಮಾತ್ರ ಅಸಲಿನ ಬಾಬ್ತಿಗೆ ಸೇರುತ್ತದೆ. ಈ ಲೆಕ್ಕಾಚಾರದಂತೆ ₹50 ಲಕ್ಷದ ಸಾಲದ ಬಾಬ್ತಿನಲ್ಲಿ ಅರ್ಧದಷ್ಟು ಸಾಲ ತೀರಿಸಲು 13 ವರ್ಷಗಳು ಬೇಕಾಗುತ್ತದೆ. ಹಾಗಾಗಿ ಗೃಹ ಸಾಲ ಪಡೆದವರು ಎಷ್ಟು ಸಾಧ್ಯವೋ ಅಷ್ಟು ಅವಧಿಪೂರ್ವ ಹೆಚ್ಚುವರಿ ಪಾವತಿಗಳನ್ನು ಮಾಡಿದರೆ ಒಳಿತು. ಗೃಹ ಸಾಲದ ಮೇಲಿನ ಬಡ್ಡಿಯನ್ನು ಒಟ್ಟು ಬಾಕಿಯ ಮೊತ್ತದ ಮೇಲೆ ಲೆಕ್ಕ ಹಾಕುವುದರಿಂದ ಅಸಲಿನ ಮೊತ್ತ ಎಷ್ಟು ಕಡಿಮೆ ಮಾಡಲು ಪ್ರಯತ್ನಿಸುವಿರೋ ಅಷ್ಟು ನಿಮಗೆ ಲಾಭವಾಗುತ್ತದೆ. ವಾರ್ಷಿಕವಾಗಿ ಹೆಚ್ಚಳವಾಗುವ ವೇತನ, ಬೋನಸ್ ಹಣ, ಇನ್ಯಾವುದಾದರೂ ಹೂಡಿಕೆಯಿಂದ ಬಂದ ಲಾಭದ ಹಣ, ಹೆಚ್ಚುವರಿ ಉಳಿತಾಯದ ಹಣವನ್ನು ಗೃಹ ಸಾಲದ ಅಸಲಿಗೆ ಕಟ್ಟಿದರೆ ಬೇಗ ಸಾಲ ತೀರಿಸಲು ಸಾಧ್ಯವಾಗುತ್ತದೆ.

ಬೇಗ ತೀರಿಸುವುದು ಹೇಗೆ?: ₹50 ಲಕ್ಷ ಸಾಲವನ್ನು ಶೇ 9ರ ಬಡ್ಡಿ ದರದಲ್ಲಿ 20 ವರ್ಷಗಳ ಅವಧಿಗೆ ತೆಗೆದುಕೊಂಡರೆ ಮಾಸಿಕ ಕಂತು (ಇಎಂಐ) ₹44,986 ಪಾವತಿಸಬೇಕಾಗುತ್ತದೆ. ಇದೇ ರೀತಿ ಮಾಸಿಕ ₹44,986 ಅನ್ನು 20 ವರ್ಷಗಳ ಕಾಲ ಪಾವತಿಸಿದರೆ ಅಸಲಿನ ಮೊತ್ತ ₹50 ಲಕ್ಷ ಮತ್ತು ಬಡ್ಡಿಯ ಮೊತ್ತ ₹57 ಲಕ್ಷದ 97 ಸಾವಿರ ಸೇರಿ ಒಟ್ಟು ₹1 ಕೋಟಿ 8 ಲಕ್ಷ ಕಟ್ಟಬೇಕಾಗುತ್ತದೆ. ಉದಾಹರಣೆಗೆ ಪ್ರತಿ ವರ್ಷ 12 ಮಾಸಿಕ ಕಂತುಗಳೊಂದಿಗೆ ಒಂದು ಹೆಚ್ಚುವರಿ ಕಂತು (₹44986 X 1 ಇಎಂಐ) ಪಾವತಿಸಲು ಮುಂದಾಗುತ್ತೀರಿ ಎಂದು ಭಾವಿಸಿ. ಆಗ ನಿಮಗೆ ಬರೋಬ್ಬರಿ ₹13 ಲಕ್ಷ ಬಡ್ಡಿ ಹಣ ಉಳಿತಾಯವಾಗುತ್ತದೆ. ಇಷ್ಟೇ ಅಲ್ಲ, ನಿಮ್ಮ ಸಾಲದ ಮರುಪಾವತಿ ಅವಧಿ 3 ವರ್ಷಗಳು ಕಡಿಮೆಯಾಗಿ 17 ವರ್ಷಗಳಿಗೇ ಸಾಲ ತೀರುತ್ತದೆ. ಪ್ರತಿ ವರ್ಷ ಒಂದರ ಬದಲಿಗೆ 2 ಹೆಚ್ಚುವರಿ ಕಂತು (₹44,986 X 2 ಇಎಂಐ) ಪಾವತಿಸಲು ಮುಂದಾಗುತ್ತೀರಿ ಎಂದುಕೊಳ್ಳಿ. ಆಗ ನಿಮಗೆ ₹21 ಲಕ್ಷ ಬಡ್ಡಿ ಹಣ ಉಳಿಯುತ್ತದೆ. ಸಾಲದ ಮರುಪಾವತಿ ಅವಧಿಯೂ 5 ವರ್ಷಗಳಷ್ಟು ಕಡಿಮೆಯಾಗಿ 15 ವರ್ಷಗಳಿಗೇ ಸಾಲ ಕೊನೆಗೊಳ್ಳುತ್ತದೆ. ವಾರ್ಷಿಕ ಎರಡರ ಬದಲಿಗೆ 3 ಹೆಚ್ಚುವರಿ ಕಂತು (₹44,986 X 3 ಇಎಂಐ) ಪಾವತಿಸಿದರೆ ₹25 ಲಕ್ಷದ 50 ಸಾವಿರ ಬಡ್ಡಿ ಹಣ ಉಳಿತಾಯವಾಗಿ 13 ವರ್ಷಗಳ ಅವಧಿಗೇ ಸಾಲ ಮುಗಿಯುತ್ತದೆ. ಒಂದು ವರ್ಷದಲ್ಲಿ 4 ಹೆಚ್ಚುವರಿ ಕಂತು ಕಟ್ಟಿದರೆ (₹44,986 X 4 ಇಎಂಐ) ₹30 ಲಕ್ಷದ 50 ಸಾವಿರ ಬಡ್ಡಿ ಮೊತ್ತ ಉಳಿತಾಯವಾಗಿ 10 ವರ್ಷಗಳಲ್ಲೇ ಸಾಲ ತೀರುತ್ತದೆ.

ಅವಧಿಗೂ ಮುನ್ನ ಪಾವತಿ ಅವಕಾಶ: ಆರ್ಬಿಐ ನಿಯಮದ ಪ್ರಕಾರ ಗೃಹ ಸಾಲವನ್ನು ಅವಧಿಗೆ ಮುನ್ನ ಮರುಪಾವತಿಸಲು ಅವಕಾಶವಿದೆ. ಕೆಲ ಬ್ಯಾಂಕ್ಗಳು ಮೊದಲ 6 ತಿಂಗಳು ಮಾತ್ರ ಸಾಲ ಮರುಪಾವತಿಗೆ ನಿರ್ಬಂಧ ಹೇರುತ್ತವೆ. ಆದರೆ ನಂತರದಲ್ಲಿ ಯಾವುದೇ ಅಡೆತಡೆಯಿಲ್ಲದೆ ಹೆಚ್ಚುವರಿ ಸಾಲದ ಕಂತುಗಳನ್ನು ಪಾವತಿ ಮಾಡಬಹುದು. ಒಂದೇ ಬಾರಿ ಪೂರ್ತಿ ಸಾಲವನ್ನು ತೀರಿಸಲು ಕೂಡ ಅವಕಾಶವಿದೆ. ಇತ್ತೀಚೆಗೆ ಅಂದರೆ ಅಗಸ್ಟ್ ನಲ್ಲಿ ಹೊರಡಿಸಿರುವ ಆದೇಶದಲ್ಲಿ ಗ್ರಾಹಕರಿಗೆ ಸಾಲದ ಇಎಂಐ ಮೊತ್ತ ಹೆಚ್ಚಿಸಿಕೊಳ್ಳಲು ಮತ್ತು ಅವಧಿಗೂ ಮುನ್ನ ಸಾಲ ಮರುಪಾವತಿಸಲು ಬ್ಯಾಂಕ್ಗಳು ಅವಕಾಶ ಕಲ್ಪಿಸಬೇಕು ಎಂದು ಸೂಚಿಸಿದೆ.

ಅಲ್ಪ ಗಳಿಕೆ ಕಂಡ ಷೇರುಪೇಟೆ ಸೂಚ್ಯಂಕಗಳು

ಅಕ್ಟೋಬರ್ 6ಕ್ಕೆ ಕೊನೆಗೊಂಡ ವಾರದಲ್ಲಿ ಷೇರುಪೇಟೆ ಸೂಚ್ಯಂಕಗಳು ಅಲ್ಪ ಮೊತ್ತದ ಗಳಿಕೆ ಕಂಡಿವೆ. 65,995 ರಲ್ಲಿ ವಹಿವಾಟು ಪೂರ್ಣಗೊಳಿಸಿರುವ ಸೆನ್ಸೆಕ್ಸ್, ವಾರದ ಅವಧಿಯಲ್ಲಿ ಶೇ 0.3ರಷ್ಟು ಜಿಗಿದಿದೆ. 19,653 ಅಂಶಗಳಲ್ಲಿ ವಹಿವಾಟು ಮುಗಿಸಿರುವ ನಿಫ್ಟಿ ಶೇ 0.1ರಷ್ಟು ಹೆಚ್ಚಳ ಕಂಡಿದೆ.ಅಮೆರಿಕ ಬಾಂಡ್ ಗಳಿಕೆಯಲ್ಲಿ ಹೆಚ್ಚಳ, ರೂಪಾಯಿ ಮೌಲ್ಯ ಕುಸಿತ, ಆರ್ಬಿಐ ಬಡ್ಡಿ ದರ ಯಥಾಸ್ಥಿತಿ, ತೈಲ ಬೆಲೆಯಲ್ಲಿ ಇಳಿಕೆ ಸೇರಿದಂತೆ ಇನ್ನೂ ಕೆಲ ಅಂಶಗಳು ಮಾರುಕಟ್ಟೆ ಮೇಲೆ ಪರಿಣಾಮ ಬೀರಿವೆ.

ವಲಯವಾರು ಪ್ರಗತಿಯಲ್ಲಿ ಬಿಎಸ್ಇ ರಿಯಲ್ ಎಸ್ಟೇಟ್ ಸೂಚ್ಯಂಕ ಶೇ 2, ಮಾಹಿತಿ ತಂತ್ರಜ್ಞಾನ ಶೇ 1.8, ಬಿಎಸ್ ಇ ಕ್ಯಾಪಿಟಲ್ ಗೂಡ್ಸ್ ಶೇ 1 ರಷ್ಟು ಗಳಿಸಿಕೊಂಡಿವೆ. ಬಿಎಸ್ಇ ಪವರ್ ಶೇ 2.5, ಮೆಟಲ್ ಶೇ 2.3 ಮತ್ತು ಟೆಲಿಕಾಂ ಶೇ 2ರಷ್ಟು ಕುಸಿದಿವೆ. ಈ ವಾರ ನಿಫ್ಟಿಯಲ್ಲಿ ಬಜಾಜ್ ಫಿನ್ ಸರ್ವ್ ಶೇ 6.13, ಟೈಟನ್ ಶೇ 5.11, ಬಜಾಜ್ ಫಿನ್ ಸರ್ವ್ ಶೇ 4.58, ಇನ್ಫೊಸಿಸ್ ಶೇ 3.01, ಅದಾನಿ ಎಂಟರ್ ಪ್ರೈಸಸ್ ಶೇ 2.66, ಟಿಸಿಎಸ್ ಶೇ 2.63 ಮತ್ತು ಎಲ್ ಆ್ಯಂಡ್ ಟಿ ಶೇ 2.32ರಷ್ಟು ಗಳಿಕೆ ಕಂಡಿವೆ. ಒಎನ್ಜಿಸಿ ಶೇ 5.42, ಎನ್ಟಿಪಿಸಿ ಶೇ 4.07, ಹಿಂಡಾಲ್ಕೋ ಶೇ 4.07, ಎಕ್ಸಿಸ್ ಬ್ಯಾಂಕ್ ಶೇ 3.45, ಮಾರುತಿ ಶೇ 2.91, ಡಾ ರೆಡ್ಡೀಸ್ ಲ್ಯಾಬೊರೇಟರಿಸ್ ಶೇ 2.9 ಸನ್ ಫಾರ್ಮಾ ಶೇ 2.71 ಮತ್ತು ಕೋಲ್ ಇಂಡಿಯಾ ಶೇ 2.51ಷ್ಟು ಕುಸಿತ ದಾಖಲಿಸಿವೆ.

ಮುನ್ನೋಟ: ಟಿಸಿಎಸ್, ಎಚ್ಸಿಎಲ್ ಟೆಕ್, ಇನ್ಫೊಸಿಸ್, ಡೆಲ್ಟಾ ಕಾರ್ಪ್, ಸೇರಿದಂತೆ ಪ್ರಮುಖ ಕಂಪನಿಗಳ ತ್ರೈಮಾಸಿಕ ಫಲಿತಾಂಶ ಈ ವಾರ ಹೊರಬೀಳಲಿದೆ. ಜಾಗತಿಕ ಮಾರುಕಟ್ಟೆಗಳ ಸ್ಥಿತಿಗತಿ ದೇಶಿಯ ಮಾರುಕಟ್ಟೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ಸದ್ಯದ ಸ್ಥಿತಿಯಲ್ಲಿ ಹೂಡಿಕೆದಾರರು ಆಯ್ದ

(ಲೇಖಕಿ ಚಾರ್ಟರ್ಡ್ ಅಕೌಂಟೆಂಟ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.