ಬೆಂಗಳೂರು: ಆದಿತ್ಯ ಬಿರ್ಲಾ ಸಮೂಹದ ಆದಿತ್ಯ ಬಿರ್ಲಾ ಕ್ಯಾಪಿಟಲ್ (ಎಬಿಸಿ) ಡಿಜಿಟಲ್ ಸೇವೆಗಳನ್ನು ಮತ್ತಷ್ಟು ವಿಸ್ತರಿಸಲು ಓಮ್ನಿ ಚಾನೆಲ್ ಎಬಿಸಿಡಿ ಡಿ2ಸಿ ಅನ್ನು ‘ಎವರಿಥಿಂಗ್ ಫೈನಾನ್ಸ್ ಆಸ್ ಸಿಂಪಲ್ ಆಸ್ ಎಬಿಸಿಡಿ’ ಘೋಷವಾಕ್ಯದ ಮೂಲಕ ಪ್ರಾರಂಭಿಸಿದೆ.

ಈ ವೇದಿಕೆ ಮೂಲಕ ಮುಂದಿನ ಮೂರು ವರ್ಷಗಳಲ್ಲಿ 3 ಕೋಟಿ ಹೊಸ ಬಳಕೆದಾರರನ್ನು ತಲುಪುವ ಗುರಿ ಹೊಂದಿದೆ. ಯುಪಿಐ ಬಿಲ್ ಪಾವತಿ, ಆನ್‌ಲೈನ್ ರಿಚಾರ್ಜ್, ಸಾಲ, ವಿಮೆ ಮತ್ತು ಹೂಡಿಕೆಯಂತಹ ಹಲವು ಸೌಲಭ್ಯಗಳನ್ನು ನೀಡುತ್ತದೆ. ಈ ಅಪ್ಲಿಕೇಷನ್ ಆ್ಯಂಡ್ರಾಯ್ಡ್ ಮತ್ತು ಐಒಎಸ್‌ಗಳಲ್ಲಿ ಲಭ್ಯವಿದೆ.

ಕಳೆದ ಎರಡು ವರ್ಷದಲ್ಲಿ ಆದಿತ್ಯ ಬಿರ್ಲಾ ಕ್ಯಾಪಿಟಲ್ ಗಮನಾರ್ಹ ಮೈಲಿಗಲ್ಲನ್ನು ಸಾಧಿಸಿದೆ. ಎನ್‌ಬಿಎಫ್‌ಸಿಯ ಆಸ್ತಿ ನಿರ್ವಹಣಾ ಮೌಲ್ಯವು ಸುಮಾರು ಎರಡು ಪಟ್ಟು ಹೆಚ್ಚಳವಾಗಿದ್ದು, ₹1 ಲಕ್ಷ ಕೋಟಿಗೆ ಏರಿಕೆಯಾಗಿದೆ. ಇದು ದೇಶದ ನಾಲ್ಕನೇ ಅತಿದೊಡ್ಡ ಎನ್‌ಬಿಎಫ್‌ಸಿಯಾಗಿದೆ.

2023ರ ಡಿಸೆಂಬರ್ 31ರ ವರದಿಯಂತೆ ಹೌಸಿಂಗ್ ಫೈನಾನ್ಸ್ ಸಾಲವು ಹಿಂದಿನ ಇದೇ ವರ್ಷಕ್ಕೆ ಹೋಲಿಸಿದರೆ ಶೇ 27ರಷ್ಟು ಬೆಳವಣಿಗೆ ಕಂಡಿದೆ. ಆರೋಗ್ಯ ವಿಮಾ ವ್ಯವಹಾರವು ಎರಡು ವರ್ಷದಲ್ಲಿ ಶೇ 43ರಷ್ಟು ವಾರ್ಷಿಕ ಸಂಯುಕ್ತ ಬೆಳವಣಿಗೆ ದರ (ಸಿಎಜಿಆರ್) ದಾಖಲಿಸಿದೆ ಎಂದು ಕಂಪನಿ ತಿಳಿಸಿದೆ.

2023–24ನೇ ಹಣಕಾಸು ವರ್ಷದ ಮೊದಲ ಮೂರು ತ್ರೈಮಾಸಿಕದಲ್ಲಿ ಜೀವ ವಿಮಾ ವ್ಯವಹಾರದ ಒಟ್ಟು ಪ್ರೀಮಿಯಂ ₹11,101 ಕೋಟಿಯಾಗಿದ್ದು, ಸಂಪತ್ತಿನ ನಿರ್ವಹಣಾ ಮೌಲ್ಯ (ಎಯುಎಂ) ₹3.11 ಲಕ್ಷ ಕೋಟಿ ಆಗಿದೆ. ಎಬಿಸಿಎಲ್ ವರಮಾನವು ಶೇ 22ರಷ್ಟು ಏರಿಕೆಯಾಗಿದ್ದು, ₹23,566 ಕೋಟಿ ದಾಖಲಿಸಿದೆ ಎಂದು ಕಂಪನಿ ತಿಳಿಸಿದೆ.

‘ಆದಿತ್ಯ ಬಿರ್ಲಾ ಕ್ಯಾಪಿಟಲ್‌ನ ಹಣಕಾಸು ಸೇವೆಗಳ ವ್ಯವಹಾರವು ವೇಗವಾಗಿ ಬೆಳೆಯುತ್ತಿದೆ. ಎಬಿಸಿಡಿ ಡಿ2ಸಿ ವೇದಿಕೆಯು ಹಣಕಾಸು ಸೇವಾ ವಲಯದಲ್ಲಿ ನಾಯಕತ್ವದ ಸ್ಥಾನವನ್ನು ಪಡೆದುಕೊಳ್ಳುತ್ತಿದೆ’ ಎಂದು ಸಮೂಹದ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ತಿಳಿಸಿದ್ದಾರೆ.

‘ಗ್ರಾಹಕರಿಗೆ ಡಿಜಿಟಲ್ ರೂಪದಲ್ಲಿ ಹಣಕಾಸಿನ ಅಗತ್ಯತೆ ಪೂರೈಸಲು ಸಹಾಯ ಮಾಡಲಾಗುತ್ತಿದೆ. ಬಳಕೆದಾರರ ಸ್ನೇಹಿ, ಉತ್ತಮ ಕಾರ್ಯ ಚಟುವಟಿಕೆಗಳಿಂದ ಕೂಡಿದ್ದು, ಪ್ಲಾಟ್‌ಫಾರ್ಮ್ ಮೊಬೈಲ್ ಅಪ್ಲಿಕೇಷನ್, ವೆಬ್‌ಸೈಟ್ ಸೇರಿದಂತೆ ಹಲವು ವಿಧಾನದಲ್ಲಿ ವಿಭಿನ್ನ ಅನುಭವವನ್ನು ನೀಡುತ್ತದೆ’ ಎಂದು ಆದಿತ್ಯ ಬಿರ್ಲಾ ಕ್ಯಾಪಿಟಲ್‌ನ ಸಿಇಒ ವಿಶಾಖಾ ಮೂಲ್ಯೆ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.