ನವದೆಹಲಿ: ಇದೇ 16ರಿಂದ 21ರವರೆಗೆ ಹಬ್ಬದ ಮಾರಾಟ ‘ದಿ ಬಿಗ್ ಬಿಲಿಯನ್ ಡೇಸ್’ ನಡೆಸುವುದಾಗಿ ವಾಲ್ಮಾರ್ಟ್ ಒಡೆತನದ ಇ–ಕಾಮರ್ಸ್ ಜಾಲತಾಣ ಫ್ಲಿಪ್ಕಾರ್ಟ್ ತಿಳಿಸಿದೆ.

ಎಂಎಎಸ್ಎಂಇ ಮತ್ತು ಮಾರಾಟಗಾರರ ಬೆಳವಣಿಗೆಗೆ ಅವಕಾಶ ಕಲ್ಪಿಸುವ ಜತೆಗೆ ಹಾಲಿ ಮತ್ತು ಹೊಸ ಗ್ರಾಹಕರಿಗೆ ವೈವಿಧ್ಯಮಯ ಉತ್ಪನ್ನಗಳನ್ನು ವಿತರಿಸುವ ಬಗ್ಗೆ ಗಮನ ನೀಡಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಎಸ್ಬಿಐ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ ಬಳಸಿ ಖರೀದಿಸಿದರೆ ಶೇ 10% ತ್ವರಿತ ರಿಯಾಯಿತಿ ಪಡೆಯಬಹುದು. ಪ್ರಮುಖ ಬ್ಯಾಂಕ್ಗಳ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ಗಳ ಬಡ್ಡಿರಹಿತ ಇಎಂಐ ಮೂಲಕ ಖರೀದಿಗೂ ಅವಕಾಶ ಕಲ್ಪಿಸಲಾಗುವುದು. ಪೇಟಿಎಂ ವಾಲೆಟ್ ಮತ್ತು ಪೇಟಿಎಂ ಯುಪಿಐ ಮೂಲಕ ಪಾವತಿಸುವ ಗ್ರಾಹಕರಿಗೆ ಕ್ಯಾಷ್ಬ್ಯಾಕ್ ಸಿಗಲಿದೆ.

‘ದೇಶದಲ್ಲಿ ಮತ್ತಷ್ಟು ಉದ್ಯೋಗಾವಕಾಶಗಳನ್ನುಸೃಷ್ಟಿಸುವ ಮೂಲಕ ಹಬ್ಬದ ಸಂಭ್ರಮವನ್ನು ವಿಸ್ತರಿಸಲು ಬಿಗ್ ಬಿಲಿಯನ್ ಡೇಸ್ ಸಜ್ಜಾಗಿದೆ. ಈ ಉತ್ಸವ ಮತ್ತು ಮಾರಾಟ 70,000 ನೇರ ಮತ್ತು ಲಕ್ಷಾಂತರ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸಲಿದೆ’ ಎಂದು ಫ್ಲಿಪ್ಕಾರ್ಟ್ ಸಮೂಹದ ಸಿಇಒ ಕಲ್ಯಾಣ್ ಕೃಷ್ಣಮೂರ್ತಿ ಹೇಳಿದ್ದಾರೆ.

ಈ ಬಾರಿಯ ಹಬ್ಬದ ಮಾರಾಟವು ದುಪ್ಪಟ್ಟಾಗುವ ನಿರೀಕ್ಷೆ ಇದೆ ಎಂದು ರೆಡ್ಶೀರ್ ಹೇಳಿದೆ. ಕಳೆದ ವರ್ಷದ ಸರಾಸರಿ ವಾಣಿಜ್ಯ ಮೌಲ್ಯ (ಜಿಎಂವಿ) ₹ 27,740 ಕೋಟಿ ಇತ್ತು. ಇದು ಈ ವರ್ಷ ₹ 51,100 ಕೋಟಿಗೆ ತಲುಪಲಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.