ಬೆಂಗಳೂರು: ಆನ್ಲೈನ್ ಮೂಲಕ ಹೋಟೆಲ್ ಕಾದಿರಿಸುವ ಸೇವೆ ಒದಗಿಸುತ್ತಿರುವ ಸಂಸ್ಥೆಗಳತಾರತಮ್ಯ ನೀತಿಯ ವಿರುದ್ಧ ಭಾರತೀಯ ಹೋಟೆಲ್ ಮತ್ತು ರೆಸ್ಟೋರೆಂಟ್ ಸಂಸ್ಥೆಗಳ ಮಹಾಒಕ್ಕೂಟದ (ಎಫ್ಎಚ್ಆರ್ಎಐ) ಹೋರಾಟಕ್ಕೆ ಬೆಂಗಳೂರಿನ ಇಂಡಿಯನ್ ಹೋಟೆಲ್ಸ್ ಆ್ಯಂಡ್ ಸರ್ವಿಸ್ಡ್ ಅಪಾರ್ಟ್ಮೆಂಟ್ಸ್ ಸಂಸ್ಥೆ (ಎಐಎಚ್ಎಸ್ಎ) ಬೆಂಬಲ ನೀಡಿದೆ.

ಮೇಕ್ಮೈಟ್ರಿಪ್ ಮತ್ತು ಗೋಇಬಿಬೊದಂತಹ ಸಂಸ್ಥೆಗಳು ಹೋಟೆಲ್ಗಳ ನಡುವೆ ಶುಲ್ಕ ನಿಗದಿಯ ಕುರಿತು ತಾರತಮ್ಯ ನೀತಿ ಅನುಸರಿಸುತ್ತಿರುವುದಲ್ಲದೇ ಹೆಚ್ಚು ಕಮೀಷನ್ ಪಡೆಯುತ್ತಿರುವುದರ ವಿರುದ್ಧ ಎಫ್ಎಚ್ಆರ್ಎಐ ಹೋರಾಟ ನಡೆಸಿ ಈ ಎರಡೂ ಸಂಸ್ಥೆಗಳಿಗೆ ಬಹಿಷ್ಕಾರ ಹಾಕಿತ್ತು. ಈ ಸಂಸ್ಥೆಗಳು ವೈಯಕ್ತಿಕವಾಗಿ ಪ್ರತಿಯೊಂದು ಹೋಟೆಲ್ಗಳನ್ನು ಸಂಪರ್ಕಿಸಿ ಮಾತುಕತೆ ನಡೆಸುತ್ತಿವೆ.

‘ಆನ್ಲೈನ್ ಸಂಸ್ಥೆಗಳು ಹೋಟೆಲ್ಗಳ ಕುರಿತು ಕಾರ್ಯಸಾಧುವಲ್ಲದ ನೀತಿ ಅನುಸರಿಸುತ್ತಿವೆ. ಇವುಗಳ ನೀತಿಯಿಂದಾಗಿ ಬಜೆಟ್ ಹೋಟೆಲ್ಗಳು ಸಂಕಷ್ಟಕ್ಕೆ ಗುರಿಯಾಗಿವೆ’ ಎಂದು ‘ಎಐಎಚ್ಎಸ್ಎ’ ಅಧ್ಯಕ್ಷ ಸೂರ್ಯ ಪ್ರಕಾಶಂ ಪೊಕ್ಕಳಿ ಟೀಕಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.