ನವದೆಹಲಿ: ನೌಕರರ ಭವಿಷ್ಯ ನಿಧಿ ಸಂಘಟನೆಗೆ (ಇಪಿಎಫ್‌ಒ) ಜುಲೈನಲ್ಲಿ 20 ಲಕ್ಷ ಸದಸ್ಯರು ಸೇರ್ಪಡೆಯಾಗಿದ್ದಾರೆ ಎಂದು ಕೇಂದ್ರ ಕಾರ್ಮಿಕ ಸಚಿವ ಮನಸುಖ್ ಮಾಂಡವಿಯ ಸೋಮವಾರ ತಿಳಿಸಿದ್ದಾರೆ.

10.52 ಲಕ್ಷ ಉದ್ಯೋಗಿಗಳು ಮೊದಲ ಬಾರಿಗೆ ಇದರ ಸದಸ್ಯರಾಗಿದ್ದಾರೆ. 18ರಿಂದ 25ರ ವಯೋಮಾನದವರು 8.77 ಲಕ್ಷ ಇದ್ದಾರೆ. ಇವರಲ್ಲಿ 6.25 ಲಕ್ಷ ಉದ್ಯೋಗಿಗಳು ಹೊಸ ಸೇರ್ಪಡೆಯಾಗಿದ್ದಾರೆ. ಇದು ಹೆಚ್ಚಿನ ಯುವಜನರು ಕೆಲಸಕ್ಕೆ ಸೇರ್ಪಡೆ ಆಗುತ್ತಿರುವುದನ್ನು ಸೂಚಿಸುತ್ತದೆ ಎಂದು ತಿಳಿಸಿದ್ದಾರೆ.

ಜುಲೈನಲ್ಲಿ ಸೇರ್ಪಡೆಯಾದ 4.41 ಲಕ್ಷ ಮಹಿಳಾ ಸದಸ್ಯರಲ್ಲಿ 3.05 ಲಕ್ಷ ಹೊಸ ಸದಸ್ಯರಾಗಿದ್ದಾರೆ ಎಂದು ಹೇಳಿದ್ದಾರೆ.

ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಹರಿಯಾಣ ಮತ್ತು ಗುಜರಾತ್ ಸದಸ್ಯರ ಸೇರ್ಪಡೆಯಲ್ಲಿ ಶೇ 59ರಷ್ಟು (11.82 ಲಕ್ಷ ಸದಸ್ಯರು) ಪಾಲು ಹೊಂದಿವೆ. ಇದರಲ್ಲಿ ಮಹಾರಾಷ್ಟ್ರ ಮುಂಚೂಣಿಯಲ್ಲಿದ್ದು, ಶೇ 20ರಷ್ಟು ಪಾಲು ಹೊಂದಿದೆ.

ತಯಾರಿಕೆ, ಕಂಪ್ಯೂಟರ್ ಸೇವೆಗಳು, ನಿರ್ಮಾಣ, ಎಂಜಿನಿಯರಿಂಗ್, ಬ್ಯಾಂಕಿಂಗ್ (ರಾಷ್ಟ್ರೀಕೃತವಲ್ಲದ) ಮತ್ತು ಖಾಸಗಿ ವಲಯದ ವಿದ್ಯುನ್ಮಾನ ಮಾಧ್ಯಮದಂತಹ ಕ್ಷೇತ್ರದ ಸೇರ್ಪಡೆಯಲ್ಲಿ ಏರಿಕೆಯಾಗಿದೆ.

ಮಾನವ ಸಂಪನ್ಮೂಲ ಪೂರೈಕೆದಾರರು, ಗುತ್ತಿಗೆದಾರರು ಮತ್ತು ಭದ್ರತಾ ಸೇವೆಗಳು ಸೇರಿ ಪರಿಣತ ಸೇವೆಗಳ ಕ್ಷೇತ್ರಗಳಲ್ಲಿ ಸೇರ್ಪಡೆಯಾದವರ ಪ್ರಮಾಣ ಶೇ 39ರಷ್ಟಿದೆ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.