ದೆಹಲಿ: ‘ತಿಂಗಳಿಗೆ ₹160 ನೀಡಿ 16 ಜಿಬಿ ಬಳಸುತ್ತಿರುವುದು ದುರಂತ,’ ಎಂದಿರು ಭಾರ್ತಿ ಏರ್ಟೆಲ್ ಸಂಸ್ಥಾಪಕ ಮತ್ತು ಅಧ್ಯಕ್ಷ ಸುನಿಲ್ ಭಾರತಿ ಮಿತ್ತಲ್ ಅವರು ಮೊಬೈಲ್ ಸೇವೆಗಳ ದರ ಹೆಚ್ಚಳದ ಮನ್ಸೂಚನೆ ನೀಡಿದ್ದಾರೆ.

ಭಾರ್ತಿ ಎಂಟರ್ಪ್ರೈಸಸ್ನಲ್ಲಿ ತಮ್ಮ ಸಹೋದ್ಯೋಗಿಯಾಗಿರುವ ಅಖಿಲ್ ಗುಪ್ತಾ ಅವರು ಬರೆದಿರುವ'ಸೇಮ್ ಸೈಝ್ ಫಿಟ್ ಆಲ್' ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಸೋಮವಾರ ಅವರು ಮಾತನಾಡಿದ್ದಾರೆ.

‘ಮುಂದಿನ ಆರು ತಿಂಗಳಲ್ಲಿ ಪ್ರತಿ ಬಳಕೆದಾರನಿಂದ ನಿರೀಕ್ಷಿಸಲಾಗುತ್ತಿರುವ ಆದಾಯವು ₹200 ರೂ.ಗಳನ್ನು ದಾಟಲಿದೆ. ತಿಂಗಳಿಗೆ ₹160 ನೀಡಿ 16 ಜಿಬಿ ಡೇಟಾ ಬಳಸುವುದು ದುರಂತದ ವಿಚಾರ,’ ಎಂದು ಮಿತ್ತಲ್ ಬೇಸರ ವ್ಯಕ್ತಪಡಿಸಿದ್ದಾರೆ.

‘ಈ ಹಂತದಲ್ಲಿ ನೀವು ತಿಂಗಳಕ್ಕೆ 16 ಜಿಬಿ ಬಳಸುತ್ತಿರಬಹುದು. ಆದರೆ, ಹೆಚ್ಚಿನ ಬೆಲೆ ತೆರಲು ನೀವು ಸಿದ್ಧರಾಗಬೇಕಿದೆ. ನಾವು 50–60 ಡಾಲರ್ಗಳನ್ನು ಕೇಳುತ್ತಿಲ್ಲ. ಆದರೆ, ತಿಂಗಳಿಗೆ ಎರಡು ಡಾಲರ್ ನೀಡಿ 16 ಜಿಬಿ ಬಳಸುವುದು ಸಮಂಜಸವಲ್ಲ,’ ಎಂದು ಮಿತ್ತಲ್ ಹೇಳಿದ್ದಾರೆ.

‘ಪ್ರತಿ ಗ್ರಾಹಕನಿಂದ ಸರಾಸರಿ ₹300 ಆದಾಯ ಬಂದರೆ ಉದ್ಯಮ ಸುಸ್ಥಿರವಾಗಿ ನಡೆದುಕೊಂಡು ಹೋಗುತ್ತದೆ. ಆದರೆ, ಕೆಳ ಹಂತದಲ್ಲಿ ಪ್ರತಿ ಗ್ರಾಹಕ ಈಗಲೂ ₹100 ನೀಡುತ್ತಿದ್ದಾರೆ,’ ಎಂದು ಅವರು ತಿಳಿಸಿದರು.

‘ನಿಮ್ಮ ಬಳಕೆಗೂ ಮೀರಿ ಟಿವಿ, ಚಲನಚಿತ್ರಗಳು, ಮನರಂಜನೆ ಮತ್ತು ಇತರ ಪ್ರಮುಖ ವಿಶೇಷ ಸೇವೆಗಳನ್ನು ನೆಟ್ವರ್ಕ್ನಿಂದ ಪಡೆಯುತ್ತಿದ್ದರೆ, ಅದಕ್ಕಾಗಿ ನೀವು ಹೆಚ್ಚಾಗಿ ಪಾವತಿಸಬೇಕಾಗುತ್ತದೆ’ ಎಂದು ಮಿತ್ತಲ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.