ಮುಂಬೈ: ಭಾರತದ ಮೊದಲ ಆ್ಯಪಲ್ ಸ್ಟೋರ್ ಮುಂಬೈನಲ್ಲಿ ಆರಂಭವಾಗಲಿದೆ. ಮುಂಬೈನ ಜಿಯೊ ವರ್ಲ್ಡ್ ಡ್ರೈವ್ ಮಾಲ್ನಲ್ಲಿ ಈ ಸ್ಟೋರ್ ಪ್ರಾರಂಭವಾಗಲಿದ್ದು, ಮಳಿಗೆ ಹೇಗಿರಲಿದೆ ಎನ್ನುವ ಚಿತ್ರವನ್ನು ಬುಧವಾರ ಆ್ಯಪಲ್ ಬಿಡುಗಡೆ ಮಾಡಿದೆ.

‘ಆ್ಯಪಲ್ ಬಿಕೆಸಿ‘ ಎಂದು ಸ್ಟೋರ್ಗೆ ಹೆಸರಿಡಲಾಗಿದೆ. ಸ್ಟೋರ್ನ ವಿನ್ಯಾಸವು ಮುಂಬೈನ ಪ್ರಸಿದ್ಧ ‘ಕಪ್ಪು–ಹಳದಿ ಟಾಕ್ಸಿ‘ಯಿಂದ ಪ್ರೇರಣೆಗೊಂಡಿದೆ.

ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಸಲುವಾಗಿ ಅತ್ಯಾಧುನಿಕವಾಗಿ ಮಳಿಗೆಯನ್ನು ಡಿಸೈನ್ ಮಾಡಲಾಗಿದ್ದು, ಪ್ರವೇಶ ದ್ವಾರದಲ್ಲಿ ‘ಹಲೋ ಮುಂಬೈ‘ ಎಂದು ಬರೆಯಲಾಗಿದೆ.

ಏಪ್ರಿಲ್ ತಿಂಗಳಿನಲ್ಲಿಯೇ ಮಳಿಗೆ ಉದ್ಘಾಟನೆಯಾಗಲಿದೆ. ಇದಾದ ಬಳಿಕ ಎರಡನೇ ಮಳಿಗೆ ದೆಹಲಿಯಲ್ಲಿ ತೆರೆಯಲಾಗುತ್ತದೆ ಎಂದು ಮಾಹಿತಿ ಲಭಿಸಿದೆ.

ದೇಶದ ಮೊದಲ ಸ್ಟೋರ್ ಉದ್ಘಾಟನೆಯನ್ನು ಸಂಭ್ರಮಿಸಲು, ಆ್ಯಪಲ್ ಬಳಕೆದಾರರು ’ಆ್ಯಪಲ್ ಬಿಕೆಸಿ‘ ವಾಲ್ಪೇಪರ್ ಅನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅದಲ್ಲದೆ ಆ್ಯಪಲ್ ಮ್ಯೂಸಿಕ್ನಲ್ಲಿ ಹೊಸ ಪ್ಲೇಲಿಸ್ಟ್ ಕೂಡ ಕಾಣಬಹುದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.