ಬೆಂಗಳೂರು: ನವರಾತ್ರಿ, ದೀಪಾವಳಿ ಹಬ್ಬ ಬಂತೆಂದರೆಆನ್ಲೈನ್ನಲ್ಲಿ ಖರೀದಿ ನಡೆಸುವವರ ಸಂಭ್ರಮ ಇಮ್ಮಡಿಯಾಗುತ್ತದೆ. ಫ್ಲಿಪ್ಕಾರ್ಟ್, ಅಮೆಜಾನ್ ತರಹದ ಪ್ರಮುಖ ಇ–ಕಾಮರ್ಸ್ ಕಂಪನಿಗಳು ಈ ಸಂದರ್ಭದಲ್ಲಿ ವಿಶೇಷ ಮಾರಾಟ ಕೊಡುಗೆಗಳನ್ನು ನೀಡುತ್ತವೆ.

ಪ್ರತಿ ಹಬ್ಬದ ಮಾರಾಟದಲ್ಲಿಯೂ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಮಧ್ಯೆ ತೀವ್ರ ಪೈಪೋಟಿ ಇರುತ್ತದೆ. ಹೆಚ್ಚಿನ ಗ್ರಾಹಕರನ್ನು ಸೆಳೆಯಲು ಕಂಪನಿಗಳು ಸಕಲ ಸಿದ್ಧತೆ ನಡೆಸಿವೆ. ಫ್ಲಿಪ್ಕಾರ್ಟ್ ಈಗಾಗಲೇ ತನ್ನ ‘ಬಿಗ್ ಬಿಲಿಯನ್ ಡೇ’ ಪ್ರಕಟಿಸಿದೆ. ಅಮೆಜಾನ್, ತನ್ನ ’ಗ್ರೇಟ್ ಇಂಡಿಯನ್ ಫೆಸ್ಟಿವಲ್’ನ ಆರಂಭವನ್ನು ಇನ್ನಷ್ಟೇ ಘೋಷಿಸಬೇಕಿದೆ.

ತೀವ್ರ ಪೈಪೋಟಿ:ಪ್ರತಿ ಬಾರಿಯೂ ಈ ಸಂದರ್ಭದಲ್ಲಿ ಅತಿ ಹೆಚ್ಚಿನ ಮಾರಾಟದ ನಿರೀಕ್ಷೆ ಹೊಂದಿರುವುದಾಗಿ ಎರಡೂ ಕಂಪನಿಗಳು ಹೇಳಿಕೊಳ್ಳುವುದು ಸಹಜವಾಗಿದೆ.ಕಳೆದ ವರ್ಷವಿಶೇಷಹಬ್ಬದಮಾರಾಟಸಂದರ್ಭದಲ್ಲಿ ಫ್ಲಿಪ್ಕಾರ್ಟ್ ಮತ್ತು ಅಮೆಜಾನ್ ಇಂಡಿಯಾ
₹ 15 ಸಾವಿರ ಕೋಟಿ ಮೊತ್ತದ ಮಾರಾಟನಡೆಸಿವೆ ಎಂದು ರೆಡ್ಸೀರ್ ಕನ್ಸಲ್ಟಿಂಗ್ ಸಂಸ್ಥೆ ವರದಿ ಮಾಡಿತ್ತು.

ಇದನ್ನೂ ಓದಿ:ಐಫೋನ್ 11 ಸರಣಿ ಬಿಡುಗಡೆ

2018ರಲ್ಲಿ ಸ್ಮಾರ್ಟ್ಫೋನ್, ಗೃಹೋಪಯೋಗಿ ಸಲಕರಣೆ ಮತ್ತು ಫ್ಯಾಷನ್ ಉತ್ಪನ್ನಗಳು ದಾಖಲೆ ಮಾರಾಟವಾಗಿದ್ದವು ಎಂದು ಎರಡೂ ಸಂಸ್ಥೆಗಳು ಹೇಳಿ ಕೊಂಡಿದ್ದವು. 2017ಕ್ಕೆ ಹೋಲಿಸಿದರೆ 2018ರಲ್ಲಿ ಮಾರಾಟವು ಶೇ 64ರಷ್ಟು ಹೆಚ್ಚಾಗಿದೆ. 2017ರಲ್ಲಿ ₹ 10,325 ಕೋಟಿ ವಹಿವಾಟು ನಡೆದಿತ್ತು ರೆಡ್ಸೀರ್ ಕನ್ಸಲ್ಟಿಂಗ್ ತಿಳಿಸಿದೆ.

29 ರಿಂದ ಆರಂಭ:ಭಾರತದಲ್ಲಿ ಮುಂಚೂಣಿ ಇ–ಕಾಮರ್ಸ್ ಕಂಪನಿಯಾಗಿರುವ ಫ್ಲಿಪ್ಕಾರ್ಟ್ನ ಅತ್ಯಂತ ಜನಪ್ರಿಯ ಮಾರಾಟ ಉತ್ಸವವಾಗಿರುವ ‘ದಿ ಬಿಗ್ ಬಿಲಿಯನ್ ಡೇಸ್‘ ಇದೇ 29ರಿಂದ ಅಕ್ಟೋಬರ್ 4ರವರೆಗೆ ನಡೆಯಲಿದೆ. ಫ್ಲಿಪ್ಕಾರ್ಟ್ ಪ್ಲಸ್ ಗ್ರಾಹಕರಿಗೆ ಮಾರಾಟ ಅವಧಿ ಆರಂಭವಾಗುವುದಕ್ಕೂ ನಾಲ್ಕು ಗಂಟೆ ಮೊದಲೇ ಖರೀದಿಗೆ ಅವಕಾಶ ಇರುತ್ತದೆ.

ಡಿಜಿಟಲ್ ಪಾವತಿ:ಡಿಜಿಟಲ್ ಪಾವತಿಗೆ ಉತ್ತೇಜನ ನೀಡಲು ಆ್ಯಕ್ಸಿಸ್ ಮತ್ತು ಐಸಿಐಸಿಐ ಬ್ಯಾಂಕ್ಗಳ ಜತೆ ಫ್ಲಿಪ್ಕಾರ್ಟ್ ಒಪ್ಪಂದ ಮಾಡಿಕೊಂಡಿದೆ.ಕಾರ್ಡ್ಲೆಸ್ ಕ್ರೆಡಿಟ್, ಫ್ಲಿಪ್ಕಾರ್ಟ್ ಪೇ ಲೇಟರ್ ಮತ್ತು ಹೆಚ್ಚುವರಿ ಹೊರೆ ಇರದ ಇಎಂಐ ಆಯ್ಕೆ ಇದೆ. ಆ್ಯಕ್ಸಿಸ್ ಬ್ಯಾಂಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಹಾಗೂ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಹೊಂದಿರುವವರಿಗೆ ಶೇ 10ರಷ್ಟು ತಕ್ಷಣದ ರಿಯಾಯ್ತಿ ಇರಲಿದೆ.

ಬಿಗ್ ಬಿಲಿಯನ್ ದಿನಗಳಲ್ಲಿ ಮೊದಲ ಬಾರಿಗೆ ಗ್ರಾಹಕರು ಉಪಕರಣಗಳಿಗೆ ವಿಮೆಯನ್ನು ಖರೀದಿಸಬಹುದಾಗಿದೆ.10,000ಕ್ಕೂ ಹೆಚ್ಚಿನ ಉತ್ಪನ್ನಗಳು ಖರೀದಿಗೆ ಲಭ್ಯವಿರಲಿವೆ.

ಫ್ಲಿಪ್ಕಾರ್ಟ್ ಸಮರ್ಥ್:ಫ್ಲಿಪ್ಕಾರ್ಟ್ ಸಮರ್ಥ್ ಮೂಲಕ ಮೊದಲ ಬಾರಿಗೆ ದೇಶಿ ಕಲಾವಿದರು, ನೇಕಾರರು, ಕರಕುಶಲಕರ್ಮಿಗಳು ಈ ಉತ್ಸವದಲ್ಲಿ ಭಾಗವಹಿಸಬಹುದಾಗಿದೆ.

‘ಪ್ರತಿ ವರ್ಷ`ದಿ ಬಿಗ್ ಬಿಲಿಯನ್ ಡೇಸ್’ ಭಾರತದಲ್ಲಿನ ಹಬ್ಬದ ಸರಣಿಯ ಆರಂಭವನ್ನು ಸೂಚಿಸುತ್ತದೆ. ಪ್ರಸಕ್ತ ವರ್ಷ ಎಂಎಸ್ಎಂಇಗಳು, ಮಾರಾಟಗಾರರು ಮತ್ತು ಕಲಾವಿದರೊಂದಿಗೆ ನಾವು ಪಾಲುದಾರಿಕೆ ಮಾಡಿಕೊಂಡು ನಮ್ಮ ಗ್ರಾಹಕರಿಗೆ ಸರಿಸಾಟಿಯಿಲ್ಲದ ಆಯ್ಕೆ ಮತ್ತು ಬಳಕೆಯ ಅನುಭವವನ್ನು ನೀಡಲಿದ್ದೇವೆ’ ಎಂದುಫ್ಲಿಪ್ಕಾರ್ಟ್ ಗ್ರೂಪ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ತಿಳಿಸಿದ್ದಾರೆ.

ಖರೀದಿ ಆಯ್ಕೆಗಳು: ಸೆಪ್ಟೆಂಬರ್ 29ರಿಂದ ಫ್ಯಾಷನ್, ಟಿವಿ ಮತ್ತು ಉಪಕರಣಗಳು, ಗೃಹ ಮತ್ತು ಪೀಠೋಪಕರಣಗಳು, ಸೌಂದರ್ಯ, ಕ್ರೀಡೆಗಳು, ಆಟಿಕೆಗಳು, ಪುಸ್ತಕಗಳು, ಸ್ಮಾರ್ಟ್ ಡಿವೈಸ್ಗಳು, ವೈಯಕ್ತಿಕ ಆರೈಕೆ ಉಪಕರಣ.

ಸೆಪ್ಟೆಂಬರ್ 30ರಿಂದ: ಮೊಬೈಲ್ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಆಕ್ಸೆಸರಿಗಳು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.