ಬೆಂಗಳೂರು: ಇ–ಕಾಮರ್ಸ್ ತಾಣ ಫ್ಲಿಪ್ಕಾರ್ಟ್ನ ಬಹು ನಿರೀಕ್ಷಿತ ‘ದಿ ಬಿಗ್ ಬಲಿಯನ್ ಡೇಸ್’ನ 10ನೇ ಆವೃತ್ತಿ ಶೀಘ್ರದಲ್ಲಿ ಆರಂಭವಾಗಲಿದ್ದು, ಗ್ರಾಹಕರ ಬೇಡಿಕೆಗಳನ್ನು ತ್ವರಿತಗತಿಯಲ್ಲಿ ಪುರೈಸಲು ಲಕ್ಷಕ್ಕೂ ಹೆಚ್ಚು ಜನರನ್ನು ನಿಯೋಜಿಸುವ ಮೂಲಕ ಉದ್ಯೋಗ ಸೃಷ್ಟಿ ಮಾಡುತ್ತಿದೆ ಎಂದು ಕಂಪನಿ ಹೇಳಿದೆ.

ಈ ಕುರಿತು ಪ್ರಕಟಣೆ ನೀಡಿರುವ ಕಂಪನಿ, ‘ಸಾಲುಸಾಲು ಹಬ್ಬದ ದಿನಗಳ ಸಂದರ್ಭದಲ್ಲಿ ಆಯೋಜಿಸಲಾಗುತ್ತಿರುವ ಬಿಗ್ ಬಿಲಿಯನ್ ಡೇಸ್ಗಾಗಿ ಸೃಷ್ಟಿಯಾಗುತ್ತಿರುವ ಉದ್ಯೋಗದಲ್ಲಿ ಅಂಗವಿಕಲರು, ಮಹಿಳೆಯರು ಮತ್ತು ಇತರರಿಗೂ ಉದ್ಯೋಗಗಳು ದೊರೆಯಲಿವೆ. ದೊಡ್ಡ ನಗರಗಳ ಜತೆಗೆ 3ನೇ ಹಂತದ ನಗರಗಳು ಹಾಗೂ ಅದರಾಚಿನ ಪ್ರದೇಶಗಳ ಜನರಿಗೂ ಇದರ ಲಾಭ ಸಿಗಲಿದೆ. ಹೀಗೆ ನೇಮಕಗೊಳ್ಳುವವರಿಗೆ ಅವರಿರುವ ಸ್ಥಳದಲ್ಲೇ ತರಬೇತಿ ಸಿಗಲಿದೆ. ಇದರಲ್ಲಿ ಪಿಒಎಸ್ ಯಂತ್ರಗಳು, ಸ್ಕ್ಯಾನರ್ಗಳು, ವಿವಿಧ ಮೊಬೈಲ್ ಅಪ್ಲಿಕೇಷನ್ಗಳ ನಿರ್ವಹಣೆ ಹಾಗೂ ಇತರ ಕಾರ್ಯಗಳನ್ನು ಕೈಗೊಳ್ಳುವ ಬಗ್ಗೆ ತರಬೇತಿಯನ್ನು ನೀಡಲಾಗುತ್ತದೆ’ ಎಂದಿದೆ.

ಈ ಕುರಿತು ಪ್ರತಿಕ್ರಿಯಿಸಿದ ಫ್ಲಿಪ್ಕಾರ್ಟ್ನ ಹಿರಿಯ ಉಪಾಧ್ಯಕ್ಷ ಹೇಮಂತ್ ಬದ್ರಿ, ‘ದಿ ಬಿಗ್ ಬಿಲಿಯನ್ ಡೇಸ್ ಮೂಲಕ ಲಕ್ಷಾಂತರ ಹೊಸ ಗ್ರಾಹಕರು ಇ–ಕಾಮರ್ಸ್ ಅನ್ನು ಬಳಸಿಕೊಳ್ಳಲು ಪೂರಕವಾಗಿದೆ. ಶೇ 40ಕ್ಕೂ ಹೆಚ್ಚು ವಸ್ತುಗಳನ್ನು ಚಿಲ್ಲರೆ ಮಾರಾಟದ ಮೂಲಕ ಮಾಡಲು ಈ ಬಾರಿ ಕ್ರಮ ಕೈಗೊಳ್ಳಲಾಗಿದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.