ಬೆಂಗಳೂರು: ಏರ್ಟೆಲ್ 5ಜಿ ಪ್ಲಸ್ ಸೇವೆಯನ್ನು ಆರಂಭಿಸಿದ ಒಂದು ವರ್ಷದ ಒಳಗಾಗಿಯೇ ರಾಜ್ಯದ 31 ಜಿಲ್ಲೆಗಳಲ್ಲಿ 5ಜಿ ಸಂಪರ್ಕ ಕಲ್ಪಿಸಲಾಗಿದೆ. ಒಟ್ಟು 51 ಲಕ್ಷ ಗ್ರಾಹಕರು 5ಜಿ ಬಳಸುತ್ತಿದ್ದಾರೆ ಎಂದು ಭಾರ್ತಿ ಏರ್ಟೆಲ್ ಕಂಪನಿಯು ಗುರುವಾರ ಹೇಳಿದೆ.

‘ರಾಜ್ಯದಲ್ಲಿ ಗರಿಷ್ಠ ವೇಗದ 5ಜಿ ತಂತ್ರಜ್ಞಾನವನ್ನು ನೀಡಿದ ಮೊದಲ ದೂರಸಂಪರ್ಕ ಕಂಪನಿ ನಮ್ಮದು. ಏರ್ಟೆಲ್ 5ಜಿ ಪ್ಲಸ್ ನೆಟ್ವರ್ಕ್ ಆಯ್ಕೆ ಮಾಡಿಕೊಂಡಿರುವ ರಾಜ್ಯದ 51 ಲಕ್ಷ ಗ್ರಾಹಕರಿಗೆ ಧನ್ಯವಾದ ಹೇಳಲು ಬಯಸುತ್ತೇವೆ. ಅತ್ಯಾಧುನಿಕ 5ಜಿ ತಂತ್ರಜ್ಞಾನಗಳನ್ನು ನೀಡುವ ಮೂಲಕ ನಮ್ಮ ಗ್ರಾಹಕರನ್ನು ತೃಪ್ತಿಪಡಿಸುವುದೇ ಕಂಪನಿಯ ಆದ್ಯತೆ’ ಎಂದು ಭಾರ್ತಿ ಏರ್ಟೆಲ್ನ ಕರ್ನಾಟಕದ ಸಿಇಒ ವಿವೇಕ್ ಮೆಹೆಂದೀರತ್ತ್ ಹೇಳಿದ್ದಾರೆ.

ದೇಶದ ಎಲ್ಲಾ ಜಿಲ್ಲೆಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಇದೀಗ ಏರ್ಟೆಲ್ನ 5ಜಿ ಸೇವೆಗಳು ಲಭ್ಯವಾಗಿವೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.