ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್ಒ) 2024ರ ಜನವರಿಯಲ್ಲಿ 16.02 ಲಕ್ಷ ಚಂದಾದಾರರು ಸೇರ್ಪಡೆಯಾಗಿದ್ದಾರೆ.

ಜನವರಿಯಲ್ಲಿ ಸುಮಾರು 8.08 ಲಕ್ಷ ಸದಸ್ಯರು ಮೊದಲ ಬಾರಿಗೆ ನೋಂದಣಿ ಮಾಡಿಕೊಂಡಿದ್ದಾರೆ ಎಂದು ಕಾರ್ಮಿಕ ಸಚಿವಾಲಯ ತಿಳಿಸಿದೆ.

18–25ರ ವಯೋಮಾನದವರ ನೋಂದಣಿಯು, ಸೇರ್ಪಡೆಗೊಂಡ ಹೊಸ ಸದಸ್ಯರಲ್ಲಿ ಶೇ 56.41ರಷ್ಟಿದೆ. ಇದು ಹೆಚ್ಚಿನ ಯುವಜನರು ಕೆಲಸಕ್ಕೆ ಸೇಪರ್ಡೆಯಾಗುತ್ತಿರುವುದನ್ನು ಸೂಚಿಸುತ್ತದೆ. ಅಂದಾಜು 12.17 ಲಕ್ಷ ಸದಸ್ಯರು ಇಪಿಎಫ್ಒದಿಂದ ಹೊರ ನಡೆದಿದ್ದಾರೆ ಮತ್ತು ನಂತರ ಮರು ಸೇಪರ್ಡೆಯಾಗಿದ್ದಾರೆ ಎಂದು ವೇತನದಾರರ ಅಂಕಿ ಅಂಶಗಳು ತಿಳಿಸಿವೆ. 8.08 ಲಕ್ಷ ಹೊಸ ಸದಸ್ಯರಲ್ಲಿ 2.05 ಲಕ್ಷ ಮಹಿಳೆಯರಿದ್ದಾರೆ.

ಉದ್ಯಮವಾರು ಮಾಸಿಕ ಅಂಕಿ ಅಂಶವು, ತಯಾರಿಕೆ, ಮಾರುಕಟ್ಟೆ ಸೇವೆ, ಆಸ್ಪತ್ರೆಗಳು ಇತ್ಯಾದಿ ಕೆಲಸದಲ್ಲಿ ತೊಡಗಿರುವವರ ವಿವರ ನೀಡುತ್ತಿದೆ. ಒಟ್ಟು ಸದಸ್ಯತ್ವದಲ್ಲಿ, ಸುಮಾರು ಶೇ 40.71ರಷ್ಟು ಪರಿಣತ ಸೇವೆಗಳನ್ನು ಒಳಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.