ನವದೆಹಲಿ (ಪಿಟಿಐ): ಅಮೆಜಾನ್, ಫ್ಲಿಪ್ಕಾರ್ಟ್ನಂತಹ ಇ–ವಾಣಿಜ್ಯ ವೇದಿಕೆಗಳು ತಮ್ಮ ಮೂಲಕ ಮಾರಾಟವಾಗುವ ಉತ್ಪನ್ನಗಳಿಗೆ ಹಣ ಕೊಟ್ಟು ಬರೆಸಿರುವ ವಿಮರ್ಶೆಗಳನ್ನು (ರಿವ್ಯೂ) ಗ್ರಾಹಕರಿಗೆ ಸ್ಪಷ್ಟವಾಗಿ,ಸ್ವಯಂಪ್ರೇರಿತವಾಗಿ ತಿಳಿಸಬೇಕಿದೆ.

ನಕಲಿ ರಿವ್ಯೂಗಳ ಹಾವಳಿಯನ್ನು ತಡೆಯುವ ಉದ್ದೇಶದಿಂದ ಕೇಂದ್ರ ಸರ್ಕಾರವು ಹೊಸ ನಿಯಮಗಳನ್ನು ರೂಪಿಸಿದೆ. ಈ ನಿಯಮಗಳು ಶುಕ್ರವಾರದಿಂದ ಜಾರಿಗೆ ಬರಲಿವೆ. ನಿಯಮಗಳನ್ನು ಪಾಲಿಸುವುದು ಈಗ ಐಚ್ಛಿಕವಾಗಿರಲಿದೆ. ಆದರೆ, ಆನ್ಲೈನ್ ವೇದಿಕೆಗಳಲ್ಲಿ ನಕಲಿ ರಿವ್ಯೂ ಹಾವಳಿ ಮುಂದುವರಿದರೆ, ನಿಯಮ ಪಾಲನೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಲಿದೆ.

ಭಾರತೀಯ ಗುಣಮಟ್ಟ ಮಾಪನ ಸಂಸ್ಥೆಯು (ಬಿಐಎಸ್) ಹೊಸ ನಿಯಮಗಳನ್ನು ರೂಪಿಸಿದೆ ಎಂದು ಗ್ರಾಹಕ ವ್ಯವ
ಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಇ–ವಾಣಿಜ್ಯ ವೇದಿಕೆಗಳು ಹಾಗೂ ಇತರ ಸಂಸ್ಥೆಗಳು ಈ ಮಾನದಂಡಗಳನ್ನು ಅನುಸರಿಸುತ್ತಿವೆಯೇ ಎಂಬುದನ್ನು ಪರಿಶೀಲಿ
ಸಲು ವ್ಯವಸ್ಥೆಯೊಂದನ್ನು 15 ದಿನಗಳಲ್ಲಿ ರೂಪಿಸಲಾಗುವುದು ಎಂದಿದ್ದಾರೆ.

ಇ–ವಾಣಿಜ್ಯ ವೇದಿಕೆಗಳು ತಾವು ಈ ಮಾನದಂಡಗಳನ್ನು ಪಾಲಿಸುತ್ತಿರುವ ಬಗ್ಗೆ ಪ್ರಮಾಣಪತ್ರ ಬೇಕು ಎಂದು ಬಿಐಎಸ್ಗೆ ಅರ್ಜಿ ಸಲ್ಲಿಸಬಹುದು.

‘ನಾವು ಉದ್ಯಮವನ್ನು ಹಾಳುಮಾಡಲು ಬಯಸುತ್ತಿಲ್ಲ. ಆದರೆ, ಈ ನಿಯಮಗಳನ್ನು ಕಂಪನಿಗಳು ಪಾಲಿಸುತ್ತವೆಯೇ ಎಂಬುದನ್ನು ಮೊದಲು ಪರಿಶೀಲಿಸುತ್ತೇವೆ. ಹಾವಳಿ ಮುಂದುವರಿದಲ್ಲಿ ಭವಿಷ್ಯದಲ್ಲಿ ಈ ನಿಯಮಗಳ ಪಾಲನೆ ಕಡ್ಡಾಯಗೊಳಿಸಬಹುದು’ ಎಂದು ತಿಳಿಸಿದ್ದಾರೆ.

ಬಿಐಎಸ್ ಸಂಸ್ಥೆಯು ರಿವ್ಯೂಗಳನ್ನು ‘ಬಯಸಿ ಪಡೆದಿರುವ’ ಹಾಗೂ ‘ಬಯಸದೇ ಬಂದಿರುವ’ ಎಂದು ವರ್ಗೀಕರಿಸಿದೆ. ‘ರಿವ್ಯೂಗಳು ನಿಖರವಾಗಿರಬೇಕು, ತಪ್ಪುದಾರಿಗೆ ಎಳೆಯುವಂತಿರಬಾರದು. ರಿವ್ಯೂ ಬರೆದಿರುವವರ ಗುರುತನ್ನು ಅವರ ಅನುಮತಿಯಿಲ್ಲದೆ ಬಹಿರಂಗಪಡಿಸಬಾರದು. ರಿವ್ಯೂಗಳ ಸಂಗ್ರಹವು ನಿಷ್ಪಕ್ಷಪಾತವಾಗಿ ಇರಬೇಕು’ ಎಂದು ಸಿಂಗ್ ಹೇಳಿದ್ದಾರೆ.

ರಿವ್ಯೂ ಖರೀದಿಸಿದ್ದಾದರೆ, ರಿವ್ಯೂಬರೆದವನಿಗೆ ಹಣ ಅಥವಾ ಬಹುಮಾನ ನೀಡುವಂತಿದ್ದರೆ ಅದನ್ನು ಗ್ರಾಹಕರಿಗೆ ಸ್ಪಷ್ಟವಾಗಿ ತಿಳಿಸಬೇಕಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.