ನವದೆಹಲಿ: ತನ್ನ ವಹಿವಾಟು ಲೆಕ್ಕಪತ್ರ ಪರಿಶೋಧಕ ಸಂಸ್ಥೆ ‘ಗ್ರಾಂಟ್ ಥಾರ್ಟನ್’, ₹ 6,182 ಕೋಟಿ ಮೊತ್ತದ ಮತ್ತೊಂದು ಅಕ್ರಮ ವ್ಯವಹಾರವನ್ನು ಪತ್ತೆ ಮಾಡಿದೆ ಎಂದು ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ (ಡಿಎಚ್ಎಫ್ಎಲ್) ಸೋಮವಾರ ತಿಳಿಸಿದೆ.

ಆರ್ಬಿಐ ನೇಮಿಸಿರುವ ಕಂಪನಿಯ ಆಡಳಿತಾಧಿಕಾರಿಯು ಗ್ರಾಂಟ್ ಥಾರ್ಟನ್ ಸಂಸ್ಥೆಯಿಂದ ಅಕ್ರಮ ವ್ಯವಹಾರಕ್ಕೆ ಸಂಬಂಧಿಸಿದ ಪ್ರಾಥಮಿಕ ವರದಿಯನ್ನು ಪಡೆದುಕೊಂಡಿದ್ದಾರೆ ಎಂದು ಡಿಎಚ್ಎಫ್ಎಲ್ ಷೇರುಪೇಟೆಗೆ ಮಾಹಿತಿ ನೀಡಿದೆ.

ಡಿಎಚ್ಎಫ್ಎಲ್ನಲ್ಲಿ ವಂಚನೆ ನಡೆದಿರುವುದು ಪತ್ತೆಯಾದ ಬಳಿಕ ಆಡಳಿತ ಮಂಡಳಿ ರದ್ದು ಮಾಡಿ ದಿವಾಳಿ ಸಂಹಿತೆಯಡಿ ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. ಕಂಪನಿಯಲ್ಲಿ ನಡೆದಿರುವ ವಂಚನೆಯ ಕುರಿತು ತನಿಖೆ ನಡೆಸಲು ಆಡಳಿತಾಧಿಕಾರಿಯು ಗ್ರಾಂಟ್ ಥಾರ್ಟನ್ ಸಂಸ್ಥೆಯನ್ನು ನೇಮಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.